ನವದೆಹಲಿ:ಭಾರತದ ಜತೆಗಿನ ದ್ವಿಪಕ್ಷೀಯ ಸಂಬಂಧವನ್ನು ಹಾಡಿ ಹೊಗಳಿದ ನಾರ್ವೆ ದೇಶ ಡೆಪ್ಯುಟಿ ವಿದೇಶಾಂಗ ಸಚಿವ ಆಂಡ್ರಿಯಾಸ್ ಮೋಟ್ಜ್‌ಫೆಲ್ಡ್ ಕ್ರಾವಿಕ್, ಪ್ರಮುಖ ವಿಚಾರ ಅಥವಾ ಯಾವುದೇ ಸಮಸ್ಯೆಗಳು ಅಂತಾ ಬಂದಾಗ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವನ್ನು ಪ್ರಗತಿಗೆ ‘ಮೂಲಭೂತ’ವಾಗಿ ನೋಡುತ್ತೇವೆ ಎಂದಿದ್ದಾರೆ.
ಗುರುವಾರ ಎಎನ್​ಐ ಸುದಿಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಕ್ರಾವಿಕ್​, ಭಾರತವು ಪರಿಹಾರದ ಭಾಗವಾದೇ ಯಾವುದೇ ಅಂತಾರಾಷ್ಟ್ರೀಯ ಸಮಸ್ಯೆಗಳಿಗೆ ಜಾಗತಿಕ ಪರಿಹಾರ ಹುಡುಕುವು ಅಸಾಧ್ಯ ಎಂದು ಒತ್ತಿ ಹೇಳಿದರು.
ಹವಾಮಾನ ಬದಲಾವಣೆಯನ್ನು ಎದುರಿಸುವುದು, ಬಹುಪಕ್ಷೀಯತೆಯನ್ನು ವಿಸ್ತರಿಸುವುದು, ಅಂರಾರಾಷ್ಟ್ರೀಯ ಕಾನೂನಿನಲ್ಲಿ ಆಧಾರವಾಗಿರುವ ಪರಿಹಾರಗಳನ್ನು ಕಂಡುಹಿಡಿಯುವುದು ಸೇರಿದಂತೆ ನಮ್ಮ ಕಾಲಘಟ್ಟದ ಪ್ರಮುಖ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ಪ್ರಗತಿಗಾಗಿ ನಾವು ಭಾರತವನ್ನು ಮೂಲಭೂತವಾಗಿ ನೋಡುತ್ತೇವೆ ಮತ್ತು ಭಾರತವಿಲ್ಲದೆ ಯಾವುದೇ ಜಾಗತಿಕ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ನಾನು ಅನೇಕ ಸಂದರ್ಭಗಳಲ್ಲಿ ವಿವಿಧ ಸಚಿವಾಲಯಗಳ ಬಳಿ ಹೇಳಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ನಾರ್ವೆ-ಭಾರತ ಪಾಲುದಾರಿಕೆ ಮತ್ತು ಈ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದರ ಕುರಿತು ಮತ್ತಷ್ಟು ಮಾತನಾಡುತ್ತಾ, ಭಾರತವನ್ನು “ಪ್ರಮುಖ ಪಾಲುದಾರ” ಎಂದು ಕರೆದ ಕ್ರಾವಿಕ್​, ಈ ಎರಡು ದೇಶಗಳು ಯಾವುದೇ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಸಮಾನವಾಗಿ ಬದ್ಧವಾಗಿವೆ ಎಂದರು.
ಭಾರತ-ನಾರ್ಡಿಕ್ ಶೃಂಗಸಭೆಯ ಕುರಿತು ಮಾತನಾಡಿದ ಕ್ರಾವಿಕ್​, ನಮ್ಮ ಪಾಲುದಾರಿಕೆಯು ಮುಂದುವರಿಯುವುದನ್ನು ನಾವು ನೋಡುತ್ತಿರುವ ಸಂದರ್ಭದಲ್ಲಿ ಈ ಶೃಂಗಸಭೆಯು ನಮ್ಮ ಎರಡೂ ಸರ್ಕಾರಗಳಿಗೆ ನಂಬಿಕೆಯ ಒಪ್ಪಂದವಾಗಿದೆ ಎಂದು ಹೇಳಿದರು. ಉನ್ನತ ಮಟ್ಟದ ಭೇಟಿಗಳ ನಡುವೆ ಕ್ರಾವಿಕ್​ ಅವರು ಭಾರತೀಯ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಓಸ್ಲೋಗೆ ಭೇಟಿ ನೀಡುವಂತೆ ಆಹ್ವಾನಿಸಿರುವುದಾಗಿ ಬಹಿರಂಗಪಡಿಸಿದರು. ಮುಂದಿನ ವರ್ಷ ನಡೆಯಲಿರುವ ನಾರ್ಡಿಕ್-ಇಂಡಿಯಾ ಶೃಂಗಸಭೆಯಲ್ಲಿ ಭಾರತದ ಪ್ರಧಾನ ಮಂತ್ರಿಯನ್ನು ನೋಡಲು ಎದುರು ನೋಡುತ್ತಿರುವುದಾಗಿ ತಿಳಿಸಿದರು.
ಭಾರತವನ್ನು ಮಾರುಕಟ್ಟೆಯಾಗಿ ಹೇಗೆ ನೋಡುತ್ತಾರೆ ಎಂಬುದರ ಕುರಿತು ಮಾತನಾಡಿದ ಕ್ರಾವಿಕ್​, ಭಾರತೀಯ ಮಾರುಕಟ್ಟೆಯೊಂದಿಗೆ ತೊಡಗಿಸಿಕೊಳ್ಳುವುದು ಆರ್ಥಿಕ ಕಾರಣಗಳಿಗಾಗಿ ಮಾತ್ರವಲ್ಲದೆ ರಾಜಕೀಯ ಕಾರಣಗಳಿಗಾಗಿಯೂ ತುಂಬಾ ಮುಖ್ಯವಾಗಿದೆ ಮತ್ತು ನಾರ್ವೆ, ಭಾರತವನ್ನು ‘ಸೇತುವೆ ನಿರ್ಮಾಣಕಾರ’ ಎಂದು ನೋಡುತ್ತದೆ ಎಂದರು.(ಏಜೆನ್ಸೀಸ್​)
ಕಸಬ್​ನನ್ನು​ ಗುರುತಿಸಿದ ಅಪ್ರಾಪ್ತೆ ಈಗ 24ರ ಯುವತಿ! ದೇವಿಕಾಳ ಹೋರಾಟದ ಬದುಕೇ ಒಂದು ಸ್ಫೂರ್ತಿ

ಪ್ರವಾಸಿ ಪ್ರಿಯರಿಗೆ ಗುಡ್​ ನ್ಯೂಸ್​: 2024ರಲ್ಲಿ ಇರಲಿವೆ 9 ಲಾಂಗ್​ ವೀಕೆಂಡ್ಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 19 =
Remember me
