ದೆಹಲಿ:ದೇಶದ ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಬಾಹುಬಲಿ ಬೇಲಿಯನ್ನು ಅಳವಡಿಸಲು ಚಿಂತಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ನಿತಿನ್​​ ಗಡ್ಕರಿ ಹೇಳಿದ್ದಾರೆ.ಜನರು ಮತ್ತು ಜಾನುವಾರುಗಳು ರಸ್ತೆದಾಟುವುದನ್ನು ತಡೆಯಲು, ಇದರಿಂದಾಗುವ ಅಪಘಾತವನ್ನು ತಪ್ಪಿಸಲು ಜತೆಗೆ ಪ್ರಾಣಹಾನಿಯನ್ನು ತಡೆಯುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲು ಯೋಚಿಸಲಾಗುತ್ತಿದೆ ಎಂದು ಗಡ್ಕರಿ ತಿಳಿಸಿದ್ದಾರೆ.ಇದನ್ನೂ ಓದಿ:ವಿಷಾನಿಲ ಸೋರಿಕೆ: 3 ಮಕ್ಕಳು ಸೇರಿದಂತೆ 16 ಮಂದಿ ಸಾವುಈ ಬಾಹುಬಲಿ ಬೇಲಿಯು 1.20 ಮೀಟರ್ ಎತ್ತರವನ್ನು ಹೊಂದಿದ್ದು, ಈ ಬೇಲಿಯನ್ನು ಬಿದಿರನ್ನು ಬಳಸಿ ನಿರ್ಮಿಸಲಾಗಿದೆ. ಬಿದಿರನ್ನು ಕ್ರಿಯೋಸೋಟ್ ಎಣ್ಣೆಯಿಂದ ಸಂಸ್ಕರಿಸುವುದರ ಜತೆಗೆ ಹೆಚ್ಚಿನ ಸಾಂದ್ರತೆಯ ಪಾಲಿಥಿಲೀನ್‌ನಿಂದ ಲೇಪಿಸಲಾಗುತ್ತದೆ. ಇದು ಉಕ್ಕಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಪ್ರಧಾನಿಗಳು ಛತ್ತಿಸಗಡ್​​ಕ್ಕೆ ಭೇಟಿ ಕೊಡುವ ಮುಂಚೆ, ರಾಷ್ಟ್ರೀಯ ಹೆದ್ದಾರಿ-30ರ ಬದಿಯಲ್ಲಿ ಮೊದಲ ಬಾರಿಗೆ ಅಳವಡಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ.ಅಲ್ಲದೇ, ಈ ಬೇಲಿಯು ಬೆಂಕಿಯಿಂದಲೂ ಸುರಕ್ಷತೆಯನ್ನು ನೀಡುವುದರ ಜತೆಗೆ ಎಲ್ಲಾ ಹೆದ್ದಾರಿಗಳಲ್ಲಿ ಉಂಟಾಗುತ್ತಿರುವ ವನ್ಯಜೀವಿಗಳು ಮತ್ತು ಜಾನುವಾರುಗಳ ಹಾನಿಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂದು ಗಡ್ಕರಿ ಟ್ವೀಟ್​ ಮಾಡಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − eight =
Remember me
