ಹೊಸದಿಲ್ಲಿ:ಮುಂದಿನ ಎರಡು ದಿನಗಳ ಕಾಲ ಗುಡುಗು ಸಹಿತ ಮಳೆ ಸುರಿಯಲಿದ್ದು, ಹವಾಮಾನದಲ್ಲಿ ಉಂಟಾಗುವ ಬದಲಾವಣೆಯಿಂದ ಮಳೆಯ ಮುನ್ಸೂಚನೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ದೆಹಲಿಯಲ್ಲಿ ಗರಿಷ್ಠ ತಾಪಮಾನವು 18.5 ಡಿಗ್ರಿ ಸೆಲ್ಸಿಯಸ್ ಆಗಿತ್ತು, ಇದು ಋತುಮಾನದ ಸರಾಸರಿಗಿಂತ ನಾಲ್ಕು ಡಿಗ್ರಿ ಕಡಿಮೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ರಾಜಸ್ಥಾನ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್​ನಲ್ಲಿ ಕನ್ನಡ ಚಿತ್ರಕ್ಕೆ ಪ್ರಶಸ್ತಿ! ಯಾವ ಚಿತ್ರಕ್ಕೆ? ಇಲ್ಲಿದೆ ಮಾಹಿತಿ
ಇಂದು ದಟ್ಟವಾದ ಮಂಜಿನ ಜತೆಗೆ ಮೋಡ ಕವಿದ ವಾತಾವರಣವಿದ್ದು, ರಾತ್ರಿಯ ವೇಳೆ ಮಳೆ ಬೀಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದೆ. ಇದರೊಟ್ಟಿಗೆ ತುಂತುರು ಮಳೆಯಾಗುವ ಸಾಧ್ಯತೆ ಕೂಡ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 20 ಮತ್ತು 7 ಡಿಗ್ರಿ ಸೆಲ್ಸಿಯಸ್ ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ ದಟ್ಟವಾದ ಮಂಜಿನಿಂದಾಗಿ 23 ರೈಲುಗಳು ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ.
ಕಳೆದ ಒಂದೆರೆಡು ವಾರಗಳಿಂದಲೂ ದೆಹಲಿಯ ಹವಾಮಾನದಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿದ್ದು, ದಟ್ಟವಾದ ಮಂಜಿನಿಂದ ನಗರದ ಹಲವು ಪ್ರದೇಶಗಳು ಮುಚ್ಚಲ್ಪಟ್ಟಿವೆ. ದಟ್ಟ ಮಂಜು ಆವರಿಸಿದ ಕಾರಣ ಹಲವಾರು ವಿಮಾನ ಮತ್ತು ರೈಲುಗಳ ವೇಳಾಪಟ್ಟಿಯಲ್ಲಿ ವಿಳಂಬಗೊಂಡು, ರೈಲ್ವೇ ಇಲಾಖೆಗೆ ಭಾರೀ ನಷ್ಟ ಕೂಡ ಉಂಟಾಗಿದೆ,(ಏಜೆನ್ಸೀಸ್).
1 ನಿಮಿಷದಲ್ಲಿ 80 ಬಸ್ಕಿ ಹೊಡೆದ 7 ತಿಂಗಳ ಮಗು! ದಾಖಲೆಗೆ ಒಲಿದುಬಂತು ನೋಬೆಲ್​ ವರ್ಲ್ಡ್​ ರೆಕಾರ್ಡ್​​ ಪ್ರಶಸ್ತಿ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:ten − eight =
Remember me
