ಡೆಹ್ರಾಡೂನ್​:ಕರೊನಾದ ಸಂಕಷ್ಟದ ಕಾಲದಲ್ಲಿ ಹಗಲಿರುಳು ದುಡಿಯುತ್ತಿರುವ ವೈದ್ಯರು ಇದೀಗ ಬಾಬಾ ರಾಮ್​ದೇವ್​ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕ್ಷಮೆ ಯಾಚಿಸಿ ಇಲ್ಲವಾದರೆ ಮಾನನಷ್ಟ ಮಾಡಿದ್ದಕ್ಕಾಗಿ 1000 ಕೋಟಿ ರೂಪಾಯಿ ಕೊಡಿ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ಉತ್ತರಾಖಂಡ್​ ವಿಭಾಗ ಪಟ್ಟು ಹಿಡಿದು ಕುಳಿತಿದೆ.
ಕರೊನಾಗೆ ಅಲೋಪಥಿ ಅಷ್ಟೊಂದು ಪರಿಣಾಮಕಾರಿಯಲ್ಲ ಎನ್ನುವ ಹೇಳಿಕೆಯೊಂದನ್ನು ಬಾಬಾ ರಾಮ್​ದೇವ್​ ಕೊಟ್ಟಿದ್ದರು. ಈ ವಿಚಾರ ಭಾರೀ ಚರ್ಚೆಗೆ ಬಂದಿತ್ತು. ಈ ರೀತಿಯ ತಪ್ಪು ಹೇಳಿಕೆ ನೀಡಿದ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉತ್ತರಾಖಂಡ್ ಮುಖ್ಯಮಂತ್ರಿ ತಿರಾಥ್ ಸಿಂಗ್ ಹಾಗೂ ಮುಖ್ಯ ಕಾರ್ಯದರ್ಶಿಗೆ ಉತ್ತರಾಖಂಡ್​ ಐಎಂಎ ಪತ್ರ ಬರೆದಿತ್ತು. ಈ ಬೆಳವಣಿಗೆಯಾದ ತಕ್ಷಣವೇ ಬಾಬಾ ರಾಮ್​ದೇವ್​ ಅವರು ಹೇಳಿಕೆ ವಾಪಾಸು ಪಡೆದು, ಬೇರೆ 25 ಪ್ರಶ್ನೆಗಳನ್ನು ಐಎಂಎಗೆ ಕೇಳಿದ್ದರು.
ಇದೀಗ ಐಎಂಎ ಮತ್ತೊಂದು ರೀತಿಯಲ್ಲಿ ಬಾಬಾರನ್ನು ತರಾಟೆಗೆ ತೆಗೆದುಕೊಂಡಿದೆ. ನೀವು ಹೇಳಿದ ಹೇಲಿಕೆ ತಪ್ಪೆಂದು ವಿಡಿಯೋ ಸಂದೇಶವನ್ನು ಹರಿಬಿಡಿ. ಇನ್ನು 15 ದಿನಗಳೊಳಗೆ ಲಿಖಿತ ರೂಪದಲ್ಲಿ ಕ್ಷಮೆಯಾಚಿಸಿ. ಇದು ಸಾಧ್ಯವಿಲ್ಲವೆನ್ನುವುದಾದರೆ ನಾವು 1000 ಕೋಟಿ ರೂಪಾಯಿ ಬೇಡಿಕೆ ಇಡುತ್ತೇವೆ ಎಂದು ಐಎಂಎ ನೋಟಿಸ್​ನಲ್ಲಿ ತಿಳಿಸಿದೆ. (ಏಜೆನ್ಸೀಸ್​)
‘ದುಡ್ಡಿಲ್ಲ, ಭಾರತದ ನನ್ನ ವಕೀಲರಿಗೆ ಪಾವತಿಸೋಕೆ ಹಣ ಕೊಡಿ’ ಲಂಡನ್​ ಕೋರ್ಟ್​ಗೆ ವಿಜಯ್​ ಮಲ್ಯ ಮನವಿ

ಪಿಎಂ ಕೇರ್ಸ್​ಗೆ ಲಕ್ಷಗಟ್ಟಲೆ ದೇಣಿಗೆ ನೀಡಿದವನ ತಾಯಿಗೇ ಸಿಗಲಿಲ್ಲ ಬೆಡ್​! ಕೊನೆಯುಸಿರೆಳೆದ ತಾಯಿಯ ಮುಂದೆ ಕಣ್ಣೀರಿಟ್ಟ ಮಗ

ಕಂಡ ಕಂಡಲ್ಲೇ ನಿದ್ರೆ; ನಿದ್ರೆ ಎಂದರೆ ಹೆದರುವ ಏಕೈಕ ಗ್ರಾಮವಿದು…

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:eighteen − 2 =
Remember me
