ಭುವನೇಶ್ವರ:ಅಸ್ತಿತ್ವದಲ್ಲಿರುವ ವ್ಯವಸ್ಥೆಯಲ್ಲಿನ ಲೋಷದೋಷಗಳನ್ನು ಸರಿಪಡಿಸಿ ಅತ್ಯಾಧುನಿಕ ರೀತಿಯ ಆನ್​​ಲೈನ್ ಪರೀಕ್ಷಾ ವಿಧಾನವನ್ನು ರಚಿಸಿರುವುದಾಗಿ ಭುವನೇಶ್ವರ ಐಐಟಿ ತಿಳಿಸಿದೆ.ಈ ವಿಧಾನದ ಮೂಲಕ ತರಗತಿ ಪರೀಕ್ಷೆಗಳು, ಸೆಮಿಸ್ಟರ್ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆಗಳೂ ಸೇರಿದಂತೆ ಎಲ್ಲ ಪ್ರಕಾರದ ಪರೀಕ್ಷೆಗಳನ್ನು ನಡೆಸಬಹುದು ಎಂದು ಸಂಸ್ಥೆ ತಿಳಿಸಿದೆ.
ಕೇವಲ ಒಂದೇ ರೀತಿಯ ಪರೀಕ್ಷಾ ವಿಧಾನ ಅವಲಂಬಿಸುವುದು, ಮೇಲ್ವಿಚಾರಣೆಯಲ್ಲಿ ವಿಶ್ವಾಸಾರ್ಹತೆ ಕೊರತೆ, ಆನ್​​ಲೈನ್ ಪರೀಕ್ಷೆ ವಿಧಾನದಲ್ಲಿ ಸಂಪರ್ಕ ಕೊರತೆಯಂತಹ ಸಮಸ್ಯೆಗಳಿಂದ ಈ ವಿಧಾನ ಮುಕ್ತವಾಗಿರಲಿದೆ ಎಂದು ಐಐಟಿ ತಿಳಿಸಿದೆ.
ಇದನ್ನೂ ಓದಿ:ತಲೆ ಮೇಲೆ ಹಲಸಿನ ಹಣ್ಣು ಬಿತ್ತು; ಆಸ್ಪತ್ರೆಗೆ ಹೋದ್ರೆ ಕರೊನಾ ಪಾಸಿಟಿವ್ ಬಂತು!
ಉದ್ದೇಶಿತ ಆನ್‌ಲೈನ್ ಪರೀಕ್ಷಾ ವ್ಯವಸ್ಥೆಯು ವಿಶ್ವಾಸಾರ್ಹವಾಗಿದ್ದು ಸರಳವಾದ ಕಂಪ್ಯೂಟರ್ ಆಧಾರಿತ ಪರೀಕ್ಷೆಯಿಂದ ಹಿಡಿದು ವಿವರವಾದ ಸಾಂಪ್ರದಾಯಿಕ ಪರೀಕ್ಷೆಗಳವರೆಗೆ ವ್ಯಾಪಕ ರೀತಿಯ ಪರೀಕ್ಷೆಗಳನ್ನು ನಡೆಸಲು ಈ ವಿಧಾನವನ್ನು ಬಳಸಬಹುದು ಎಂದು ನಿರ್ದೇಶಕ ಆರ್.ವಿ.ರಾಜ ಕುಮಾರ್ ತಿಳಿಸಿದ್ದಾರೆ.
31 ವಿಷಯಗಳ ಪ್ರಶ್ನೆ ಪತ್ರಿಕೆಗಳು ಮತ್ತು 20 ಮೇಲ್ವಿಚಾರಕರೊಂದಿಗೆ ದೇಶಾದ್ಯಂತ ಸುಮಾರು 240 ವಿದ್ಯಾರ್ಥಿಗಳಿಗೆ ಅಣಕು ಪರೀಕ್ಷೆಯನ್ನು ನಡೆಸುವ ಮೂಲಕ ಸಂಸ್ಥೆ ಸಂಪೂರ್ಣ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.
ಕೊನೆಗೂ ಹುಟ್ಟಿದ ‘ಲಾಕ್​ಡೌನ್​ ಯಾದವ್​’….!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
