ಮುಂಬೈ:ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಪುತ್ರ ಅನಂತ್​ ಅಂಬಾನಿ ಅವರು ರಾಧಿಕಾ ಮರ್ಚೆಂಟ್​ ಜುಲೈ 12ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಾಗತಿಕ ಐಕಾನ್​​, ಉದ್ಯಮಿಗಳು, ರಾಜಕಾರಣಿಗಳು ಹಾಗೂ ಬಾಲಿವುಡ್​ ಸೆಲಿಬ್ರಿಟಿಗಳು ಭಾಗಿಯಾಗಿದ್ದು ಗೊತ್ತೆ ಇದೆ. ಈ ಸಮಾರಂಭದಲ್ಲಿ 16 ಬಾರಿ ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (WWE) ಚಾಂಪಿಯನ್, ಹಾಲಿವುಡ್ ನಟ ಜಾನ್ ಸೀನಾ ಅವರು ಸಾಂಪ್ರದಾಯಿಕ ಶೇರ್ವಾನಿ ಧರಿಸಿ ಮಿಂಚಿದ್ದರು.
ಇದನ್ನು ಓದಿ:‘ದೇವರ’ ಮತ್ತೊಂದು ಸಾಂಗ್​ ರಿಲೀಸ್​​​; ಜೂ.ಎನ್​ಟಿಆರ್​​, ಜಾನ್ವಿ ರೊಮ್ಯಾನ್ಸ್​​ಗೆ ಫ್ಯಾನ್ಸ್​ ಹೇಳಿದ್ದು ಹೀಗೆ
ಅಂಬಾನಿ ಅವರ ಮದುವೆಯಲ್ಲಿನ ಭಾರತೀಯ ಸಂಪ್ರದಾಯಗಳನ್ನು ಮತ್ತು ಸ್ಥಳೀಯ ಆಹಾರವನ್ನು ಹಾಲಿವುಡ್ ನಟ ಜಾನ್ ಸೀನಾ ಮೆಚ್ಚಿಕೊಂಡಿದ್ದಾರೆ. ಭಾರತೀಯ ಮಸಾಲೆಯುಕ್ತ ಆಹಾರದ ರುಚಿಯನ್ನು ಜಾನ್​​ ಸೀನಾ ಇನ್ನೂ ಮರೆತಿಲ್ಲ. ಭಾರತೀಯ ಆಹಾರವನ್ನು ಸಾಕಷ್ಟು ಹೊಗಳಿದ್ದಾರೆ.

ಅಂಬಾನಿ ಅವರ ಮದುವೆಯಲ್ಲಿ ಹಲವು ಬಗೆಯ ಖಾದ್ಯಗಳಿದ್ದವು. ಭಾರತೀಯ ಆಹಾರ ಮತ್ತು ಸ್ಟ್ರೀಟ್​​ ಆಹಾರವನ್ನು ಉತ್ತಮವಾಗಿ ಬಡಿಸಿದರು. ಬಹಳ ರುಚಿಕರವಾಗಿತ್ತು ಹಾಗೂ ಇಷ್ಟವಾಯಿತು. ನಾನು ಬಹಳ ಕಡಿಮೆ ಸಮಯದವರೆಗೂ ಮಾತ್ರ ಅಲ್ಲಿ ಇದ್ದೆ. ಆದರೆ ಇನ್ನು ಭಾರತೀಯ ಮಸಾಲೆಯುಕ್ತ ಆಹಾರ ಹಾಗಾ ಸ್ಟ್ರೀಟ್ ಫುಡ್​​​​​ ತಿನ್ನುವತ್ತ ಗಮನ ಹರಿಸಬೇಕಾಗಿದೆ ಎಂದು ಜಾನ್ ಸೀನಾ ತಿಳಿಸಿದರು.
ನಾನು ಬಹಳ ಕಡಿಮೆ ಸಮಯ ಅಲ್ಲಿ ಇದ್ದಿದ್ದರಿಂದ ಲಭ್ಯವಿರುವ ಎಲ್ಲವನ್ನೂ ಪ್ರಯತ್ನಿಸಲು ಸಾಧ್ಯವಾಗಲಿಲ್ಲ. ಆದರೆ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲು ಎದುರುನೋಡುತ್ತಿದ್ದೇನೆ ಮತ್ತು ಇತರ ಭಾರತೀಯ ಆಹಾರವನ್ನು ತಿನ್ನಲು ಇಷ್ಟಪಡುತ್ತೇನೆ ಎಂದು ಹೇಳಿದರು. ಅಂಬಾನಿ ಅವರ ಮದುವೆ ಸಮಾರಂಭದಲ್ಲಿ ಹಲವಾರು ಅತಿಥಿಗಳೊಂದಿಗೆ ಜಾನ್ ಸೀನಾ ಅವರು ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.
#WATCH| WWE champion and Hollywood actor John Cena says, "The Ambani wedding had its fair share of cuisine but they also did India food and Indian street food very well. The food was fantastic. I had a short stay which means I would like to go back and try some Indian food. The…pic.twitter.com/20KljH7X0W
ಡಬ್ಲ್ಯುಡಬ್ಲ್ಯುಇಯ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ಜಾನ್​ ಸೀನಾ ಅವರು ಈ ತಿಂಗಳ ಆರಂಭದಲ್ಲಿ ತನ್ನ ನಿವೃತ್ತಿಯ ಬಗ್ಗೆ ಘೋಷಿಸಿದರು. 2025 ರ ಎಲಿಮಿನೇಷನ್ ಚೇಂಬರ್ ಮತ್ತು ರೆಸಲ್‌ಮೇನಿಯಾ 41 ಅವರ ಕೊನೆಯ ಪ್ರೀಮಿಯಂ ಲೈವ್ ಈವೆಂಟ್​​ ಎಂದು ಹೇಳಿದ್ದಾರೆ.(ಏಜೆನ್ಸೀಸ್​​)
ಸಿಎಂ ಕಚೇರಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದವನ ಬಂಧನ; ಆರೋಪಿ ಕೊಟ್ಟ ಕಾರಣ ಕೇಳಿ ಪೊಲೀಸರು ಶಾಕ್​​​
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eleven + 16 =
Remember me
