ಅಮರಾವತಿ:ಕೌಶಲ್ಯಾಭಿವೃದ್ದಿ ನಿಗಮದಲ್ಲಿನ ಬಹುಕೋಟಿ ಅಕ್ರಮ ಸೇರಿದಂತೆ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಜೈಲು ಸೇರಿರುವ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಜೀವಕ್ಕೆ ಆಪತ್ತಿದೆ ಎಂದು ಅವರ ಪುತ್ರ ನಾರಾ ಲೋಕೇಶ್​ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಅವರು, ಚಂದ್ರಬಾಬು ನಾಯ್ಡು ಅವರ ಆರೋಗ್ಯದ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಜೈಲಿನಲ್ಲಿ ಚಂದ್ರಬಾಬು ನಾಯ್ಡು ಅವರ ಜೀವಕ್ಕೆ ಬೆದರಿಕೆ ಇದೇ ಎಂದಿದ್ದಾರೆ.
భ‌ద్ర‌త‌లేని జైలులో చంద్రబాబు ఆరోగ్యం క్షీణించేలా చేసి ఆయ‌న‌కి ప్రాణ‌హాని తల‌పెడుతున్నారు. ఎన్న‌డూ ఏ త‌ప్పూ చేయ‌ని 73 ఏళ్ల చంద్ర‌బాబు ప‌ట్ల రాక్ష‌సంగా వ్య‌వ‌హ‌రిస్తోంది ఈ ప్ర‌భుత్వం. వ్య‌వ‌స్థ‌ల్ని మేనేజ్ చేస్తూ, జ్యుడీషియ‌ల్ రిమాండ్‌లో ఉంచుతూనే 73 ఏళ్ల చంద్ర‌బాబు గారిని అనారోగ్య…pic.twitter.com/1KA2ZGaWaB
ಇದನ್ನೂ ಓದಿ:ಶವದ ಪಕ್ಕ ಕುಳಿತು ರೋದಿಸಿದ ಕೋತಿ; ಮನಕಲಕುವ ದೃಶ್ಯ ವೈರಲ್
ವಿಜಯವಾಡದಲ್ಲಿರುವ ರಾಜಮಹೇಮದ್ರವರ್ಮ ಕೇಂದ್ರ ಕಾರಾಗೃಹದಲ್ಲಿ ಚಂದ್ರಬಾಬು ನಾಯ್ಡು ಅವರು ಬಹಳ ಭೀಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ತೀವ್ರ ಸೋಂಕಿನಿಂದ ಬಳಲುತ್ತಿದ್ದಾರೆ. ಅವರಿಗೆ ಯಾವುದೇ ವೈದ್ಯಕೀಯ ನೆರವನ್ನು ನೀಡಲಾಗುತ್ತಿಲ್ಲ. ಆಂಧ್ರಪ್ರದೇಶ ಸರ್ಕಾರವು ಅವರಿಗೆ ಸ್ಟೆರಾಯ್ಡ್​ಗಳನ್ನು ನೀಡಿ ಆರೋಗ್ಯ ಹದಗೆಡುವಂತೆ ಮಾಡಲು ಯತ್ನಿಸುತ್ತಿದೆ.
ಅವರು ಬಂಧನವಾದ ದಿನದಿಂದಲ್ಲೂ ಇಲ್ಲಿಯವರೆಗೂ ಅವರ ಆರೋಗ್ಯ ಕ್ಷೀಣಿಸುತ್ತಿದೆ. ಈ ವಿಚಾರವನ್ನು ನಾವು ಜೈಲಿನ ಅಧಿಕಾರಿಗಳು ಹಾಗೂ ವೈದ್ಯರ ಬಳಿ ವಿಚಾರಿಸಿದಾಗ ಅವರು ಯಾವ ಉತ್ತರವನ್ನು ನೀಡದೆ ತೆರಳಿದ್ದಾರೆ. ಒಂದು ವೇಳೆ ಚಂದ್ರಬಾಬು ನಾಯ್ಡು ಅವರಿಗೆ ಏನಾದರೂ ಹೆಚ್ಚು ಕಡಿಮೆ ಆದಲ್ಲಿ ಅದಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್​ಮೋಹನ್​ ರೆಡ್ಡಿ ಅವರೇ ನೇರ ಹೊಣೆ ಎಂದು ಟಿಡಿಪಿ ಪ್ರದಾನ ಕಾರ್ಯದರ್ಶಿ ನಾರಾ ಲೋಕೇಶ್​ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 18 =
Remember me
