ಗುವಾಹಟಿ: ಆಸ್ಸಾಂನಲ್ಲಿ ಇಂದು ಎಂಟು ಉಗ್ರ ಸಂಘಟನೆಗಳ ಒಟ್ಟು 644 ಉಗ್ರರು ಶರಣಾಗಿದ್ದಾರೆ. ತಮ್ಮ ಶಸ್ತ್ರಾಸ್ತ್ರಗಳನ್ನು ಔಪಚಾರಿಕವಾಗಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಯುಎಲ್​ಎಫ್​ಎ(ಐ), ಎನ್​ಡಿಎಫ್​ಬಿ, ಆರ್​ಎನ್​ಎಲ್​ಎಫ್​, ಕೆಎಲ್​ಒ, ಸಿಪಿಐ(ಮಾವೋವಾದಿ), ಎನ್​ಎಸ್​ಎಲ್​ಎ, ಎಡಿಎಫ್​ ಮತ್ತು ಎನ್​ಎಲ್​ಎಫ್​ಬಿ ಸಂಘಟನೆಗಳ ಉಗ್ರರು ಇಂದು ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್​ ಸಮ್ಮುಖದಲ್ಲಿ ಶರಣಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಸಿಎಂ, ಆಸ್ಸಾಂನ ಅಭಿವೃದ್ಧಿಗಾಗಿ ಮುಖ್ಯವಾಹಿನಿಗೆ ಬರಲು ನಿರ್ಧರಿಸಿರುವ ಈ ಉಗ್ರಸಂಘಟನೆಗಳ ಸದಸ್ಯರ ಬಗ್ಗೆ ಇಲ್ಲಿನ ಜನರು ಸಂತೋಷ ವ್ಯಕ್ತಪಡಿಸಿದ್ದಾರೆ. ಇವರಂತೆಯೇ ಉಳಿದ ಉಗ್ರ, ಮಾವೋವಾದಿ ಸಂಘಟನೆಗಳೂ ಹೆಚ್ಚೆಚ್ಚು ಹೊರಬರಬೇಕು. ಶರಣಾಗುವ ಮೂಲಕ ಮುಖ್ಯವಾಹಿನಿಗೆ ಬಂದು ಈ ದೇಶವನ್ನು ಬಲಿಷ್ಠಗೊಳಿಸಬೇಕು ಎಂದು ಹೇಳಿದರು.
ಶರಣಾಗಿರುವ ಉಗ್ರರ ಪುನವರ್ಸತಿ, ಜೀವನಕ್ಕಾಗಿ ಸರ್ಕಾರ ಸಂವಿಧಾನ ಬದ್ಧವಾಗಿ ಕ್ರಮ ಕೈಗೊಳ್ಳಲಿದೆ. ಇವರೆಲ್ಲ ಸರ್ಕಾರದ ಯೋಜನೆಗಳ ಲಾಭವನ್ನು ಇನ್ನು ಮುಂದೆ ಪಡೆಯಬಹುದು ಎಂದರು.ಶರಣಾದ 644 ಮಂದಿ ಉಗ್ರರಲ್ಲಿ ಅತಿಹೆಚ್ಚು ಅಂದರೆ 301 ಉಗ್ರರು ಎನ್​ಎಲ್​ಎಫ್​ಬಿ (ನ್ಯಾಷನಲ್​ ಲಿಬರೇಶನ್​ ಫ್ರಂಟ್​ ಆಫ್​ ಬೆಂಗಾಲ್​) ಗೆ ಸೇರಿದವರು ಎನ್ನಲಾಗಿದೆ. (ಪಿಟಿಐ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
