ಚೆನ್ನೈ:ಮದ್ರಾಸ್ ಐಐಟಿ ನಿಧಿ ಸಂಗ್ರಹದಲ್ಲಿ ಇತಿಹಾಸ ಸೃಷ್ಟಿಸಿದೆ. 2023-24ರ ಆರ್ಥಿಕ ವರ್ಷದಲ್ಲಿ ಹಿಂದೆಂದೂ ಕಂಡರಿಯದ 513 ಕೋಟಿ ರೂಪಾಯಿ ದೇಣಿಗೆಯಾಗಿ ಸಂಗ್ರಹಿಸಲಾಗಿದೆ ಎಂದು ನಿರ್ದೇಶಕ ಪ್ರೊಫೆಸರ್ ಕಾಮಕೋಟಿ ಬುಧವಾರ ಪ್ರಕಟಿಸಿದರು.
ಮದ್ರಾಸ್ ಐಐಟಿ ಇತಿಹಾಸದಲ್ಲಿ ದಾನಿಗಳಿಂದ ಇಷ್ಟು ದೊಡ್ಡ ಮೊತ್ತದ ಧನಸಹಾಯ ಪಡೆಯುತ್ತಿರುವುದು ಇದೇ ಮೊದಲು. ಇವುಗಳ ಜೊತೆಗೆ ಕಾರ್ಪೊರೇಟ್ ಸಂಸ್ಥೆಗಳು ಮತ್ತು ಹಳೆಯ ವಿದ್ಯಾರ್ಥಿಗಳು ಇನ್ನೂ 717ರೂ. ಕೋಟಿ ಹಣವನ್ನು ನೀಡಲು ಮುಂದೆ ಬಂದಿದ್ದಾರೆ ಎಂದು ಕಾಮಕೋಟಿ ಹೇಳಿದರು.
ಇದನ್ನೂ ಓದಿ:ವ್ಹಾವ್​.. ಅಮೆರಿಕಾದಲ್ಲೂ ಇದೇ ದೃಶ್ಯ.. ಭಾರತೀಯರಿಗೆ ಅಚ್ಚರಿ!
ಈ ಹಣವನ್ನು ಸಂಶೋಧನೆ, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಅನುದಾನಕ್ಕಾಗಿ ಬಳಸಲಾಗುವುದು ಎಂದು ತಿಳಿದುಬಂದಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಐಐಟಿಗೆ 976.2 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದರು. ದೇಣಿಗೆ ನೀಡಿದವರಲ್ಲಿ 60,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಅವರು ವಿವರಿಸಿದರು.
ಕಳೆದ ಆರ್ಥಿಕ ವರ್ಷದಲ್ಲಿ ಹಳೆಯ ವಿದ್ಯಾರ್ಥಿಗಳಿಂದ 368 ಕೋಟಿ ರೂ., ಕಾರ್ಪೊರೇಟ್ ಸಂಸ್ಥೆಗಳಿಂದ 95 ಕೋಟಿ ರೂ. ಮತ್ತು ಇತರ ದಾನಿಗಳಿಂದ 50 ಕೋಟಿ ರೂ., 960 ಹಳೆಯ ವಿದ್ಯಾರ್ಥಿಗಳು ಮತ್ತು 112 ಕಾರ್ಪೊರೇಟ್ ಸಂಸ್ಥೆಗಳು ಸೇರಿದಂತೆ 1,072 ದಾನಿಗಳು ಕೊಡುಗೆ ನೀಡಿದ್ದಾರೆ ಎಂದರು.
ಐಐಟಿ ಮದ್ರಾಸ್ ಅಲುಮ್ನಿ ಚಾರಿಟೇಬಲ್ ಟ್ರಸ್ಟ್ (ಐಐಟಿಎಂಸಿಟಿ) ಅಧ್ಯಕ್ಷ ವಿ.ಶಂಕರ್ ಮಾತನಾಡಿ, ನಿಧಿ ನಿರ್ವಹಣೆಯಲ್ಲಿ ಪಾರದರ್ಶಕತೆಯಿಂದಾಗಿ ಹಳೆ ವಿದ್ಯಾರ್ಥಿಗಳ ಸಂಘವು ಸಂಸ್ಥೆಯಲ್ಲಿ ವಿಶ್ವಾಸವಿಟ್ಟು ನಿಧಿಯನ್ನು ನೀಡಿದೆ ಎಂದಿ ಹೇಳಿದರು.
2020-21 ರಿಂದ ಐಐಟಿ ಮದ್ರಾಸ್‌ಗೆ ಹಣವು ಅನೇಕ ಪಟ್ಟು ಹೆಚ್ಚಾಗಿದೆ. 2013-14ನೇ ಹಣಕಾಸು ವರ್ಷದಲ್ಲಿ 14.87 ಕೋಟಿರೂ., 2021-22 ಮತ್ತು 2022-23ರ ಅವಧಿಯಲ್ಲಿ ಇದು 131 ಕೋಟಿ ರೂ. ಮತ್ತು 231 ಕೋಟಿ ರೂ. ಗೆ ಏರಿಕೆಯಾಗಿದೆ.
‘ಚರ್ಚೆಗೆ ಬನ್ನಿ ನಿಮ್ಮ ಆರೋಪಗಳಿಗೆ ಉತ್ತರಿಸ್ತೀವಿ’: ಕಾಂಗ್ರೆಸ್​ ನಾಯಕರಿಗೆ ಸ್ಮೃತಿ ಇರಾನಿ ಸವಾಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + ten =
Remember me
