ಹೊಸದಿಲ್ಲಿ:ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ಶೀತದ ವಾತಾವರಣದಿಂದ ನಗರ ಪ್ರದೇಶಗಳು ದಟ್ಟ ಮಂಜಿನಿಂದ ಕವಿದು ಹೋಗಿದೆ. ದೆಹಲಿಯಲ್ಲಿ ಕೂಡ ಭಾರೀ ಮಂಜು ಆವರಿಸಿದ ಕಾರಣ ರೈಲು ಮತ್ತು ವಿಮಾನಗಳ ಸಮಯದಲ್ಲಿ ವಿಳಂಬವಾಗಿದೆ. ಜನವರಿ 29ರಿಂದ ಫೆಬ್ರವರಿ 3ರವರೆಗೆ ಎಲ್ಲೆಲ್ಲಿ ಭಾರೀ ಮಳೆಯಾಗಲಿದೆ ಮತ್ತು ಚಳಿ ಕಾಡಲಿದೆ ಎಂಬ ಮಾಹಿತಿಯನ್ನು ಇದೀಗ ಭಾರತೀಯ ಹವಮಾನ ಇಲಾಖೆ ಪ್ರಕಟಿಸಿದೆ.
ಇದನ್ನೂ ಓದಿ:ಜ.22 ಅಯೋಧ್ಯೆ ರಾಮಮಂದಿರ ಉದ್ಘಾಟನೆ: ಕಳೆದ 6 ದಿನಗಳಲ್ಲಿ ಭೇಟಿ ಕೊಟ್ಟ ಭಕ್ತರ ಸಂಖ್ಯೆ ಎಷ್ಟು ಲಕ್ಷ ಗೊತ್ತೇ?
ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ತೀವ್ರವಾದ ಶೀತದ ಅಲೆ ಮತ್ತು ಭಾರೀ ಮಳೆಯಾಗುವ ಮುನ್ಸೂಚನೆ ಕಂಡುಬಂದ ಬೆನ್ನಲ್ಲೇ ಇದೀಗ ಹವಮಾನ ಇಲಾಖೆ ಆರೆಂಜ್​ ಮತ್ತು ಯೆಲ್ಲೋ ಅಲರ್ಟ್​ ಘೋಷಿಸಿದೆ. ಪಶ್ಚಿಮ ಹಿಮಾಲಯ ಪ್ರದೇಶಗಳಲ್ಲಿ ಚಳಿ ಮುಂದುವರೆಯಲಿದ್ದು, ಜನವರಿ 30 ಮತ್ತು 31ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.
ಮುಂದಿನ ಎರಡು ದಿನಗಳಲ್ಲಿ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ದಟ್ಟವಾದ ಮಂಜು ಮತ್ತು ತೀವ್ರ ಚಳಿಯ ಪರಿಸ್ಥಿತಿಗಳು ಮುಂದುವರಿಯುವ ಸಾಧ್ಯತೆಯಿದ್ದು, ಫೆ.3 ರವರೆಗೆ ಜಮ್ಮು, ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್, ಮುಜಫರಾಬಾದ್ ಮತ್ತು ಹಿಮಾಚಲ ಪ್ರದೇಶದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಬೇಕಿದೆ
ಜನವರಿ 31 ರಿಂದ ಫೆಬ್ರವರಿ 2ರ ಮಧ್ಯೆ ಉತ್ತರಾಖಂಡದಲ್ಲಿ ಸಾಧಾರಣ ಮಳೆಯಾಗಲಿದ್ದು, ಪಂಜಾಬ್, ಚಂಡೀಗಢ, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶದಲ್ಲಿ ಭಾರೀ ಮಳೆಯ ಮುನ್ಸೂಚನೆಯಿದೆ ಎಂದು ತಿಳಿಸಲಾಗಿದೆ,(ಏಜೆನ್ಸೀಸ್).
69ನೇ ಫಿಲ್ಮ್‌ಫೇರ್ ಪ್ರಶಸ್ತಿ: ‘ಅನಿಮಲ್’ಗೆ ಲಭಿಸಿತು ಅತ್ಯುತ್ತಮ ಸಂಗೀತ ಆಲ್ಬಮ್ ಅವಾರ್ಡ್​!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 + 2 =
Remember me
