ಭೋಪಾಲ್:ಔಷಧ ಚೀಟಿಯ ಮೇಲೆ ಬರೆಯುವ ವೈದ್ಯರ ಬರವಣಿಗೆಯು ಮೆಡಿಕಲ್​ ಶಾಪ್​ ಸಿಬ್ಬಂದಿಗೆ ಮಾತ್ರ ಅರ್ಥವಾಗುತ್ತೆ ಎಂಬುದು ಜನರ ಸಾಮಾನ್ಯ ನಂಬಿಕೆಯಾಗಿದೆ. ಅದು ನಿಜವೂ ಹೌದು. ಬಹುತೇಕ ವೈದ್ಯರ ಬರಹ ಅಸ್ಪಷ್ಟವಾಗಿರುತ್ತದೆ. ಆದರೆ, ಇಲ್ಲೊಬ್ಬ ವೈದ್ಯನ ಬರವಣಿಗೆ ಮೆಡಿಕಲ್​ ಶಾಪ್​ನವರಿಗೂ ಅರ್ಥವಾಗದೇ ಭಾರಿ ಗೊಂದಲ ಮೂಡಿಸಿದೆ.
ಹೌದು, ಸಾಮಾಜಿಕ ಜಾಲತಾಣದಲ್ಲಿ ಔಷಧ ಚೀಟಿಯ ಫೋಟೋವೊಂದು ಭಾರಿ ವೈರಲ್​ ಆಗುತ್ತಿದ್ದು, ಚೀಟಿಯಲ್ಲಿನ ವೈದ್ಯರ ಬರವಣಿಗೆ ನೋಡಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ವೈದ್ಯರಿಗೆ ಇಷ್ಟೊಂದು ಬೇಜವಬ್ದಾರಿ ಇರಬಾರದು ಎಂದು ಟೀಕಾ ಪ್ರಹಾರ ನಡೆಸಿದ್ದಾರೆ. ಈ ಘಟನೆ ಎಲ್ಲಿ ನಡೆಯಿತು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ನಾಗೌಡ್ ಸಾಮಾಜಿಕ ಆರೋಗ್ಯ ಕೇಂದ್ರಕ್ಕೆ 46 ವರ್ಷದ ಅರವಿಂದ್ ಕುಮಾರ್ ಸೇನ್​ ಎಂಬುವರು ಇತ್ತೀಚೆಗೆ ಭೇಟಿ ನೀಡಿದ್ದರು. ತನಗೆ ಜ್ವರ ಮತ್ತು ದೇಹದಲ್ಲಿ ನೋವಿದೆ ಎಂದು ಹೇಳಿ ಒಪಿಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಅಮಿತ್ ಸೋನಿ ಅವರನ್ನು ಭೇಟಿಯಾದಾಗ, ಪರೀಕ್ಷೆ ನಡೆದ ವೈದ್ಯರು ಔಷಧ ಚೀಟಿಯನ್ನು ಬರೆದುಕೊಟ್ಟಿದ್ದಾರೆ.
ಇದಾದ ಬಳಿಕ ಅರವಿಂದ್​ ಜೈನ್ ಅವರು ಔಷಧ ಖರೀದಿಸಲು ಆಸ್ಪತ್ರೆ ಬಳಿಯ ಮೆಡಿಕಲ್ ಸ್ಟೋರ್‌ಗೆ ತೆರಳಿದ್ದರು. ಆದರೆ ಮೆಡಿಕಲ್ ಶಾಪ್​ನ ಸಿಬ್ಬಂದಿ ವೈದ್ಯರು ನೀಡಿದ ಚೀಟಿ ನೋಡಿ ಶಾಕ್ ಆಗಿದ್ದಾರೆ. ಏಕೆಂದರೆ, ಚೀಟಿಯಲ್ಲಿ ಡಬ್ಲ್ಯು ಪದ ಮತ್ತು 225 ಸಂಖ್ಯೆ ಬಿಟ್ಟರೆ ಬೇರೆ ಯಾವುದೇ ಪದವೂ ಅರ್ಥವಾಗದೇ ಗೊಂದಲಕ್ಕೀಡಾದರು.
ಬಳಿಕ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡು, ಇದರಲ್ಲಿ ಬರೆದಿರುವ ಔಷಧಿಯ ಹೆಸರು ನಿಮಗೆ ತಿಳಿದಿದೆಯೇ? ಎಂಬ ಶೀರ್ಷಿಕೆ ನೀಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು, ಔಷಧ ಚೀಟಿ ಬರೆದ ವೈದ್ಯರ ವಿರುದ್ಧ ನೆಟ್ಟಿಗರು ಭಾರಿ ಆಕ್ರೋಶ ಹೊರಹಾಕಿದ್ದಾರೆ.
MP Gajab News : सतना के डॉक्टर साब ने ऐसा लिखा पर्चा कि 'खुद लिखे खुदा बांचे' वाली कहावत हो गई, देखें वायरल हो रहा Prescription#Satna#Doctor#Viral#Prescription@healthminmp#MPNews#PeoplesUpdatepic.twitter.com/VCoYRoFpRJ
— Peoples Samachar (@psamachar1)September 6, 2024

ಇತ್ತ ಫೋಟೋ ವೈರಲ್ ಆದ ಬೆನ್ನಲ್ಲೇ ವೈದ್ಯಕೀಯ ಮಂಡಳಿ, ಔಷಧ ಚೀಟಿ ಬರೆದ ಡಾ. ಅಮಿತ್ ಸೋನಿ ಅವರಿಗೆ ನೋಟಿಸ್ ಕಳುಹಿಸಿದ್ದು, ಉತ್ತರ ನೀಡುವಂತೆ ಕೋರಿದ್ದು, ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.(ಏಜೆನ್ಸೀಸ್​)
ನಿಮ್ಮ ಅಂಗೈನಲ್ಲಿ X ಚಿಹ್ನೆ ಇದೆಯಾ ನೋಡಿ… ಇದರ ಅರ್ಥ ತಿಳಿದ್ರೆ ನೀವು ಬೆರಗಾಗೋದು ಖಚಿತ!

ಪವಿತ್ರಾ ಗೌಡ ನಿಮಗೆ ಏನಾಗಬೇಕು? ವಿಚಾರಣೆ ವೇಳೆ ದರ್ಶನ್​ ಕೊಟ್ಟ ಉತ್ತರ ಚಾರ್ಜ್​ಶೀಟ್​ನಲ್ಲಿ ಬಯಲು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:ten − 5 =
Remember me
