ನವದೆಹಲಿ:ಹೊಸ ಪಾಕಿಸ್ತಾನದ ಭರವಸೆ ನೀಡಿದ ಇಮ್ರಾನ್​ ಖಾನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಜತೆಗೆ ಐವರು ಬೆಂಬಲಿಗರನ್ನೂ ಜೈಲಿನ ಒಳಗೆ ಹಾಕಿದ ಪ್ರಸಂಗ ನಡೆದಿದೆ. ಗೆದ್ದು ಬೀಗಿದ ಇವರೆಲ್ಲ ಕೆಲವೇ ಕ್ಷಣಗಳಲ್ಲಿ ತಲೆ ಕೆಡಿಸಿಕೊಳ್ಳುವಂತಾಗಿದೆ.
ಹೀಗೊಂದು ಪ್ರಕರಣ ಉತ್ತರಪ್ರದೇಶದ ಅಮೇಠಿಯಲ್ಲಿ ನಡೆದಿದೆ. ಇಲ್ಲಿ ನೂತನವಾಗಿ ಆಯ್ಕೆ ಆದ ಗ್ರಾಮ ಪ್ರಧಾನ್ ಇಮ್ರಾನ್​ ಖಾನ್ ಎಂಬಾತನೇ ಬಂಧಿತ ಆರೋಪಿ. ಈತ ವಿಜಯೋತ್ಸವ ಆಚರಣೆ ವೇಳೆ ಹೊಸ ಪಾಕಿಸ್ತಾನದ ಭರವಸೆ ನೀಡುವಂತೆ ಸಂದೇಶ ರವಾನಿಸಿದ್ದರಿಂದ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ರಾಮ್​ಗಂಜ್ ಪ್ರದೇಶದ ಮಂಗ್ರಾ ಗ್ರಾಮದ ಪ್ರಧಾನ್​ ಆಗಿ ಆಯ್ಕೆಯಾದ ಇಮ್ರಾನ್, ಮೇ 4ರಂದು ವಿಜಯೋತ್ಸವ ಆಚರಿಸಿದ್ದಾನೆ. ಈ ವೇಳೆ ಬೆಂಬಲಿಗರೊಂದಿಗೆ ‘ದೇಖೋ ಇಮ್ರಾನ್​ ಖಾನ್ ಆಯಾ, ನಯಾ ಪಾಕಿಸ್ತಾನ್ ಲಾಯಾ’ ಎಂಬ ಹಾಡಿನೊಂದಿಗೆ ಮೆರವಣಿಗೆ ಸಾಗಿದ್ದಾನೆ. ಈ ವಿಡಿಯೋ ವೈರಲ್ ಆಗಿತ್ತು.​ ಈ ಹಿನ್ನೆಲೆಯಲ್ಲಿ ಅಮೇಠಿ ಡಿಸ್ಟ್ರಿಕ್ಟ್​ ಮ್ಯಾಜಿಸ್ಟ್ರೇಟರ್​ ಅರುಣ್​ ಕುಮಾರ್ ತನಿಖೆಗೆ ಆದೇಶಿಸಿದ್ದರು.
ಇದನ್ನೂ ಓದಿ:ಧೂಮಪಾನಿಗಳು-ಸಸ್ಯಾಹಾರಿಗಳಲ್ಲಿ ಕೋವಿಡ್ ಸೋಂಕು ಸಾಧ್ಯತೆ ಕಡಿಮೆ; ಸಿಎಸ್​ಐಆರ್ ಸಮೀಕ್ಷೆಯಲ್ಲಿ ಬಹಿರಂಗ
ಪರಿಣಾಮವಾಗಿ ಇಮ್ರಾನ್ ಖಾನ್ ಹಾಗೂ ಆತನ ಬೆಂಬಲಿಗರ ವಿರುದ್ಧ ಮೇ 6ರಂದು ಎಫ್​ಐಆರ್ ದಾಖಲಾಗಿತ್ತು. ಮಾತ್ರವಲ್ಲ ಅದರ ಮಾರನೇ ದಿನವೇ ಅವರನ್ನು ಬಂಧಿಸಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ವಿಜಯೋತ್ಸವ ಆಚರಿಸುವುದನ್ನು ನಿಷೇಧಿಸಿದ್ದರೂ ಇಮ್ರಾನ್ ಆ ನಿಯಮವನ್ನೂ ಉಲ್ಲಂಘಿಸಿದ್ದಾನೆ. ಆ ಬಗ್ಗೆಯೂ ಕೇಸ್ ದಾಖಲಿಸಿಕೊಳ್ಳಲಾಗಿದೆ. ಇಮ್ರಾನ್​ ಖಾನ್​ನ ಬೆಂಬಲಿಗರಾದ ಜಬೀರ್ ರೆಹಮಾನ್, ಮಕ್ಸೂದ್, ಇಷ್ತಿಕಾರ್, ಅಲೀಂ, ಶಾರುಖ್​ ಖಾನ್​ ಎಂಬವರನ್ನು ಪೊಲೀಸರು ಬಂಧಿಸಿದ್ದು, ಮೂರು ಸ್ಪೋರ್ಟ್ಸ್ ಬೈಕ್​​ಗಳನ್ನೂ ವಶ ಪಡಿಸಿಕೊಳ್ಳಲಾಗಿದೆ.
ಸೋಂಕಿತ ತಾಯಿಯ ಶವಸಂಸ್ಕಾರಕ್ಕೆ ಮುಂದಾದ ಮಗನಿಗೆ ಗ್ರಾಮಸ್ಥರಿಂದ ವಿರೋಧ; ಕಾರಣವೇನು, ಆಮೇಲೇನಾಯಿತು?

ಆಸ್ಪತ್ರೆಯಿಂದ ತಪ್ಪಿಸಿಕೊಂಡು ಭತ್ತದ ಗದ್ದೆಯಲ್ಲಿ ಅವಿತು ಕೂತ ಸೋಂಕಿತ: ಕುತೂಹಲ ಮೂಡಿಸಿರುವ ಪ್ರಕರಣ!

ಆರೋಗ್ಯ ಸಚಿವರ ಕ್ಷೇತ್ರದಲ್ಲೇ ಆಕ್ಸಿಜನ್ ಸಿಲಿಂಡರ್ ಕಳ್ಳತನ; ಆಸ್ಪತ್ರೆ ಸಿಬ್ಬಂದಿಯ ಕೈವಾಡ ಶಂಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
