ಹೈದರಾಬಾದ್​​:ಆಂಧ್ರಪ್ರದೇಶದ ಮಾಜಿ ಸಿಎಂ ಹಾಗೂ ತೆಲುಗು ದೇಸಂ ಪಾರ್ಟಿ(ಟಿಡಿಪಿ)ಯ ಅಧ್ಯಕ್ಷ ಎನ್​.ಚಂದ್ರಬಾಬು ನಾಯ್ಡು ಅವರು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಟಿಡಿಪಿ ಕಛೇರಿ ಮತ್ತು ಕಾರ್ಯಕರ್ತರ ಮೇಲೆ ನಡೆದ ಹಿಂಸಾತ್ಮಕ ದಾಳಿಯನ್ನು ಖಂಡಿಸಿರುವ ಅವರು, ಸಿಎಂ ಜಗಮೋಹನ್​ ರೆಡ್ಡಿ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ವಿಫಲಗೊಂಡಿದೆ ಎಂದಿದ್ದಾರೆ.
ಮಂಗಳಗಿರಿಯಲ್ಲಿ ಟಿಡಿಪಿ ಕೇಂದ್ರ ಕಛೇರಿ ಮೇಲೆ ನಡೆದ ದಾಳಿಗೆ ಆಡಳಿತಾರೂಢ ಯುವಜನ ಸ್ರಮಿಕ ರೈತು ಕಾಂಗ್ರೆಸ್​ ಪಾರ್ಟಿ(ವೈಎಸ್​ಆರ್​ಸಿಪಿ)ಯೇ ಕಾರಣವಾಗಿದ್ದು, ರಾಜ್ಯದ ಪೊಲೀಸ್​ ಇಲಾಖೆ ಅದರ ಕೈಗೊಂಬೆಯಾಗಿದೆ ಎಂದಿದ್ದಾರೆ. ಆಡಳಿತ ಪಕ್ಷದವರು ತಮ್ಮ ಪಕ್ಷದ ನಾಯಕರು ಮತ್ತು ಕಛೇರಿಯ ಮೇಲೆ ಆಕ್ರಮಣ ನಡೆಸಲು ಪೊಲೀಸರು ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿರುವ ನಾಯ್ಡು, “ಕೊನೆಗೆ ಟಿಡಿಪಿಯ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ. ಇದು ನಮ್ಮ ಪೊಲೀಸ್ ವ್ಯವಸ್ಥೆಯ ಕಾರ್ಯವೈಖರಿ” ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ:ಮತಾಂತರಗೊಂಡ ಕಳ್ಳಿಗೆ ಜೈನ ಮಂದಿರಗಳೇ ಟಾರ್ಗೆಟ್!
ರಾಜ್ಯ ಸರ್ಕಾರವು ಸಂಘಟಿತ ಮಾಫಿಯಾ ಗ್ಯಾಂಗ್​ಗಳಿಗೆ ಕಾರಣವಾಗಿದೆ. ಎಲ್ಲೇ ಗಾಂಜಾ ಪತ್ತೆಯಾದರೂ ಅದರ ಮೂಲ ಆಂಧ್ರಪ್ರದೇಶದಲ್ಲಿರುತ್ತದೆ. ರಾಜ್ಯದಲ್ಲಿ 25,000 ಎಕರೆ ಭೂಮಿಯಲ್ಲಿ 8000 ಕೋಟಿ ರೂಪಾಯಿ ಮೌಲ್ಯದ ಗಾಂಜಾ ಬೆಳೆಯಲಾಗುತ್ತಿತ್ತು ಎಂದು ಆರೋಪಿಸಿರುವ ಚಂದ್ರಬಾಬು ನಾಯ್ಡು, “ರಾಜ್ಯವು ಮಾದಕ ವಸ್ತುಗಳಿಂದ ಮುಕ್ತವಾಗುವವರೆಗೆ ಟಿಡಿಪಿ ಹೋರಾಟ ನಡೆಸಲಿದೆ. ಟಿಡಿಪಿ ಯಾವಾಗಲೂ ಜನರಿಗಾಗಿ ಮತ್ತು ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದೆ. ಈ ರೀತಿಯ ಆಕ್ರಮಣ, ಪ್ರಕರಣಗಳು ಮತ್ತು ಕಿರುಕುಳವು ನಮ್ಮ ಪಕ್ಷವನ್ನು ಬಲಹೀನಗೊಳಿಸುವುದಿಲ್ಲ” ಎಂದಿದ್ದಾರೆ.
ಬುಧವಾರದಂದು ಆಂಧ್ರ ಸಿಎಂ ವೈ.ಎಸ್​.ಜಗನ್ ಮೋಹನ್ ರೆಡ್ಡಿ ವಿರುದ್ಧ ಮಾತಾಡಿದ್ದರೆನ್ನಲಾದ ಟಿಡಿಪಿ ವಕ್ತಾರ ಪಟ್ಟಾಭಿ ರಾಮ್​ರನ್ನು ವಿಜಯವಾಡ ಪೊಲೀಸರು ಬಂಧಿಸಿದ್ದರು. ಅವರ ಹೇಳಿಕೆಗಳು ಸಿಎಂ ರೆಡ್ಡಿ ಅವರ ಅವಹೇಳನ ಮಾಡಿದ್ದರಿಂದ ವೈಎಸ್​ಆರ್​ಸಿಪಿ ಕಾರ್ಯಕರ್ತರು ಟಿಡಿಪಿ ಕಛೇರಿ ಮೇಲೆ ದಾಳಿ ನಡೆಸಿದ್ದರು ಎನ್ನಲಾಗಿತ್ತು.(ಏಜೆನ್ಸೀಸ್)
ಮುಂದುವರೆದ ಡ್ರಗ್ಸ್​ ಕೇಸ್​ ತನಿಖೆ… ಯುವ ನಟಿಗೆ ಎನ್​ಸಿಬಿ ಸಮನ್ಸ್​!

100 ದೇಶಗಳಿಗೆ ಮಾದರಿಯಾದ ಕೋವಿನ್! ಲಸಿಕೆ ಸಾಧನೆಯಲ್ಲಿ ಈ ಆ್ಯಪ್​ನ ಪಾತ್ರ ಮಹತ್ತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
