ನವದೆಹಲಿ:ದೇಶದ ಹಿರಿ-ಕಿರಿಯ ರಾಜಕಾರಣಿಗಳಿಂದ, ಎಲ್ಲ ಪಕ್ಷಗಳ ಮುಖಂಡರಿಂದ ಪ್ರಣಬ್​ ದಾ ಎಂದೇ ಕರೆಯಿಸಿಕೊಳ್ಳುತ್ತಿದ್ದರು ಪ್ರಣಬ್​ ಮುಖರ್ಜಿ. ಆದರೆ, ಅಂದಿನ ಬಾಂಗ್ಲಾ ಕಾಂಗ್ರೆಸ್​ನಲ್ಲಿ ಇವರಿಗಿದ್ದ ಹೆಸರು ಲಿಟಲ್​ ಮಾಸ್ಟರ್​….!
ಇಂದಿರಾ ಗಾಂಧಿಯವರೊಂದಿಗೆ ಕೆಲಸ ಮಾಡಿದ್ದ ಕಾಂಗ್ರೆಸ್​ನ ಕೊನೆಯ ಕೊಂಡಿ ಪ್ರಣಬ್​ ದಾ ಮೂಲಕ ಕಳಚಿದಂತಾಗಿದೆ. ಇವರನ್ನು ಕಾಂಗ್ರೆಸ್​ನ ತೆಕ್ಕೆಗೆ ಸೆಳೆದಿದ್ದೇ ಸ್ವತಃ ಇಂದಿರಾ ಗಾಂಧಿ ಎಂಬುದು ವಿಶೇಷ.
ಪಶ್ಚಿಮ ಬಂಗಾಳದ ಮಿಡ್ನಾಫುರ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯ ಗಳಿಸಿದ್ದ ಹಿರಿಯ ನಾಯಕ ಕೃಷ್ಣ ಮೆನನ್​ ಅವರ ಚುನಾವಣಾ ಎಜೆಂಟ್​ ಆಗುವ ಮೂಲಕ ಪ್ರಣಬ್​ ರಾಜಕೀಯ ಕ್ಷೇತ್ರಕ್ಕೆ ಎಂಟ್ರಿಯಾಗಿದ್ದರು.
ಇದನ್ನೂ ಓದಿ;ದೇಶೀಯ ಕರೊನಾ ಲಸಿಕೆ ಕೊವಾಕ್ಸಿನ್​ ಇನ್ನಷ್ಟು ಹತ್ತಿರ; ಎರಡನೆಯ ಹಂತದ ಪರೀಕ್ಷೆಗೆ ಸಿದ್ಧತೆ
1966ರಲ್ಲಿ ಬಂಗಾಳದಲ್ಲಿ ಕಾಂಗ್ರೆಸ್​ ಇಬ್ಭಾಗವಾದಾಗ ಮತ್ತೊಂದು ಬಣದ ನಾಯಕರಾಗಿದ್ದ ಪ್ರಣಬ್​ ಮುಖರ್ಜಿಯವರನ್ನು ಇಂದಿರಾ ಗಾಂಧಿ ರಾಜ್ಯಸಭೆ ಸದಸ್ಯರನ್ನಾಗಿಸಿದರು. ನಂತರ 1970 ರಲ್ಲಿ ಈ ಬಣ ಕಾಂಗ್ರೆಸ್​ನಲ್ಲಿ ವಿಲೀನವಾಯಿತು.
1973ರಲ್ಲಿ ಪ್ರಣಬ್​ ಮುಖರ್ಜಿ ಮೊದಲ ಬಾರಿಗೆ ಇಂದಿರಾ ಗಾಂಧಿ ಸಂಪುಟದಲ್ಲಿ ಸಚಿವರಾಗಿ ಸೇರ್ಪಡೆಯಾದರು. ಕೈಗಾರಿಕೆ ಖಾತೆಯ ಸಹಾಯಕ ಸಚಿವರಾಗಿ ಇವರಿಗೆ ಹೊಣೆ ನೀಡಲಾಗಿತ್ತು. ಎರಡೇ ವರ್ಷಗಳಲ್ಲಿ ಸ್ವತಂತ್ರ ನಿರ್ವಹಣೆಯ ಕಂದಾಯ ಹಾಗೂ ಬ್ಯಾಕಿಂಗ್​ ವ್ಯವಹಾರಗಳ ಉಪ ಸಚಿವರಾಗಿ ಬಡ್ತಿ ಪಡೆದರು.1982ರಲ್ಲಿ ತುರ್ತು ಪರಿಸ್ಥಿತಿ ಬಳಿಕ ಇಂದಿರಾ ಅಧಿಕಾರಕ್ಕೆ ಮರಳಿದಾಗ ಪ್ರಣಬ್​ ಮುಖರ್ಜಿ ಭಾರತದ ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಆರ್​.​ ವೆಂಕಟರಾಮನ್​ ಅವರನ್ನು ಬದಲಿಗೆ ಈ ಹುದ್ದೆ ಸ್ವೀಕರಿಸಿದ ಖ್ಯಾತಿ ಅವರದ್ದಾಗಿತ್ತು. ಭಾರತದ ಆರ್ಥಿಕ ಕ್ಷೇತ್ರದಲ್ಲಿ ಹಲವು ಮಹತ್ತರ ಬದಲಾವಣೆಗಳಿಗೆ ಪ್ರಣಬ್​ ಕಾರಣಕರ್ತರಾದರು.
ಇದನ್ನೂ ಓದಿ;ವಿಡಿಯೋ: ಮೂರು ವರ್ಷದ ಮಗುವನ್ನು 100 ಅಡಿ ಎತ್ತರಕ್ಕೆ ಕೊಂಡೊಯ್ದ ಗಾಳಿಪಟ…!
ಆಡಳಿತಾತ್ಮಕ ಸುಧಾರಣೆ, ಮಾಹಿತಿ ಹಕ್ಕು, ಉದ್ಯೋಗದ ಹಕ್ಕು, ಆಹಾರ ಭದ್ರತೆ, ಇಂಧನ ಭದ್ರತೆ ಮೊದಲಾದ ವಿಚಾರದಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಂಡರು. ಇದಲ್ಲದೇ, ಆಧಾರ್​ ಪ್ರಾಧಿಕಾರ, ಮೆಟ್ರೋ ನಿಗಮಗಳ ಸ್ಥಾಪನೆಯಲ್ಲಿಯೂ ಇವರ ಪಾತ್ರವಿದೆ. ಸತತ 23 ವರ್ಷಗಳವರೆಗೆ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಐದು ಬಾರಿ ರಾಜ್ಯಸಭೆ, ಎರಡು ಬಾರಿ ಲೋಕಸಭೆ ಸದಸ್ಯರಾಗಿದ್ದರು. 2012ರಿಂದ 2017ರವರೆಗೆ ಭಾರತದ ರಾಷ್ಟ್ರಪತಿಯಾಗಿ ಸಮರ್ಥವಾಗಿ ಆಡಳಿತ ನಡೆಸಿದರು.
9 ತಾಸಿನ ನಿದ್ದೆಯೇ ಉದ್ಯೋಗ; ಲಕ್ಷ ರೂ. ಸಂಬಳ; ಷರತ್ತುಗಳು ಅನ್ವಯ….!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 11 =
Remember me
