ನವದೆಹಲಿ:ದಕ್ಷಿಣ ಅಂಡಮಾನ್​​ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ಕೆಲ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಕಟ್ಟೆಚ್ಚರ ನೀಡಿದೆ.
ಶನಿವಾರ ಸಂಜೆಯೊಳಗೆ ಚಂಡಮಾರುತವಾಗಿ ಬದಲಾಗಲಿದ್ದು, ಭಾನುವಾರ ಸಂಜೆಯೊಳಗೆ ಒಡಿಶಾದಲ್ಲಿ ಭಾರೀ ಮಳೆಯಾಗಲಿದ್ದು, ಮೇ 10 ರ ಬಳಿಕ ಉತ್ತರ ಆಂದ್ರಪ್ರದೇಶ ಮತ್ತು ಒಡಿಶಾದ ಮೂಲಕ ಮಳೆ ಸಹಿತ ಬಿರುಗಾಳಿ 40-50 ಕಿ.ಮೀ. ವೇಗದವರೆಗೆ ಚಲಿಸಲಿದ್ದು, ವಾಯುವ್ಯ ಬಂಗಾಳ ಕೊಲ್ಲಿಯನ್ನು ತಲುಪಲಿದೆ ಎಂದು ಎಚ್ಚರಿಕೆ ನೀಡಿದೆ.
ಈ ನಡುವೆ ಉತ್ತರ ಭಾರತದಾದ್ಯಮತ ರಾಜಸ್ಥಾನ, ಹರಿಯಾಣ, ದಿಲ್ಲಿ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ವಿದರ್ಭ ಮಹಾರಾಷ್ಟ್ರದಲ್ಲಿ ಬಿಸಿಗಾಳಿ ಮಟ್ಟ ಮತ್ತಷ್ಟು ಏರಿಕೆಯಾಗಲಿದ್ದು, ಇದೂ ಕೂಡ ಮೇ 10 ರ ನಂತರ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ಹೇಳಿದೆ.
ಶುಕ್ರವಾರ ಅಂಡಮಾನ್​ ಸಮುದ್ರದಲ್ಲಿ ರೂಪಗೊಂಡಿರುವ ಕಡಿಮೆ ಒತ್ತಡದ ಬಿರುಗಾಳಿಯು ತೀವ್ರಗೊಂಡು ಮುಂದಿನ ವಾರದ ಆರಂಭದಲ್ಲಿ ಆಂದ್ರಪ್ರದೇಶ ಮತ್ತು ಒಡಿಶಾ ತೀರಗಳನ್ನು ತಲುಪುವ ಸಾಧ್ಯತೆ ಇದೆ,ಇದರಿಂದಾಗಿ ಪೂರ್ವ ಕರಾವಳಿ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಶುಕ್ರವಾರ ಹವಾಮಾಣ ಇಲಾಖೆ ತಿಳಿಸಿದೆ.
LPG ಸಿಲಿಂಡರ್​ ದರದಲ್ಲಿ ಮತ್ತೆ 50 ರೂ. ಹೆಚ್ಚಳ! ಇಂದಿನಿಂದಲೇ ಜಾರಿ, ಗ್ರಾಹಕರಿಗೆ ಬೆಲೆ ಏರಿಕೆ ಬರೆ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 2 =
Remember me
