ನವದೆಹಲಿ:ಕುಸ್ತಿಪಟು ಸಾಗರ್​ ರಾಣ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ 6 ದಿನಗಳ ಪೊಲೀಸ್​ ಕಸ್ಟಡಿಯಲ್ಲಿರುವ ಒಲಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್, ತನ್ನ ಸ್ನೇಹಿತರೊಂದಿಗೆ ಸೇರಿ ಸಾಗರ್​ಗೆ ಥಳಿಸುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ತೀವ್ರ ಥಳಿತಕ್ಕೆ ಒಳಗಾದ ಕುಸ್ತಿಪಟು ಸಾಗರ್,​ ಗಂಭೀರ ಗಾಯದಿಂದ ನೆಲದ ಮೇಲೆಯೇ ನರಳಾಡಿ ಪ್ರಾಣ ಬಿಟ್ಟಿರುವುದಾಗಿ ತಿಳಿದುಬಂದಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶೀಲ್​ನನ್ನು ಕಳೆದ ವಾರ ಪೊಲೀಸರು ಬಂಧಿಸಿದ್ದಾರೆ. ನಗರದಲ್ಲಿ ಕುಸ್ತಿ ಸಮುದಾಯವನ್ನು ಭಯಭೀತಗೊಳಿಸಲು ಈ ಘಟನೆಯ ವಿಡಿಯೋವನ್ನು ಸ್ನೇಹಿತನಿಂದ ರೆಕಾರ್ಡ್ ಮಾಡಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಸುಶೀಲ್​ ಕುಮಾರ್​ ಮತ್ತು ಆತನ ಸ್ನೇಹಿತರು ಮೇ 4ರಂದು ಸಾಗರ್​ ಧನಕರ್​ ಮತ್ತ ಆತನ ಸ್ನೇಹಿತರಿಬ್ಬರ ಮೇಲೆ ದೆಹಲಿಯ ಛತ್ರಸಾಲ್​ ಸ್ಟೇಡಿಯಂನಲ್ಲಿ ಹಲ್ಲೆ ಮಾಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದರು. ಗಾಯಗೊಂಡ ಮೂವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸಾಗರ್​ ಮೃತಪಟ್ಟಿದ್ದಾರೆ.
ಪೊಲೀಸ್​ ಬಂಧನದಿಂದ ರಕ್ಷಿಸಿಕೊಳ್ಳಲು ಮೇ 18ರಂದು ಸುಶೀಲ್​ ಕುಮಾರ್​ ದೆಹಲಿ ಕೋರ್ಟ್​ ಮೆಟ್ಟಲೇರಿದ್ದರು. ನನ್ನ ವಿರುದ್ಧದ ತನಿಖೆ ಪಕ್ಷಪಾತವಾಗಿದೆ ಮತ್ತು ಸಂತ್ರಸ್ತನಿಗಾದ ಯಾವುದೇ ಗಾಯಗಳಿಗೂ ನನಗೂ ಸಂಬಂಧವಿಲ್ಲ ಎಂದು ಸುಶೀಲ್​ ವಾದಿಸಿದ್ದರು. ಆದರೆ, ಪ್ರಕರಣದ ಗಂಭೀರತೆ ಅರಿತ ನ್ಯಾಯಾಲಯ ನಿರೀಕ್ಷಣಾ ಜಾಮೀನನ್ನು ವಜಾಗೊಳಿಸಿತು. ಇದೀಗ ಬಂಧನಕ್ಕೆ ಒಳಗಾಗಿರುವ ಸುಶೀಲ್​ ಕುಮಾರ್​ ವಿಚಾರಣೆ ನಡೆಯುತ್ತಿದೆ.
ಅಂದಹಾಗೆ ಸುಶೀಲ್​ 2008ರ ಬೀಜಿಂಗ್​ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಮತ್ತು 2012ರ ಲಂಡನ್​ ಒಲಿಂಪಿಕ್ಸ್​ನಲ್ಲಿ ಬೆಳ್ಳಿಯ ಪದಕವನ್ನು ಜಯಿಸಿದ್ದಾರೆ.(ಏಜೆನ್ಸೀಸ್​)
ಸೋಂಕಿತ ಮಕ್ಕಳ ಕಾಡುತ್ತಿದೆ ಹೊಸ ಸಮಸ್ಯೆ; ಕೋವಿಡ್​ನಿಂದ ಚೇತರಿಕೆ ಬಳಿಕ ಮಲ್ಟಿಸಿಸ್ಟಮ್ ಇನ್​ಫ್ಲಮೇಟರಿ ಸಿಂಡ್ರೋಮ್ ಪತ್ತೆ

ತ್ಯಾಗ, ಹೋರಾಟದ ಧೀಮಂತ ಶಕ್ತಿ ಸಾವರ್ಕರ್

ಬಿ-ಟೀಮ್ ತಿರುಗುಬಾಣ: ನಾಯಕತ್ವ ಬದಲಾವಣೆಗೆ ಯೋಗೇಶ್ವರ್ ಏಕಾಂಗಿ ಹೋರಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
