ನವದೆಹಲಿ: ಮೊಟ್ಟ ಮೊದಲ ಬಾರಿಗೆ ಜಮ್ಮು ಕಾಶ್ಮೀರದ ಉಗ್ರಪೀಡಿತ ಶ್ರೀನಗರ ಸೆಕ್ಟರ್​ನ ಸೆಂಟ್ರಲ್ ರಿಸರ್ವ್​ ಪೊಲೀಸ್ (ಸಿಆರ್​ಪಿಎಫ್​) ಫೋರ್ಸ್ ನ ಇನ್​ಸ್ಪೆಕ್ಟರ್ ಜನರಲ್​ ಆಗಿ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ನೇಮಕವಾಗಿದ್ದಾರೆ.
ಅವರ ಹೆಸರು ಚಾರು ಸಿನ್ಹಾ. ತೆಲಂಗಾಣ ಕೆಡರ್​ನ 1996ರ ಬ್ಯಾಚ್​ನ ಅಧಿಕಾರಿಯಾಗಿರುವ ಅವರು ಇನ್ನು ಸಿಆರ್​ಪಿಎಫ್​ ಶ್ರೀನಗರ ಸೆಕ್ಟರ್​ನ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಲಿದ್ದಾರೆ. ಇಂತಹ ಟಫ್ ಟಾಸ್ಕ್ ಅವರ ಹೆಗಲೇರುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಅವರು ಐಜಿ ಆಗಿ ಬಿಹಾರ ಸೆಕ್ಟರ್​ನ ಸಿಆರ್​ಪಿಎಫ್​ನ ಹೊಣೆಗಾರಿಕೆ ವಹಿಸಿ ನಕ್ಸಲ್​ ಸಮಸ್ಯೆಯನ್ನು ಎದುರಿಸಿದ್ದರು. ಚಾರು ಅವರ ನಾಯಕತ್ವದಲ್ಲಿ ವಿವಿಧ ನಕ್ಸಲ್ ವಿರೋಧಿ ಕಾರ್ಯಾಚರಣೆಗಳು ನಡೆದಿವೆ.
ಇದನ್ನೂ ಓದಿ:ಐವರು ನಕ್ಸಲರ ಬಂಧನ, ಜೈಲ್ಲಿನಲ್ಲಿದ್ದ ನಕ್ಸಲ್ ಒಬ್ಬನ ಸಾವು
ಬಳಿಕ ಅವರನ್ನು ಜಮ್ಮು ಸೆಕ್ಟರ್​ನ ಸಿಆರ್​ಪಿಎಫ್ ಐಜಿ ಆಗಿ ವರ್ಗಾವಣೆ ಮಾಡಲಾಗಿತ್ತು. ಅಲ್ಲಿ ಸುದೀರ್ಘ ಮತ್ತಯ ಯಶಸ್ವಿ ಅವಧಿಯನ್ನು ಪೂರೈಸಿದ ಅವರು ಸೋಮವಾರದಿಂದ ಶ್ರೀನಗರ ಸೆಕ್ಟರ್​ನ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ. ಈ ಸೆಕ್ಟರ್​ 2005ರಲ್ಲಿ ಆರಂಭವಾಗಿದ್ದು, ಐಜಿ ಸ್ತರದಲ್ಲಿ ಮಹಿಳಾ ಆಫೀಸರ್ ಇರಲಿಲ್ಲ. ಈ ಸೆಕ್ಟರ್​ನಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆಗಳನ್ನು ಸೇನೆ ಮತ್ತು ಪೊಲೀಸರೊಂದಿಗೆ ಸೇರಿ ಮಾಡಬೇಕಾಗುತ್ತದೆ. (ಏಜೆನ್ಸೀಸ್)
ಪಿನಾಕಾ ರಾಕೆಟ್ ಲಾಂಚರ್​ ಖರೀದಿಗೆ 2,580 ಕೋಟಿ ರೂಪಾಯಿ ಒಪ್ಪಂದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + seven =
Remember me
