ಬೆಂಗಳೂರು:ಇದು ಲಾಕ್​ಡೌನ್ ಸಮಯ. ರಸ್ತೆಗಳಲ್ಲಿ ಜನರ ಓಡಾಟ ಕಡಿಮೆಯಾಗಿ ಪ್ರಾಣಿ, ಪಕ್ಷಿಗಳು ಕಾಡು, ಗೂಡು ಬಿಟ್ಟು ಸ್ವಚ್ಛಂದವಾಗಿ ತುಸು ಹೊತ್ತು ಊರಿನತ್ತಲೂ ಸುಳಿದಾಡುತ್ತಿವೆ. ಆದರೆ ಆತಂಕಕಾರಿ ಸಂಗತಿ ಎಂದರೆ ಲಾಕ್​ಡೌನ್ ನ ಈ ಸಮಯ ಕಾಡು ಪ್ರಾಣಿಗಳ್ಳರಿಗೆ ವರದಾನವಾದಂತಿದೆ.ಅಭಯಾರಣ್ಯಗಳಲ್ಲಿ ಬೇಟೆಗಾರರು ಯತೇಚ್ಛವಾಗಿ ಕಳ್ಳಬೇಟೆಯಾಡುತ್ತಿದ್ದು, ಇತ್ತೀಚೆಗೆ ವರದಿಯಾದ ಕಳ್ಳಬೇಟೆ ಪ್ರಕಟಣೆಗಳೇ ಇದಕ್ಕೆ ಸಾಕ್ಷಿಯಾಗಿವೆ.
ಇದನ್ನೂ ಓದಿ:ಮೂತ್ರಪಿಂಡ ದಾನಿಗಳನ್ನು ಒದಗಿಸುದಾಗಿ ಹೇಳಿ ಹಣ ವಸೂಲಿ ಮಾಡುತ್ತಿದ್ದವ ಏನಾದ?
ಲಾಕ್​​ಡೌನ್ ಜಾರಿಯಾಗಿದ್ದಾಗ ನಾಗರಹೊಳೆ ಹುಲಿ ಅಭಯಾರಣ್ಯದಲ್ಲಿ ಬೇಟೆಯಾಡಿದ 8 ಪ್ರಕರಣಗಳು ದಾಖಲಾಗಿದ್ದವು. ಇದೀಗ ಮತ್ತೆ ಲಾಕ್ ಡೌನ್ ಜಾರಿಯಾಗಿರುವುದರಿಂದ ಅರಣ್ಯಾಧಿಕಾರಿಗಳು ಎಚ್ಚರಿಕೆವಹಿಸಬೇಕಾಗಿದೆ.ಇತ್ತೀಚೆಗೆ ಅರಣ್ಯಾಧಿಕಾರಿಗಳಿಳು ಮಾಹಿತಿಯೊಂದರ ಆಧಾರದ ಮೇಲೆ ವೀರನಹೊಸಳ್ಳಿ ವಲಯದ ಒಂದು ಮನೆ ಮೇಲೆ ದಾಳಿ ನಡೆಸಿದಾಗ ಅಲ್ಲಿ ಸಾಂಬಾರ್ ಜಿಂಕೆಯ ಅಂಗಗಳು ಸಿಕ್ಕಿವೆಯಾದರೂ ಕಳ್ಳಬೇಟೆಯಾಡಿದ ಆರೋಪಿಗಳು ಸಿಕ್ಕಿಲ್ಲ. ಬೆಂಗಳೂರಿನಲ್ಲಿರುವ ಈ ಸ್ಥಳದ ಮಾಲೀಕರು ಲಾಕ್ ಡೌನ್ ನಿಂದಾಗಿ ಓಡಾಡಲು ಅಸಾಧ್ಯವಾಗಿರುವುದರಿಂದ ಈ ಸ್ಥಳ ಕಳ್ಳರಿಗೆ ವರದಾನವಾದಂತಾಗಿದೆ.
ಇದನ್ನೂ ಓದಿ:75 ಜನರ ಪ್ರಾಣ ಉಳಿಸಿದ ಪೈಲಟ್‌ ಸಮಯಪ್ರಜ್ಞೆ
ಕೆಲ ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಗುಪ್ತಚರ ಮಾಹಿತಿಯಾಧಾರದ ಮೇಲೆ ಅರಣ್ಯಾಧಿಕಾರಿಗಳು ಆ ಸ್ಥಳ ತಲುಪುವಷ್ಟೊತ್ತಿಗೆ ಸಾಂಬಾರ ಜಿಂಕೆಯೊಂದಿಗೆ ಬೇಟೆಗಾರರು ಅಲ್ಲಿಂದ ಪರಾರಿಯಾಗಿದ್ದಾರೆ.ಈ ಬಗ್ಗೆ ಸುದ್ದಿಸಂಸ್ಥೆಯೊಂದರ ಜತೆ ಮಾತನಾಡಿದ ನಾಗರಹೊಳೆ ಹುಲಿ ಅಭಯಾರಣ್ಯ ನಿರ್ದೇಶಕ ಮಹೇಶ್ ಕೆ, ಎಲ್ಲಾ ಮೂಲಗಳಿಂದ ಮಾಹಿತಿ ಪಡೆಯುತ್ತಿದ್ದು, ಶೀಘ್ರ ಬೇಟೆಗಾರರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
VIDEO: ‘ಚೀನಾದವ್ರು ಯೋಚ್ನೆ ಮಾಡದೇ ಏನೂ ಮಾಡಲ್ಲಾರಿ’- ರಾಹುಲ್ ಗಾಂಧಿ ವಿವರಿಸ್ತಿದ್ದಾರೆ ನೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + three =
Remember me
