ಮುಂಬೈ/ನವದೆಹಲಿ:ದೇಶದೆಲ್ಲೆಡೆ ಕರೊನಾ ಪಿಡುಗು ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳ ಸಾಮಾನ್ಯ ಕಾರ್ಯಾಚರಣೆಗೆ ತುಂಬಾ ಅಡ್ಡಿಯುಂಟಾಗುತ್ತಿದೆ. ವಿದ್ಯಾರ್ಥಿಗಳ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲವೊಂದು ಸಂಸ್ಥೆಗಳು ಈಗಾಗಲೆ ಆನ್​ಲೈನ್​ ತರಗತಿಗಳನ್ನು ಆರಂಭಿಸಿವೆ. ಆದರೆ, ಕರೊನಾ ಪಿಡುಗು ಕಡಿಮೆಯಾದ ಬಳಿಕ ತರಗತಿಗಳನ್ನು ಪುನರಾರಂಭಿಸುವ ಬಗ್ಗೆಯೂ ನಿರ್ಧರಿಸಿವೆ.
ಆದರೆ, ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದು ಪ್ರಸಕ್ತ ಶೈಕ್ಷಣಿಕ ವರ್ಷದ ತರಗತಿ ಬೋಧನೆಯನ್ನೇ ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಿದೆ. ಬುಧವಾರ ತಡರಾತ್ರಿ ಟ್ವಿಟರ್​ ಮೂಲಕ ಈ ನಿರ್ಧಾರವನ್ನು ಪ್ರಕಟಿಸಿರುವ ಬಾಂಬೆಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ ಬಾಂಬೆ) ನಿರ್ದೇಶಕ ಪ್ರೊ. ಸುಭಾಶಿಶ್​ ಚೌಧರಿ, ಐಐಟಿ ಬಾಂಬೆಗೆ ವಿದ್ಯಾರ್ಥಿಗಳ ಸುರಕ್ಷತೆಯೇ ಮೊದಲ ಆದ್ಯತೆ. ಪ್ರಸಕ್ತ ಸೆಮಿಸ್ಟರ್​ ಅನ್ನು ಅಂತ್ಯಗೊಳಿಸುವುದು ಹೇಗೆ ಎಂಬ ಬಗ್ಗೆ ವಿಸ್ತೃತ ಚರ್ಚೆ ನಡೆಸಿದೆವು. ಆದರೆ, ಪ್ರಸ್ತುತ ದೇಶದೆಲ್ಲೆಡೆ ಇರುವ ಕರೊನಾ ಪಿಡುಗನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಂದಿನ ಸೆಮಿಸ್ಟರ್​ ಅನ್ನು ಹೇಗೆ ಆಯೋಜಿಸಬೇಕು ಎಂಬ ಬಗ್ಗೆ ಸೆನೆಟ್​ ಸಭೆಯಲ್ಲಿ ಚರ್ಚಿಸಿದೆವು. ಮುಂದಿನ ಸೆಮಿಸ್ಟರ್​ನ ಬೋಧನೆಯನ್ನು ಸಂಪೂರ್ಣವಾಗಿ ಆನ್​ಲೈನ್​ ಮೂಲಕವೇ ನಿರ್ವಹಿಸಲು ನಿರ್ಧರಿಸಿದೆವು. ತನ್ಮೂಲಕ ವಿದ್ಯಾರ್ಥಿಗಳ ಸುರಕ್ಷತೆಯಲ್ಲಿ ಯಾವುದೇ ನ್ಯೂನತೆ ಆಗದಂತೆ ಎಚ್ಚರವಹಿಸಿದೆವು. ಹಾಗೂ ಇಂಥ ಒಂದು ನಿರ್ಧಾರ ಕೈಗೊಂಡ ರಾಷ್ಟ್ರದ ಮೊದಲ ಪ್ರತಿಷ್ಠಿತ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆಗೂ ಪಾತ್ರರಾದೆವು ಎಂದು ಹೇಳಿದ್ದಾರೆ.
https://www.facebook.com/directoriitbombay/posts/1024121474716479
ನಮ್ಮ ಸಂಸ್ಥೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುವ ಹೆಚ್ಚಿನ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಆನ್​ಲೈನ್​ ತರಗತಿಯಲ್ಲಿ ಪಾಲ್ಗೊಳ್ಳಲು ಅನುವಾಗುವಂತೆ ಅವರೆಲ್ಲರಿಗೂ ಲ್ಯಾಪ್​ಟಾಪ್​ ಮತ್ತಿತರ ಪೂರಕ ಉಪಕರಣಗಳು ಬೇಕಾಗುತ್ತವೆ. ಅವರೆಲ್ಲರಿಗೂ ಇವುಗಳನ್ನು ದೊರಕಿಸಿಕೊಡಲು ಕನಿಷ್ಠ 5 ಕೋಟಿ ರೂಪಾಯಿ ಅಗತ್ಯವಾಗಿದೆ. ಆದ್ದರಿಂದ, ಉಳ್ಳವರು ಕೈಯಲ್ಲಾದಷ್ಟು ದೇಣಿಗೆ ನೀಡಿ, ಅವರೆಲ್ಲರಿಗೂ ಲ್ಯಾಪ್​ಟಾಪ್​ ಮತ್ತು ಪೂರಕ ಉಪಕರಣಗಳನ್ನು ದೊರಕಿಸಿಕೊಡಲು ಸಹಾಯ ಮಾಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಆಡಿನ ತಂದೆ ಯಾರು ಎಂದು ತಿಳಿಯಲು ಕೋರ್ಟ್‌ ಮೊರೆ ಹೋಗಿರುವ ಮಹಿಳೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − two =
Remember me
