ಮುಂಬೈ:ಶ್ರೀರಾಮನನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ನಾಟಕವನ್ನು ಪ್ರದರ್ಶಿಸಲಾಗಿದೆ ಎಂಬ ದೂರಿನ ಮೇರೆಗೆ ನಾಟಕದಲ್ಲಿ ಭಾಗಹಿಸಿದ್ದ 8 ವಿದ್ಯಾರ್ಥಿಗಳಿಗೆ 1.2 ಲಕ್ಷ ರೂಪಾಯಿ ದಂಡ ವಿಧಿಸಿ ಬಾಂಬೆ ಐಐಟಿ ನೋಟಿಸ್​ ನೀಡಿದೆ.
ಇದನ್ನೂ ಓದಿ:NET Exam 2024: ಪರೀಕ್ಷೆ ನಡೆದ ಒಂದೇ ದಿನದಲ್ಲಿ ನೆಟ್ ರದ್ದುಗೊಳಿಸಿದ ಕೇಂದ್ರ ಸರ್ಕಾರ!
ಮಾರ್ಚ್​​ 31 ರಂದು ನಡೆದ ಕಲಾ ಉತ್ಸವ ಕಾರ್ಯಕ್ರಮದ ವೇಳೆ ‘ರಾಹೋವಣ’ ಎಂಬ ಹೆಸರಿನ ನಾಟಕವನ್ನು ಪ್ರದರ್ಶಿಸಿದ್ದರು. ಎಂಟು ವಿದ್ಯಾರ್ಥಿಗಳಿಗೆ ದಂಡ ವಿಧಿಸಿರುವ ಬಗ್ಗೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಎಪಿಪಿಎಸ್​ಸಿಯಲ್ಲಿ ಸಕ್ರಿಯರಾಗಿರುವ ವಿದ್ಯಾರ್ಥಿಯೊಬ್ಬರು ಖಚಿತಪಡಿಸಿದ್ದಾರೆ.
ಪೂಜ್ಯ ಹಿಂದೂ ಮಹಾಕಾವ್ಯ ರಾಮಾಯಣವನ್ನು ಸಡಿಲವಾಗಿ ಆಧರಿಸಿದೆ. ಹಿಂದೂ ನಂಬಿಕೆಗಳು ಮತ್ತು ದೇವತೆಗಳ ಬಗ್ಗೆ ಅವಹೇಳನಕಾರಿ ಉಲ್ಲೇಖಗಳನ್ನು ಹೊಂದಿದೆ ಎಂದು ಆರೋಪಿಸಿ ಸಂಸ್ಥೆಯ ವಿದ್ಯಾರ್ಥಿಗಳ ಒಂದು ಗುಂಪು ನಾಟಕದ ವಿರುದ್ಧ ದೂರು ನೀಡಿತ್ತು. “ಸ್ತ್ರೀವಾದವನ್ನು ಉತ್ತೇಜಿಸುವ” ಸೋಗಿನಲ್ಲಿ ನಾಟಕವು ಪ್ರಮುಖ ಪಾತ್ರಗಳನ್ನು, ಸಾಂಸ್ಕೃತಿಕ ಮೌಲ್ಯಗಳನ್ನು ಅಪಹಾಸ್ಯ ಮಾಡಿದೆ ಎಂದು ಕೆಲವು ವಿದ್ಯಾರ್ಥಿಗಳು ಆರೋಪಿಸಿದ್ದರು. ದೂರುಗಳು ಮೇ 8 ರಂದು ಶಿಸ್ತು ಸಮಿತಿ ಸಭೆಗೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ದಂಡ ಹಾಕಲಾಗಿದೆ.
ದೂರಿನ ಮೇರೆಗೆ ಎಂಟು ವಿದ್ಯಾರ್ಥಿಗಳಿಗೆ 1.20 ಲಕ್ಷ ರೂಪಾಯಿ (ತಲಾ 40 ಸಾವಿರ ರೂಪಾಯಿ) ದಂಡ ವಿಧಿಸಿ ಜೂನ್ 4 ರಂದು ಬಾಂಬೆ ಐಐಟಿ ರಿಜಿಸ್ಟ್ರಾರ್ ಕಚೇರಿ ನೋಟಿಸ್‌ ನೀಡಿತ್ತು. ದಂಡವನ್ನು ಜುಲೈ 30 ರೊಳಗೆ ಪಾವತಿಸುವಂತೆ ಸೂಚಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಲು ಐಐಟಿ ಬಾಂಬೆ ನಿರಾಕರಿಸಿದೆ. ನಾಟಕದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳ ಗುಂಪೊಂದು ಕಾಲೇಜು ಆಡಳಿತ ಮಂಡಳಿಗೆ ಏಪ್ರಿಲ್ 8 ರಂದು ದೂರು ಸಲ್ಲಿಸಿದ್ದರು. ಅಲ್ಲದೇ ನಾಟಕವನ್ನು ಹಿಂದೂಪೋಬಿಯಾ ಎಂದು ಕರೆದಿದ್ದರು.
ಪಾಕಿಸ್ತಾನ: ಗುಂಡಿಕ್ಕಿ ಪತ್ರಕರ್ತನ ಹತ್ಯೆ ಮಾಡಿದ ಆಗಂತುಕರು

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:17 − 17 =
Remember me
