ಬೆಂಗಳೂರು:ಇನ್ನೇನು ಚುನಾವಣೆ ಬಂತು ಎನ್ನುವಾಗಲೇ ಬೆಂಗಳೂರಿನಲ್ಲಿ ನಾಡ ಪಿಸ್ತೂಲುಗಳು ಕಾಣ ಸಿಕ್ಕಿವೆ.
ರೋಶನ್ ಎಂಬಾತನಿಂದ ಅಕ್ರಮವಾಗಿ 10 ಪಿಸ್ತೂಲ್​ಗಳು ಬೆಂಗಳೂರಿಗೆ ಬಂದಿದ್ದು ಆತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುಂಬೈನ ಅಂಡರ್​ವರ್ಲ್ಡ್​ನಿಂದ ಬೆಂಗಳೂರು ಭೂಗತ ಜಗತ್ತಿಗೆ ಪಿಸ್ತೂಲ್​ಗಳು ಸರಬರಾಜು ಆಗಿರುವ ಶಂಕೆ ವ್ಯಕ್ತವಾಗಿದ್ದು ಬೆಂಗಳೂರು ಸಿಸಿಬಿ ಪೊಲೀಸರು0 10 ಪಿಸ್ತೂಲ್​ಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಆರೋಪಿ ರೋಶನ್​, ಬಾಂಬೆಯಿಂದ ಬಸ್ ಮೂಲಕ ಬೆಂಗಳೂರಿಗೆ ಪಿಸ್ತೂಲ್ ತಂದಿದ್ದ. ಮೊದಲಿಗೆ 4 ಪಿಸ್ತೂಲುಗಳನ್ನು ಬೆಂಗಳೂರಿನ ಅಂಡರ್​ವರ್ಲ್ಡ್​ಗೆ ನೀಡಲು ತಂದಿದ್ದ ಎನ್ನಲಾಗಿದೆ. ಆ ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ನಂತರ 6 ಪಿಸ್ತೂಲುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈಗಾಗಲೇ ನಾಗಪುರದಲ್ಲಿ ಆರೋಪಿ ಮೇಲೆ ಮೂರು ಪ್ರಕರಣಗಳಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯ ಹೆಚ್ಚಿನ ವಿಚಾರಣೆ ಮಾಡುತ್ತಿದ್ದಾರೆ. ಆರೋಪಿಯಿಂದ ಒಟ್ಟು 10 ನಾಡ ಪಿಸ್ತೂಲ್, 7.65 ಎಂಎಂನ 20 ಜೀವಂತ ಗುಂಡುಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 2 =
Remember me
