ದೊಡ್ಡವರಿಗಂತೂ ತಮ್ಮ ಮಕ್ಕಳಿಗೆ ಮದುವೆ ಮಾಡುವ ತವಕ. ಆದರೆ ಮಕ್ಕಳಿಗೆ ಇನ್ನೂ ಸ್ವಲ್ಪ ದಿನಗಳ ಕಾಲ ಆರಾಮವಾಗಿ ಇದ್ದು ಜೀವನವನ್ನು ಎಂಜಾಯ್ ಮಾಡಬೇಕು ಎನ್ನುವ ಬಯಕೆ. ಕೆಲವರು ಪರಸ್ಪರ ಪ್ರೀತಿಸಿ ಮದುವೆಯಾಗುತ್ತಾರೆ, ಇನ್ನು ಕೆಲವರು ಹಿರಿಯರನ್ನು ಪರಸ್ಪರ ಒಪ್ಪಿಸಿ ಅವರ ತೀರ್ಮಾನದಂತೆ ವಿವಾಹವಾಗುತ್ತಾರೆ. ಈ ಆಧುನಿಕ ಕಾಲದಲ್ಲಿ ಸಲಿಂಗಕಾಮಿಗಳು ಮದುವೆಯಾಗಿರುವುದನ್ನು ನೋವು ನೋಡಿದ್ದೇವೆ.
ಇದನ್ನೂ ಓದಿ:ನಟ ರಾಮ್​ಚರಣ್​ ಜೊತೆ ಮದುವೆ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ಪತ್ನಿ ಉಪಾಸನಾ!
ವಿವಾಹ ಸಂಬಂಧ ಎಂಬುದು ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧ ಯಾಕೆ ಆಗಬೇಕು. ಆದರೆ ನಾವು ಹೇಳೊಕ್ಕೆ ಹೊರಟಿರುವ ಸುದ್ದಿಯೇ ವಿಶೇಷ. ಈ ಸುದ್ದಿಯನ್ನು ನೀವು ಓದಿದರೆ ಖಂಡಿತಾ ಶಾಕ್​ ಆಗೋದು ಗ್ಯಾರಂಟಿ.

ಬ್ರೆಜಿಲಿಯನ್ ಮೂಲದ ಮಾಡೆಲ್ ತನ್ನ ಮದುವೆ ವಿಷ್ಯದಲ್ಲಿ ಭಾರೀ ಸುದ್ದಿಯಲ್ಲಿದ್ದಾಳೆ. ರೂಪದರ್ಶಿ ತನ್ನನ್ನು ತಾನು ಮದುವೆ ಆಗಿದ್ದಲ್ಲದೆ ಅದಕ್ಕೆ ಕಾರಣ ನೀಡಿದ್ದಾಳೆ. ರೂಪದರ್ಶಿ ಹೇಳಿದ ಕಾರಣ ಕೇಳಿದ ಜನ ಬೆರಗಾಗಿದ್ದಾರೆ. ಕೇವಲ ವಿವಾಹ ಆಗಿದ್ದಲ್ಲದೆ ತನಗೇ ತಾನೇ ದುಬಾರಿ ಬೆಲೆಯ ಉಂಗರ ಕೊಟ್ಟುಕೊಂಡು ಖುಷಿ ಪಟ್ಟಿದ್ದಾಳೆ.
ಯೆಸ್​ 35ರ ವಯಸ್ಸಿನ ಈಕೆಯ ಹೆಸರು ಜನಿನಾ ಪ್ರಜೆರೆಸ್, ಈಕೆ ಮೂಲತಃ ಬ್ರೆಜಿಲಿಯನ್ ಮೂಲದವಳು. ತನ್ನ ರೂಪದಿಂದಲೇ ಲಕ್ಷಾಂತರ ಮಂದಿ ಮನಸ್ಸನ್ನೂ ಗೆದ್ದಿದ್ದಾಳೆ. ಪ್ಲೇಬಾಯ್ ವೆಬ್ಸೈಟ್ ನಲ್ಲಿ ಈಕೆ ಬಹಳ ಸೆಲೆಬ್ರೆಟಿ. ಆದಷ್ಟು ಸ್ವತಂತ್ರವಾಗಿ ಜೀವನ ನಡೆಸುವ ಆಲೋಚನೆಯಲ್ಲಿರುತ್ತಾಳೆ. ಆದರೆ ಮದುವೆ ವಿಷ್ಯದಲ್ಲಿ ಭಾರೀ ಅನ್ಯಾಯವಾಗಿದೆ. ಏಕೆಂದರೆ ಆಕೆಗೆ ಸರಿಯಾದ ಗಂಡು ಸಿಗ್ತಿಲ್ಲ. ಈ ಕಾರಣದಿಂದ ತನ್ನನ್ನು ತಾನೇ ಮದುವೆಯಾದ ಸುಂದರಿ ಆ ಸುಂದರ ಕ್ಷಣವನ್ನು ನೆನಪಿನಲ್ಲಿಟ್ಟುಕೊಳ್ಳಲು ದುಬಾರಿ ಬೆಲೆಯ ನಿಶ್ಚಿತಾರ್ಥದ ಉಂಗುರವನ್ನು ಸ್ವತಃ ಖರೀದಿಸಿದ್ದಾಳೆ.

ಈ ಕುರಿತು ಮಾನಾಡಿರುವ ರೂಪದರ್ಶಿ ಜನಿನಾ, ನಾನು ಇತರರ ಸಹಾಯದಿಂದ ಉನ್ನತಮಟ್ಟಕ್ಕೆ ಬೆಳೆದಿದ್ದೇನೆ ಎಂದು ಕೆಲವರು ಭಾವಿಸಿದ್ದಾರೆ. ಆದರೆ ನಾನು ಇಲ್ಲಿಯವರೆಗೆ ಗಳಿಸಿದ ಎಲ್ಲವೂ ನನ್ನ ಸ್ವಂತ ಪರಿಶ್ರಮದಿಂದ ಎಂದು ಹೇಳಲು ನಾನು ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾಳೆ.
ಜನಿನಾ ತನ್ನನ್ನು ತಾನು ಪ್ರೀತಿಸುವ ಹುಡುಗಿ. ಓರ್ವ ಮಹಿಳೆಯಾಗಿ ಆಕೆಯನ್ನು ಆಕೆ ಗೌರವಿಸುತ್ತಾಳೆ. ನನಗೆ ಏನು ಬೇಕು ಎಂಬುದು ನನಗೆ ಗೊತ್ತು. ನಿಜವಾಗಿಯೂ ಸಂತೋಷವಾಗಿರಲು ಮತ್ತು ತೃಪ್ತಿಪಡೆಯಲು ನಾನು ಮೊದಲು ನನ್ನನ್ನು ಬೇಷರತ್ತಾಗಿ ಪ್ರೀತಿಸಬೇಕು ಎಂದು ನಾನು ಅರಿತುಕೊಂಡೆ.ತನ್ನನ್ನು ತಾನು ಮದುವೆ ಆಗಿರುವ ಬಗ್ಗೆ ಮಾತನಾಡಿದ ಜನೈನಾ, ಇದು ಸ್ವಯಂ ಅನ್ವೇಷಣೆಯ ಪ್ರಕ್ರಿಯೆ. ಪ್ಲೇಬಾಯ್ ನನಗೆ ಪರ್ಫೆಕ್ಟ್ ವುಮೆನ್ ಪಟ್ಟ ನೀಡಿದ ಮೇಲೆ ನಾನು ಸಂಪೂರ್ಣವಾಗಿ ಬದಲಾಗಿದ್ದೇನೆ. ಆರಂಭದಲ್ಲಿ ನನಗೆ ಈ ಪ್ರಶಸ್ತಿ ಖುಷಿ ನೀಡಿತ್ತು. ಇದನ್ನು ನಂಬೋದು ಕೂಡ ಕಷ್ಟವಾಗಿತ್ತು. ನಿಧಾನವಾಗಿ ನನ್ನ ಸೌಂದರ್ಯದ ಬಗ್ಗೆ ಅರಿವಾಯ್ತು. ನನ್ನ ಪ್ರತಿಯೊಂದು ಗುಣಗಳನ್ನು ಗುರುತಿಸುವುದನ್ನು ನಾನು ಅಭ್ಯಾಸ ಮಾಡಿದ್ದೇನೆ ಎಂದು ಜನೈನಾ ಹೇಳಿದ್ದಾಳೆ.

ಇಲ್ಲಿನ ಯಾವುದೇ ಸಂಬಂಧ ಜನೈನಾಗೆ ಸಂತೋಷ ನೀಡಿರಲಿಲ್ಲ. ಪುರುಷರನ್ನು ಖುಷಿಪಡಿಸಲು ತನ್ನನ್ನು ತಾನು ಬದಲಿಸಿಕೊಂಡಿದ್ದಳು ಜನೈನಾ. ಆದ್ರೂ ಪುರುಷರಿಂದ ಆಕೆಗೆ ಸಿಗಬೇಕಾದ ಗೌರವ ಸಿಕ್ಕಿರಲಿಲ್ಲ. ನನ್ನ ಈ ಹೊಸ ಸಂಬಂಧದಲ್ಲಿ ಯಾವುದೇ ತೊಂದರೆ ಆಗೋದಿಲ್ಲ ಎನ್ನುತ್ತಾಳೆ ಜನೈನಾ.ನಾನು ಹೊಂದಿರುವ ಪ್ರತಿಯೊಂದು ಗುಣವನ್ನು ಗುರುತಿಸುವ ವ್ಯಾಯಾಮವನ್ನು ಮಾಡಿದ್ದೇನೆ. ನನಗೆ ಈ ಬದ್ಧತೆಯನ್ನು ಮಾಡುವುದು ಬಹುತೇಕ ಸಾಹಸ ಆಗಿದೆ ಎಂದಿದ್ದಾಳೆ. ಜನಿನಾ ಸಂತೋಷ ದಿನಗಳ ಜೊತೆ ಕಷ್ಟದ ದಿನಗಳನ್ನು ಕಳೆದಿದ್ದಾಳೆ. ಪುರುಷರನ್ನು ಮೆಚ್ಚಿಸಲು ಸ್ವತಃ ರೂಪಿಸಿಕೊಂಡಿದ್ದಾರೆ. ಆದರೆ ಈಗ ಆತ್ಮವಿಶ್ವಾಸದ ಮಹಿಳೆಯಾಗಿ ಬದುಕುವುದಾಗಿ ಹೇಳಿಕೊಂಡಿದ್ದಾಳೆ.
ತನ್ನನ್ನು ತಾನೇ ಮದುವೆಯಾಗಿದ್ದರಿಂದ ಈ ಸಂಬಂಧದಲ್ಲಿ ನನಗೆ ದ್ರೋಹ ಮಾಡುವ ಸಾಧ್ಯತೆಯಿಲ್ಲ. ಏಕೆಂದರೆ ನನಗೆ ಏನು ನೋವುಂಟುಮಾಡುತ್ತದೆ ಮತ್ತು ನನಗೆ ಬೇಕಾದುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಇದರಿಂದ ಸಂಸಾರದ ವಿಷಯಗಳಲ್ಲಿ ಸಮಸ್ಯೆ ಬರುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಬಹಳ ವಿವರವಾಗಿ ಹೇಳಿಕೊಂಡಿದ್ದಾಳೆ.
ಗಂಡು ಗಂಡನ್ನೇ ಮದುವೆ ಆಗೋದು.. ಹೆಣ್ಣು ಹೆಣ್ಣನ್ನೇ ಮದುವೆ ಆಗುವುದನ್ನು ಸಮಾಜ ನಿಧಾನವಾಗಿ ಸ್ವೀಕರಿಸುವುದಕ್ಕೆ ಮುಂದಾಗಿದೆ. ಇದರ ಹಿಂದೆನೇ ಕೆಲವರು ಸೊಲೊಗಾಮಿ ಅಥವಾ ಸೆಲ್ಫ್ ಮ್ಯಾರೇಜ್‌ಗೆ ಮುಂದಾಗುತ್ತಿದ್ದಾರೆ. ಸದ್ಯ ಭಾರತದಲ್ಲೂ ಇದು ಹೆಚ್ಚಾಗುತ್ತಿದೆ.

ರಾಕ್ಷಸಿ ತಾಯಿಯಿಂದಲೇ ಚಿತ್ರಹಿಂಸೆಗೊಳಗಾದ ಮಗುವನ್ನು ನೋಡಬೇಕು ಎಂದಿದ್ದೇಕೆ ಧ್ರುವ ಸರ್ಜಾ! ಹೀಗ್ಯಾಕೆ ಹೇಳಿದ್ರು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 3 =
Remember me
