ನವದೆಹಲಿ: ಕೇಂದ್ರ ಸರ್ಕಾರವು ಆರೋಗ್ಯ ಸಚಿವಾಲಯದ ಸಹಯೋಗದಲ್ಲಿ 13 ಅಪರೂಪದ ರೋಗಗಳಿಗೆ ಔಷಧಿಯನ್ನು ತಯಾರಿಸಲು ಮುಂದಾಗಿದೆ.ಹೌದು, ಇಂದಿನ ತಾಂತ್ರಿಕ ಯುಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಆವಿಷ್ಕಾರಗಳು ಕಂಡುಬರುತ್ತಿವೆ. ಅಂತೆಯೇ ವೈದ್ಯಕೀಯ ಕ್ಷೇತ್ರದಲ್ಲೂ ಕೇಂದ್ರ ಸರ್ಕಾರ ಮೈಲಿಗಲ್ಲನ್ನು ಸಾಧಿಸಲು ಹೊರಟಿದೆ. ಅಷ್ಟೇ ಅಲ್ಲದೆ, ಸರ್ಕಾರ ಈ ಔಷಧಿಗಳನ್ನು ಜನರಿಗೆ ಕೈಗೆಟುಕುವ ದರದಲ್ಲಿ ಮಾರಾಟ ಮಾಡಲಿದೆ ಎಂಬುದು ಗಮನಾರ್ಹ ಸಂಗತಿ. ಈ ಔಷಧಿಗಳು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಔಷಧಿಗಳಿಗಿಂತ ಕಡೆಮೆ ದರದಲ್ಲಿ ಮಾರುಕಟ್ಟೆಗೆ ಬರಲಿವೆ. “ಈ ವಿಷಯದ ಕುರಿತು ಚರ್ಚೆ ನಡೆಸಿ, 13 ಅಪರೂಪದ ಕಾಯಿಲೆಗಳನ್ನು ಪಟ್ಟಿ ಮಾಡಿದ್ದೇವೆ. ಇವುಗಳಿಗೆ ಔಷಧಿ ತಯಾರಿಸಿ ಜನರಿಗೆ ‘ಸಬ್ಸಿಡಿ’ ದರದಲ್ಲಿ ಮಾರಾಟ ಮಾಡುವುದು ಮುಖ್ಯ ಗುರಿಯಾಗಿದೆ ” ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇದರ ಉದ್ದೇಶಗಳೇನು?1. ದುಬಾರಿಯಾಗಿರುವ ಔಷಧಿಗಳನ್ನು ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ನೀಡುವುದು.2. ಆಮದು ಮಾಡಿಕೊಳ್ಳುವುದರಲ್ಲಿ ವೆಚ್ಚವಾಗುವ ಹಣವನ್ನು ಉಳಿಸುವುದು.3. ವೈದ್ಯಕೀಯ ಆವಿಷ್ಕಾರದತ್ತ ಗಮನ.
8 ವಿದಧ ಔಷಧಿಗಳ ತಯಾರಿಕೆ8 ಬಗೆಯ ಔಷಧಿಗಳಲ್ಲಿ ಈಗಾಗಲೇ 4 ಔಷಧಿಗಳು ಭಾರತದಲ್ಲಿ ಲಭ್ಯವಿದ್ದು, ಇನ್ನು 4 ಔಷಧಿಗಳು ಮುಂದಿನ ವರ್ಷ ಮಾರುಕಟ್ಟೆಗೆ ಬರಲಿವೆ ಎಂದು ಮೂಲಗಳು ತಿಳಿಸಿವೆ.
ಟೈರೋಸಿನೇಮಿಯಾ ಟೈಪ್(Tyrosinemina Type), ಗಾಷರ್ಸ್ ಕಾಯಿಲೆ(Gaucher’s disease), ವಿಲ್ಸನ್ ಕಾಯಿಲೆ(Wilson’s disease), ಡ್ರಾವೆಟ್ ಅಥವಾ ಲೆನನಾಕ್ಸ್ ಗ್ಯಾಸ್ಟ್ರಾಟ್ ಸಿಂಡ್ರೋಮ್-ಸೀಜರ್ಸ್ ( Dravet or Lenonox Gastraut Syndrome-Seizures) ಮುಂತಾದ ಕಾಯಿಲೆಗಳಿಗೆ “ಮೇಡ್ ಇನ್ ಇಂಡಿಯಾ” ಮದ್ದುಗಳು ತಯಾರಾಗಲಿವೆ. ಭಾರತದಲ್ಲಿ ಗಾಷರ್ಸ್ ಕಾಯಿಲೆಯ(Gaucher’s disease) 235 ಪ್ರಕರಣಗಳು ದಾಖಲಾಗಿದ್ದು, 65 ಟೈರೋಸಿನೇಮಿಯಾ ಟೈಪ್(Tyrosinemina Type) ಪ್ರಕರಣಗಳು ದಾಖಲಾಗಿರುವುದು ಗಮಿನಿಸಬೇಕಾದ ಸಂಗತಿಯಾಗಿದೆ.
ವೆಚ್ಚ-ಸ್ನೇಹಿ ಯೋಜನೆಟೈರೋಸಿನೇಮಿಯಾ ಟೈಪ್(Tyrosinemina Type) ಕಾಯಿಲೆಗೆ ನಿಟಿಸಿನೋನ್ (Nitisinone) ಕ್ಯಾಪ್ಸೂಲ್ ಗಳೇ ಮದ್ದು. ಈ ಔಷಧಿಯನ್ನು ಬೇರೆ ದೇಶದಿಂದ ಆಮದು ಮಾಡಿಕೊಂಡಲ್ಲಿ, ವರ್ಷಕ್ಕೆ 2.2 ಕೋಟಿ ರೂ. ಗಳಷ್ಟು ವಚ್ಚವಾಗುತ್ತದೆ. ಅದೇ ಈ ಮದ್ದನ್ನು ಭಾರತದಲ್ಲಿ ತಯಾರಿಸಿದರೆ, 2.5 ಲಕ್ಷ ರೂ ಗಳಷ್ಟು ವೆಚ್ಚವಾಗುತ್ತದೆ. ಹಾಗೆಯೇ, ಎಲಿಗ್ಲಸ್ಟಾಟ್ (Eliglustat) ಎಂಬ ಔಷಧಿಯನ್ನು ಗಾಷರ್ಸ್ ಕಾಯಿಲೆಗೆ(Gaucher’s disease) ಮದ್ದಾಗಿ ಬಳಸುತ್ತಾರೆ.ಭಾರತದಲ್ಲಿ ಅದನ್ನು ತಯಾರಿಸುವದರಿಂದ ವರ್ಷಕ್ಕೆ 3ರಿಂದ 6 ಲಕ್ಷ ರೂ ವೆಚ್ಚವಾಗುತ್ತದೆ.
ಅನಿಮಿಯಾ ಮುಕ್ತ ಭಾರತಸಿಕಲ್ ಸೆಲ್ ಅನಿಮಿಯಾ (Sickle Cell Anemia) ಕಾಯಿಲೆಗೆ ಚಿಕಿತ್ಸೆ ನೀಡಲು, ಹೈಡ್ರೋಕ್ಸ್ಯೂರಿಯಾ ಸಿರಪ್(Hydroxyurea Syrup) ಬಳಸುತ್ತಾರೆ. ಕೇಂದ್ರ ಸರ್ಕಾರವು ಈ ಔಷಧಿಯ ತಯಾರಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಮುಂದಿನ ವರ್ಷ ಈ ಮದ್ದು ಮಾರುಕಟ್ಟೆಯಲ್ಲಿ ಕಡೆಮೆ ದರದಲ್ಲಿ ಸಿಗಲಿದೆ ಎಂಬ ಮಾಹಿತಿಯನ್ನು ಮೂಲಗಳು ನೀಡಿವೆ.
ಸುಮಾರು 900 ಹೆಣ್ಣು ಭ್ರೂಣ ಹತ್ಯೆ; ಐವರು ವೈದ್ಯರು ಸೇರಿ 9 ಮಂದಿ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
