ನವದೆಹಲಿ:ಯೋಗ ಹಾಗೂ ಆಯುರ್ವೇದದ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತ, ಅನುಕೂಲಗಳನ್ನು ಮಾಡುತ್ತ ಬಂದಿರುವ ಪತಂಜಲಿ ಸಂಸ್ಥೆಯ ಮುಖ್ಯಸ್ಥ, ಯೋಗಗುರು ಬಾಬಾ ರಾಮ್​ದೇವ್​ ವಿರುದ್ಧ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂಬ ಒತ್ತಾಯದ ದನಿಯೊಂದು ಹುಟ್ಟಿಕೊಂಡಿದೆ. ಅಷ್ಟಕ್ಕೂ ಹೀಗೊಂದು ಆಗ್ರಹ ವ್ಯಕ್ತಪಡಿಸುತ್ತಿರುವುದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್​.
ಅಲೋಪಥಿ ವೈದ್ಯಪದ್ಧತಿ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿ, ಅಪಪ್ರಚಾರ ಮಾಡುವ ಮೂಲಕ ಬಾಬಾ ರಾಮ್​ದೇವ್​ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿರುವ ಭಾರತೀಯ ವೈದ್ಯಕೀಯ ಸಂಘವು, ಕೇಂದ್ರ ಸರ್ಕಾರ ಬಾಬಾ ರಾಮ್​ದೇವ್​ ವಿರುದ್ಧ ಕ್ರಮಜರುಗಿಸಬೇಕು ಎಂದು ಒತ್ತಾಯಿಸಿದೆ.
ಇದನ್ನೂ ಓದಿ:ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…
ಬಾಬಾ ರಾಮ್​ದೇವ್​ ಸುಶಿಕ್ಷಿತ ಸಮಾಜಕ್ಕೆ ಹಾಗೂ ದೇಶಕ್ಕೆ ಆತಂಕ ಮಾತ್ರವಲ್ಲ ಅವರಿಂದಾಗಿ ಬಡವರು ಬಲಿಪಶುವಾಗುತ್ತಿದ್ದಾರೆ. ಅವರ ವಿರುದ್ಧ ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಐಎಂಎ ಒತ್ತಾಯಿಸಿದೆ.
ರೆಮ್​ಡೆಸಿವಿರ್​, ಫೇವಿಫ್ಲ್ಯೂ ಸೇರಿ ಡ್ರಗ್​ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ಮಾನ್ಯತೆ ಇರುವ ಇತರ ಎಲ್ಲ ಔಷಧಗಳು ಕೋವಿಡ್​-19 ರೋಗಿಗಳ ಚಿಕಿತ್ಸೆಯಲ್ಲಿ ವಿಫಲವಾಗಿವೆ. ಲಕ್ಷಾಂತರ ಮಂದಿ ಅಲೋಪಥಿ ಔಷಧಗಳನ್ನು ಸೇವಿಸಿದ ಬಳಿಕ ಮೃತಪಟ್ಟಿದ್ದಾರೆ. ಅಲೋಪಥಿ ಒಂದು ಸ್ಟುಪಿಡ್ ಸೈನ್ಸ್​ ಎಂದು ರಾಮ್​ದೇವ್​ ಹೇಳಿರುವ ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಅದನ್ನು ಉಲ್ಲೇಖಿಸಿ ಐಎಂಎ ಈ ಒತ್ತಾಯ ಹೇರಿದೆ. (ಏಜೆನ್ಸೀಸ್)
ಇದನ್ನೂ ಓದಿ:ಮಗ ಮಾಡಿದ ಆ ಒಂದು ಕೆಲಸ ಅಮ್ಮನನ್ನೂ ಬಲಿ ಪಡೆಯಿತಾ?; ಪತಿ ಸತ್ತ ಕೆಲವೇ ಕ್ಷಣಗಳಲ್ಲಿ ಪತ್ನಿಗೂ ಸಾವು!
ಸಂಬಂಧಿಕರಿಗಾಗಿ ಕಾಯುತ್ತಿವೆ ಕೋವಿಡ್‌ನಿಂದ ಮೃತಪಟ್ಟ ಸಾವಿರಾರು ಜನರ ಅಸ್ಥಿಗಳು!

ಎಸ್‌ಆರ್‌ಎಸ್ ಟ್ರಾವೆಲ್ಸ್ ಮಾಲೀಕ ರಾಜಶೇಖರ್ ವಿಧಿವಶ: ಕೋವಿಡ್-19 ಸೋಂಕಿಗೆ ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + thirteen =
Remember me
