ನವದೆಹಲಿ:ಭಾರತೀಯ ಸೇನೆಯ ಹಿಮಚಿರತೆ ದಳದ ಕ್ಯಾ. ಗೀತಿಕಾ ಕೌಲ್​ ಅವರು ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್​ನಲ್ಲಿ ನಿಯೋಜನೆಗೊಂಡ ಮೊದಲ ಮಹಿಳಾ ವೈದ್ಯಕಿಯ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಗೀತಿಕಾ ಸೇನೆಯ ಫೈರ್​ ಆ್ಯಂಡ್​ ಫ್ಯೂರಿ ಕೋರ್​ ಮತ್ತು ಸ್ನೋ ಲೆಪರ್ಡ್​ ಬ್ರಿಗೇಡ್​ ಸದಸ್ಯೆ. ಸಿಯಾಚಿನ್​ ಬ್ಯಾಟಲ್​ ಸ್ಕೂಲ್​ನಿಂದ ತರಬೇತಿ ಪಡೆದಿದ್ದಾರೆ. ದೈಹಿಕ&ಮಾನಸಿಕ ಸ್ಥೆರ್ಯ, ಸವಾಲು ಎದುರಿಸುವುದು, ಎತ್ತರದ ಪ್ರದೇಶಗಳಿಗೆ ಏರುವುದು, ಬದುಕುಳಿಯುವ ಕೌಶಲಗಳು, ಹವಾಮಾನ ವೈಪರೀತ್ಯದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾದ ಪ್ರಮುಖ ವಿಶೇಷ ವೈದ್ಯಕಿಯ ವಿಧಾನ ಸೇರಿದಂತೆ ಹಲವು ಅಂಶಗಳನ್ನು ಈ ತರಬೇತಿ ಒಳಗೊಂಡಿದೆ.
ಹಿಮಾಲಯದ ಉತ್ತರದಲ್ಲಿರುವ ಸಿಯಾಚಿನ್​ ವಿಶ್ವದ ಅತಿ ಎತ್ತರದ ಯುದ್ಧಭೂಮಿ. ಇದು ಪ್ರತಿಕೂಲ ಹವಾಮಾನವಿರುವ ಭೂಪ್ರದೇಶ. ಈ ಅಪಾಯಕಾರಿ ಸ್ಥಳದಲ್ಲಿ ಕಾರ್ಯ ನಿರ್ವಹಿಸುವುದು ಸವಾಲಿನ ಕೆಲಸ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
