ನವದೆಹಲಿ :ಆರೋಗ್ಯಸೇವಾ ಕಾರ್ಯಕರ್ತರ ಮೇಲಿನ ಹಲ್ಲೆಗಳ ವಿರುದ್ಧ ಭಾರತೀಯ ವೈದ್ಯಕೀಯ ಸಂಘ(ಐಎಂಎ)ವು ‘ಸೇವ್​ ದ ಸೇವಿಯರ್​'(ರಕ್ಷಕನನ್ನು ರಕ್ಷಿಸಿ) ಎಂಬ ಘೋಷವಾಕ್ಯದೊಂದಿಗೆ ಜೂನ್​ 18 ರಂದು ಪ್ರತಿಭಟನೆ ಹಮ್ಮಿಕೊಂಡಿದೆ. ಪ್ರತಿಭಟನೆಗಾಗಿ ಯಾವುದೇ ಆಸ್ಪತ್ರೆಗಳನ್ನು ಮುಚ್ಚಲಾಗುವುದಿಲ್ಲ. ಬದಲಿಗೆ ಕರ್ತವ್ಯಕ್ಕೆ ಹಾಜರಾಗುವ ವೈದ್ಯರು ಕಪ್ಪು ಬ್ಯಾಡ್ಜ್, ಕಪ್ಪು ಮಾಸ್ಕ್ ಅಥವಾ ಕಪ್ಪು ಅಂಗಿ ತೊಟ್ಟು ತಮ್ಮ ವಿರೋಧವನ್ನು ಸೂಚಿಸಲಿದ್ದಾರೆ ಎಂದು ಐಎಂಎ ಅಧ್ಯಕ್ಷ ಡಾ. ಜೆ.ಎ.ಜಯಲಾಲ್ ಹೇಳಿದ್ದಾರೆ.
ಕೋವಿಡ್​ ವಾರ್ಡ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ, ಯುಪಿ ಮತ್ತು ಕರ್ನಾಟಕದಲ್ಲಿ ಥಳಿಸಲಾಗಿದೆ ಮತ್ತು ಕ್ರೂರವಾಗಿ ಹಲ್ಲೆ ಮಾಡಲಾಗಿದೆ. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಮುಂಚೂಣಿ ಕಾರ್ಮಿಕರಾಗಿ ಶ್ರಮಿಸುತ್ತಿರುವವರ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಡಾ.ಜಯಲಾಲ್ ಹೇಳಿದ್ದಾರೆ.
ಇದನ್ನೂ ಓದಿ:VIDEO | ಕರೊನಾ ರೋಗಿ ಸತ್ತಿದ್ದಕ್ಕೆ ವೈದ್ಯನನ್ನು ಹಿಗ್ಗಾಮುಗ್ಗಾ ಥಳಿಸಿದರು! ಹಲ್ಲೆ ಮಾಡಿದ 24 ಜನರು ಜೈಲಿಗೆ
ವೈದ್ಯರ ಸುರಕ್ಷೆಗಾಗಿ ಸಿಆರ್​ಪಿಸಿ ಮತ್ತು ಐಪಿಸಿ ರೀತಿಯ ಕಲಂಗಳನ್ನು ಹೊಂದಿರುವ ಕೇಂದ್ರೀಯ ಸಂರಕ್ಷಣಾ ಕಾನೂನನ್ನು ಸರ್ಕಾರ ಜಾರಿಗೊಳಿಸಬೇಕೆಂದು ಐಎಂಎ ಬೇಡಿಕೆ ಇಟ್ಟಿದೆ. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಭದ್ರತಾ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದಿದೆ.(ಏಜೆನ್ಸೀಸ್)
17 ದಿನಗಳಲ್ಲಿ ಸಿದ್ಧವಾದ 500 ಬೆಡ್​ಗಳ ಕೋವಿಡ್ ಆಸ್ಪತ್ರೆ : ಡಿಆರ್​ಡಿಒ ಚಮತ್ಕಾರ!
ಸಂಬಳ ಹೆಚ್ಚಿಸುತ್ತಿಲ್ಲ, ಮನೆ ಸಂಭಾಳಿಸಲು ಆಗುತ್ತಿಲ್ಲ ಎಂದು ಕಾರ್ಮಿಕ ಆತ್ಮಹತ್ಯೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
