ನವದೆಹಲಿ:ಒಮಿಕ್ರಾನ್ ಪ್ರಭೇದ ಪತ್ತೆಯಾಗಿರುವುದರಿಂದ ಸೋಂಕು ತಡೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳದಿದ್ದರೆ ದೇಶದಲ್ಲಿ ಕರೊನಾ 3ನೇ ಬೃಹತ್ ಅಲೆ ಆಸ್ಪೋಟಿಸಬಹುದು. ಮೂರನೇ (ಬೂಸ್ಟರ್) ಡೋಸ್​ಗೆ ಅನುಮತಿ ನೀಡಬೇಕು ಎಂದು ಭಾರತ ವೈದ್ಯರ ಸಂಸ್ಥೆ (ಐಎಂಎ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಹಲವು ವಿಭಾಗಗಳಿಗೆ ಬೂಸ್ಟರ್ ಡೋಸ್ ನೀಡುವುದಲ್ಲದೆ 12ರಿಂದ 18 ವಯಸ್ಸಿನ ಮಕ್ಕಳಿಗೆ ಕೋವಿಡ್ ತಡೆ ಲಸಿಕೆ ನೀಡುವುದು ಅಗತ್ಯ ಎಂದೂ ಕೇಂದ್ರ ಸರ್ಕಾರಕ್ಕೆ ಐಎಂಎ ಸಲಹೆ ಮಾಡಿದೆ.
ದೇಶದಲ್ಲಿ ಒಮಿಕ್ರಾನ್ ಪ್ರಭೇದದ ಸೋಂಕು ಇನ್ನೂ ಹೆಚ್ಚಬಹುದೆಂದು ಆತಂಕ ವ್ಯಕ್ತಪಡಿಸಿರುವ ಐಎಂಎ ವೈದ್ಯರು, ಇದಕ್ಕೆ ಬೇಲಿ ಹಾಕಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದರು. ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಹಾಗೂ ಸೋಂಕು ಬೇಗನೆ ದಾಳಿ ಮಾಡುವ ಅಪಾಯವಿರುವ ವಿಭಾಗಗಳಿಗೆ ಹೆಚ್ಚುವರಿ ಬೂಸ್ಟರ್ ಡೋಸ್​ನಲ್ಲೂ ಮೊದಲ ಆದ್ಯತೆ ನೀಡುವಂತೆ ಒತ್ತಾಯಿಸಿದರು.
ಬೂಸ್ಟರ್ ಡೋಸ್​ಗೆ ಸ್ಪುಟ್ನಿಕ್ ಶಿಫಾರಸು:ಭಾರತದಲ್ಲಿ ಸ್ಪುಟ್ನಿಕ್ ಲೈಟ್ ಲಸಿಕೆಯನ್ನು ಬೂಸ್ಟರ್ ಡೋಸ್​ಗೆ ಬಳಸಬಹುದು ಎಂದು ರಷ್ಯಾದ ನೇರ ಹೂಡಿಕೆ ನಿಧಿ (ಆರ್​ಡಿಐಎಫ್) ಶಿಫಾರಸು ಮಾಡಿದೆ. ಭಾರತದಲ್ಲಿ ಸ್ಪುಟ್ನಿಕ್ ಉತ್ಪಾದನೆ ಕುರಿತ ಮಾತುಕತೆ ಪ್ರಗತಿಯಲ್ಲಿದೆ ಎಂದು ಅದು ಹೇಳಿದೆ. ಸ್ಪುಟ್ನಿಕ್ ಒಂದೇ ಡೋಸ್​ನ ಲಸಿಕೆಯಾಗಿದ್ದು ಈಗಾಗಲೇ ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಹೆಚ್ಚುವರಿ ಡೋಸ್ ಆಗಿ ಅದನ್ನು ನೀಡಬಹುದು ಎಂದು ಆರ್​ಡಿಐಎಫ್ ಅಭಿಪ್ರಾಯ ಪಟ್ಟಿದೆ.
‘ರಿಸ್ಕ್’ ದೇಶಗಳ ಪಟ್ಟಿಗೆ ಸೇರ್ಪಡೆ:ತಾಂಜಾನಿಯಾ ಮತ್ತು ಘಾನಾವನ್ನು ‘ಅಪಾಯವಿರುವ’ (ರಿಸ್ಕ್) ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ ಮಾಡಿದೆ. ಹೀಗಾಗಿ ಆ ದೇಶಗಳಿಂದ ಆಗಮಿಸುವ ಪ್ರಯಾಣಿಕರು ಹೆಚ್ಚುವರಿ ಕೋವಿಡ್ ಟೆಸ್ಟ್ ಹಾಗೂ ಕ್ವಾರಂಟೈನ್​ಗೆ ಒಳಪಡಬೇಕು.
ಭಾರತದಲ್ಲಿ ಇಳಿದ ಸೋಂಕು:ಮಂಗಳವಾರ ಬೆಳಗ್ಗೆ ಅಂತ್ಯಗೊಂಡ 24 ಗಂಟೆ ಅವಧಿಯಲ್ಲಿ ಭಾರತದಲ್ಲಿ ಕರೊನಾ ಸೋಂಕಿನ 6,822 ಪ್ರಕರಣಗಳು ದೃಢಪಟ್ಟಿವೆ. 554 ದಿನಗಳ ನಂತರ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಸತತ 11ನೇ ದಿನವೂ ಸೋಂಕಿತರ ಸಂಖ್ಯೆ 10,000ಕ್ಕಿಂತ ಕೆಳಗಿದೆ. ಈ ಅವಧಿಯಲ್ಲಿ 220 ಜನರು ಮೃತಪಟ್ಟಿದ್ದಾರೆ. ದೇಶದಲ್ಲಿ ಪ್ರಸ್ತುತ 95,014 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ ದೇಶದಾದ್ಯಂತ 128.76 ಕೋಟಿ ಡೋಸ್​ಗೂ ಅಧಿಕ ಲಸಿಕೆ ಹಾಕಲಾಗಿದೆ. 10,004 ರೋಗಿ ಗಳು ಚೇತರಿಸಿ ಕೊಂಡಿದ್ದು ಗುಣಮುಖ ರಾದವರ ಒಟ್ಟು ಸಂಖ್ಯೆ 3,40,79,612 ಆಗಿದೆ.
ಮೋದಿ, ಸೋನಿಯಾ ಕರೊನಾ ಪಾಸಿಟಿವ್ ಅಂತೆ!:ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಬಾಲಿವುಡ್ ತಾರೆಯರಾದ ಪ್ರಿಯಾಂಕ ಚೋಪ್ರಾ ಮತ್ತು ಅಕ್ಷಯ್ ಕುಮಾರ್ ಮೊದಲಾದವರು ಕರೊನಾ ಸೋಂಕಿತರಾಗಿದ್ದಾರೆ ಎಂದು ಬಿಹಾರದ ಅರ್ವಾಲ್​ನ ಕರೊನಾ ಪರೀಕ್ಷಾ ಕೇಂದ್ರವೊಂದು ವರದಿ ನೀಡಿ ಅವಾಂತರ ಎಸಗಿದೆ.
ಒಮಿಕ್ರಾನ್ ಕೇಸ್ 23ಕ್ಕೆ ಏರಿಕೆ:ಮುಂಬೈಯಲ್ಲಿ ಸೋಮವಾರ 2 ಕೇಸ್​ಗಳು ಪತ್ತೆಯಾಗುವುದ ರೊಂದಿಗೆ ಭಾರತದಲ್ಲಿ ಒಮಿಕ್ರಾನ್ ರೂಪಾಂತರಿ ಪ್ರಕರಣ ಸಂಖ್ಯೆ 23ಕ್ಕೆ ಏರಿದೆ. ಉಂಗಾಡದಲ್ಲಿ 7 ಮಂದಿಗೆ ಒಮಿಕ್ರಾನ್ ಪತ್ತೆಯಾಗಿದೆ. ಈ ಮೂಲಕ ಒಮಿಕ್ರಾನ್ ಕಾಣಿಸಿಕೊಂಡ ದೇಶಗಳ ಸಂಖ್ಯೆ 40 ದಾಟಿದೆ.
ಬಳಸದ ಲಸಿಕೆ 23 ಕೋಟಿ ಡೋಸ್:ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 23 ಕೋಟಿ ಡೋಸ್​ಗೂ ಅಧಿಕ ಲಸಿಕೆ ಬಳಕೆಯಾಗದೆ ಉಳಿದಿದ್ದು ಆ ಪೈಕಿ ಐದು ರಾಜ್ಯಗಳ ಪಾಲೇ 10 ಕೋಟಿಗೂ ಅಧಿಕವಾಗಿದೆ. ಉತ್ತರ ಪ್ರದೇಶ (2.9 ಕೋಟಿ), ಮಹಾರಾಷ್ಟ್ರ (2.2 ಕೋಟಿ), ಬಿಹಾರ (1.80 ಕೋಟಿ), ಬಂಗಾಳ (2.5 ಕೋಟಿ) ಮತ್ತು ರಾಜಸ್ಥಾನ (1.43 ಕೋಟಿ) ರಾಜ್ಯಗಳು ಬಳಸದೆ ಅತಿ ಹೆಚ್ಚು ಡೋಸ್ ಲಸಿಕೆ ಉಳಿಸಿಕೊಂಡಿರುವ ಟಾಪ್ ಐದು ರಾಜ್ಯಗಳಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
26 ಮಕ್ಕಳಿದ್ದ ಶಾಲಾ ಬಸ್​ ಅಪಘಾತ; ದಾರಿ ತಪ್ಪಿ ಹೊಲದ ಏರಿಗೆ ಡಿಕ್ಕಿ ಹೊಡೆದ ಬಸ್…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 5 =
Remember me
