ನವದೆಹಲಿ:ಚಂಡೀಗಢ ಯುನಿವರ್ಸಿಟಿ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯರ ಸ್ನಾನದ ದೃಶ್ಯ ವಿಡಿಯೋ ಮಾಡಿ, ಬಹಿರಂಗಗೊಳಿಸಿದ ಬೆನ್ನಿಗೇ ಐಐಟಿ ಕ್ಯಾಂಪಸ್​​ವೊಂದರಲ್ಲಿ ಕೂಡ ಅಂಥದ್ದೇ ಒಂದು ಪ್ರಕರಣ ವರದಿಯಾಗಿದೆ.
ಐಐಟಿ ಮುಂಬೈ ಕ್ಯಾಂಪಸ್​ನಲ್ಲಿನ ಕ್ಯಾಂಟೀನ್​ನಲ್ಲಿ ಕೆಲಸ ಮಾಡುತ್ತಿದ್ದವ, ಅದೇ ಕ್ಯಾಂಪಸ್​​ನಲ್ಲಿದ್ದ ಲೇಡಿಸ್ ಹಾಸ್ಟೆಲ್​ನ ಬಾತ್​ರೂಮ್​ನೊಳಕ್ಕೆ ಇಣುಕಿ ನೋಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪೆಸ್ಟ್ ಕಂಟ್ರೋಲ್ ಕೆಲಸದ ಹಿನ್ನೆಲೆಯಲ್ಲಿ ಐಐಟಿ ಕ್ಯಾಂಟೀನ್​ಗೆ ರಜೆ ನೀಡಲಾಗಿತ್ತು. ಅದಾಗ್ಯೂ ಈತ ಕ್ಯಾಂಪಸ್​ನಲ್ಲೇ ಉಳಿದುಕೊಂಡಿದ್ದು, ಭಾನುವಾರ ರಾತ್ರಿ ಅಲ್ಲಿನ ಲೇಡಿಸ್ ಹಾಸ್ಟೆಲ್​ ಬಾತ್​​ರೂಮ್​ನೊಳಕ್ಕೆ ಇಣುಕಿ ನೋಡಲು ಹೋಗಿದ್ದ. ಇದನ್ನು ಗಮನಿಸಿದ ವಿದ್ಯಾರ್ಥಿನಿಯೊಬ್ಬಳು ಬೇರೆಯವರಿಗೆ ತಿಳಿಸಿ ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾಳೆ.
ಆತ ಕೆಲವು ವಿಡಿಯೋ ಮಾಡಿಕೊಂಡಿದ್ದಾನೆ ಎಂಬ ಆರೋಪ ವ್ಯಕ್ತವಾಗಿದ್ದರೂ, ಪೊಲೀಸರು ಆತನ ಮೊಬೈಲ್ ಫೋನ್​ ವಶಕ್ಕೆ ಪಡೆದು ಪರಿಶೀಲಿಸಿದಾಗ ಯಾವುದೇ ಅಶ್ಲೀಲ ವಿಡಿಯೋ ಕಂಡುಬಂದಿಲ್ಲ. ಆತನನ್ನು ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಡಿಸಿಪಿ ಮಹೇಶ್ವರ್ ರೆಡ್ಡಿ ತಿಳಿಸಿದ್ದಾರೆ.
ಅಂಗಿ-ಬನಿಯನ್ ತೆಗೆಯಲು ತಕರಾರು: ದೇವಸ್ಥಾನಗಳಲ್ಲಿನ ಫಲಕ ತೆಗೆಸುವಂತೆ ಕೋರಿ ಅರ್ಜಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − one =
Remember me
