ಮುಂಬೈ:ಫೆಬ್ರವರಿ 1 ರಿಂದ ಹಣ ವರ್ಗಾವಣೆಯ ವಿಧಾನವು ಬದಲಾಗುತ್ತಿದೆ. ಈಗ ನೀವು ಈ ವಿಧಾನದ ಮೂಲಕವೂ 5 ಲಕ್ಷ ರೂಪಾಯಿವರೆಗೆ ಹಣ ಕಳುಹಿಸಬಹುದು.
ಐಎಂಪಿಎಸ್ (IMPS- Immediate Payment Service- ತಕ್ಷಣ ಹಣ ಪಾವತಿ ಸೇವೆ) ನಲ್ಲಿ ಇಂತಹ ಬದಲಾವಣೆ ಮಾಡಲಾಗಿದೆ. ನೆಟ್​ ಬ್ಯಾಂಕಿಂಗ್​ನಲ್ಲಿ ನೀವು ಇನ್ನು ಮುಂದೆ 5 ಲಕ್ಷ ರೂ.ವರೆಗೆ ಹಣವನ್ನುಐಎಂಪಿಎಸ್​ನಲ್ಲಿ ರವಾನಿಸಬಹುದು.
ತ್ವರಿತ ಇಂಟರ್‌ಬ್ಯಾಂಕ್ ಎಲೆಕ್ಟ್ರಾನಿಕ್ ಫಂಡ್ ವರ್ಗಾವಣೆ ಸೇವೆ ಇದಾಗಿದೆ. ಇಂಟರ್​ನೆಟ್​ ಬ್ಯಾಂಕಿಗ್ ಮೂಲಕ ತ್ವರಿತವಾಗಿ ಹಣ ವರ್ಗಾವಣೆ ಮಾಡುವ ವ್ಯವಸ್ಥೆ ಇದಾಗಿದೆ.
ಫೆಬ್ರವರಿ 1 ರಿಂದ IMPS ಮೂಲಕ ಹಣ ವರ್ಗಾವಣೆ ಮಾಡುವ ನಿಯಮದಲ್ಲಿ ಬದಲಾವಣೆಯಾಗಲಿದೆ.ಈಗ ನೀವು IMPS ಮೂಲಕ ಯಾವುದೇ ವೆಚ್ಚವಿಲ್ಲದೆ ಹಣವನ್ನು ಪಾವತಿಸಬಹುದು ಅಥವಾ ವರ್ಗಾವಣೆ ಮಾಡಬಹುದು.
ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆಯು ಒಂದು ಬ್ಯಾಂಕ್‌ನಿಂದ ಇನ್ನೊಂದು ಬ್ಯಾಂಕ್‌ಗೆ ಹಣ ವರ್ಗಾವಣೆಯನ್ನು ತೊಂದರೆಯಿಲ್ಲದಂತೆ ಮಾಡಿದೆ. ಕೆಲವೇ ಕ್ಲಿಕ್‌ಗಳು ಮತ್ತು ಕೆಲವು ವಿವರಗಳೊಂದಿಗೆ ಕೆಲಸ ಮುಗಿಸಬಹುದು. ಫೆಬ್ರವರಿ 1 ರಂದು, ಬಳಕೆದಾರರು ಶೀಘ್ರದಲ್ಲೇ ಸ್ವೀಕರಿಸುವವರ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ಹೆಸರನ್ನು ಸೇರಿಸುವ ಮೂಲಕ IMPS ಮೂಲಕ ಹಣವನ್ನು ವರ್ಗಾಯಿಸಲು ಸಾಧ್ಯವಾಗುತ್ತದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಪ್ರಕಾರ, ಫಲಾನುಭವಿಯನ್ನು ಮುಂಚಿತವಾಗಿಯೇ ಇಂಟರ್​ನೆಟ್​ ಬ್ಯಾಂಕಿಂಗ್​ನಲ್ಲಿ ಸೇರಿಸುವ ಅಗತ್ಯವಿಲ್ಲ ಮತ್ತು IFSC ಕೋಡ್ ಕೂಡ ಅಗತ್ಯವಿಲ್ಲ.
ತಕ್ಷಣದ ಪಾವತಿ ಸೇವೆ (IMPS) ಹಣ ವರ್ಗಾವಣೆಗೆ ಸಾಮಾನ್ಯವಾಗಿ ಬಳಸುವ ವಿಧಾನಗಳಲ್ಲಿ ಒಂದಾಗಿದೆ. ಇದು 24×7 ತ್ವರಿತ ದೇಶೀಯ ಹಣ ವರ್ಗಾವಣೆ ಸೌಲಭ್ಯವನ್ನು ಒದಗಿಸುವ ಪ್ರಮುಖ ಪಾವತಿ ವ್ಯವಸ್ಥೆಯಾಗಿದೆ. ಅಲ್ಲದೆ, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳು, ಬ್ಯಾಂಕ್ ಶಾಖೆಗಳು, ATM ಗಳು, SMS ಮತ್ತು IVRS ನಂತಹ ವಿವಿಧ ಚಾನಲ್‌ಗಳ ಮೂಲಕ ಪ್ರವೇಶಿಸಬಹುದಾಗಿದೆ.

ತ್ರೈಮಾಸಿಕದಲ್ಲಿ ಲಾಭ 5 ಪಟ್ಟು ಹೆಚ್ಚಳ: ಟೈರ್ ತಯಾರಿಕೆ ಕಂಪನಿ ಷೇರುಗಳಿಗೆ ಬರುವುದೇ ಬೇಡಿಕೆ?

ರೂ 2000 ಕೋಟಿಯ ಆರ್ಟಿಫಿಷಿಯಲ್​ ಇಂಟಲಿಜೆನ್ಸ್​ ಒಪ್ಪಂದ: ಒಂದೇ ತಿಂಗಳಲ್ಲಿ 61% ಹೆಚ್ಚಿರುವ ಮಿಡ್-ಕ್ಯಾಪ್ ಷೇರು ಖರೀದಿಗೆ ತಜ್ಞರ ಸಲಹೆ

ಸೋಮವಾರಷ್ಟೇ ದಾಖಲೆ ಏರಿಕೆ ಕಂಡಿದ್ದ ಷೇರು ಸೂಚ್ಯಂಕ ಮಂಗಳವಾರ 801.67 ಅಂಕ ಕುಸಿತ ಕಂಡಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 1 =
Remember me
