ಅಹಮದಾಬಾದ್​:ಇಡೀ ಜಗತ್ತಿನಲ್ಲಿ ಮಹಾಮಾರಿ ಕರೊನಾ ವೈರಸ್​ ಆರೋಗ್ಯ ಬಿಕ್ಕಟ್ಟು ಸೃಷ್ಟಿಸಿದೆ. ಇಂತಹ ಸಂದಿಗ್ಧತೆಯಲ್ಲಿ ವೈದ್ಯರೆಲ್ಲರೂ ನೀಡುವ ಪ್ರಮುಖ ಸಲಹೆ ನಿಮ್ಮ ಕೈಗಳನ್ನು ಆಗಾಗ ಶುಚಿಗೊಳಿಸಿ. ಅದಕ್ಕಾಗಿ ಸ್ಯಾನಿಟೈಸರ್​ ಬಳಸಿ ಎನ್ನುವುದು.
ಸ್ಯಾನಿಟೈಜರ್​ ಸಂಕಷ್ಟ ಸಮಯದಲ್ಲಿ ಜೀವನಾಡಿಯಾಗಿದೆ. ಹೀಗಾಗಿ ಗುಜರಾತಿನ ಅಹಮದಬಾದ್​ನಲ್ಲಿರುವ ಪ್ರೀಮಿಯರ್​ ಇನ್ಸ್ಟಿಟ್ಯೂಟ್​ ಸ್ಯಾನಿಟೈಸರ್​ ವಿಷಯದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದು, ಕರೊನಾ ವಿರುದ್ಧ ಹೋರಾಡಲು ಸ್ಯಾನಿಟೈಸರ್​ ಸುರಂಗವನ್ನೇ ನಿರ್ಮಾಣ ಮಾಡಿದೆ.
ಅಸರ್ವಾದ ಕಿಡ್ನಿ ರೋಗ ಮತ್ತು ಸಂಶೋಧನಾ ಕೇಂದ್ರವನ್ನು ಸ್ಯಾನಿಟೈಸರ್​ ಸುರಂಗವಾಗಿ ಮಾರ್ಪಾಡು ಮಾಡಲಾಗಿದೆ. ಸುರಂಗದ ಒಳ ಹೋದಾಗಲೆಲ್ಲಾ ಸ್ಯಾನಿಟೈಸರ್​ ಮಳೆಯಾಗುತ್ತದೆ. ಇದಕ್ಕೆ ಸಂಬಂಧಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ವಿಡಿಯೋದಲ್ಲಿ ಏನಿದೆ?: ಸುರಂಗದಲ್ಲಿ ಹೊರಭಾಗದಲ್ಲಿ ನಿಂತಿರುವ ಸೆಕ್ಯುರಿಟಿ ಗಾರ್ಡ್​ ಒಳಹೋಗುವ ವ್ಯಕ್ತಿಗೆ ಪ್ರವೇಶ ದ್ವಾರದಲ್ಲೇ ಹ್ಯಾಂಡ್​ ಸ್ಯಾನಿಟೈಸರ್​ ನೀಡುತ್ತಾರೆ. ಬಳಿಕ ಸುರಂಗ ಪ್ರವೇಶಿಸುವ ವ್ಯಕ್ತಿಯ ಮೇಲೆ ಸ್ವಯಂಚಾಲಿತವಾಗಿ ಸ್ಯಾನಿಟೈಸರ್​ ಮಳೆಯಾಗುತ್ತದೆ.(ಏಜೆನ್ಸೀಸ್​)
ಲಾಕ್​ಡೌನ್​ನಿಂದ ನಷ್ಟದ ಜತೆಗೆ ಲಾಭವೂ ಹೆಚ್ಚು: ದೆಹಲಿಯಲ್ಲಾದ ಮಹತ್ತರ ಬದಲಾವಣೆಯೇ ಸಾಕ್ಷಿ!

ಚೀನಾದ ಮೊದಲ ಕರೊನಾ ಸೋಂಕಿತೆಯಿಂದ ಸ್ಫೋಟಕ ಮಾಹಿತಿ: ಜೀವಂತ ಪ್ರಾಣಿ ಮಾರುಕಟ್ಟೆ ವೈರಸ್​ ಹುಟ್ಟಿನ ಕೇಂದ್ರವಾಯಿತೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − three =
Remember me
