ನವದೆಹಲಿ:65 ಸಿಬ್ಬಂದಿ ಕರೊನಾ ಸೋಂಕಿಗೆ ಒಳಗಾಗುವ ಮೂಲಕ ಆತಂಕ ಮೂಡಿಸಿದ್ದ ಹರಿಯಾಣಾದ ಸುಖ್​ದೇವ್​ ಢಾಬಾದ ಸುದ್ದಿ ಇನ್ನೂ ಹಸಿರಾಗಿರುವಾಗಲೇ ಮತ್ತೊಂದು ಢಾಬಾದ 10 ಜನರು ಸೋಂಕಿಗೆ ಒಳಗಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ ಈಗ 75ಕ್ಕೆ ಏರಿದಂತಾಗಿದೆ.
ಹರಿಯಾಣಾದ ಸೋನಿಪತ್​ ಮುರ್ಥಾಲ್​ನಲ್ಲಿರುವ ಈ ಅಮ್ರಿಕ್​ ಸುಖ್​ದೇವ್​ ಢಾಬಾ ಭಾರಿ ಪ್ರಸಿದ್ಧಿ ಹೊಂದಿದೆ. ನಿತ್ಯ ಸಾವಿರಾರು ಜನರು ಊಟೋಪಚಾರಕ್ಕಾಗಿ ಇಲ್ಲಿಗೆ ಬರುತ್ತಾರೆ. ಸೋಂಕಿನ ಸುದ್ದಿ ಹರಡುತ್ತಿದ್ದಂತೆ ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಇದನ್ನು ನೋಡಿದರೆ ಇನ್ನೆಷ್ಟು ಜನರಿಗೆ ಕೋವಿಡ್​ ಕಾಣಿಸಿಕೊಂಡಿದೆಯೋ ಎಂಬ ಭೀತಿ ಉಂಟಾಗದೇ ಇರದು.
ಇದನ್ನೂ ಓದಿ;ಹಣ ಕಟ್ಟೋವರೆಗೆ ರೋಗಿಯನ್ನು ನೋಡಲು ಬಿಡಲಿಲ್ಲ; ದುಡ್ಡು ಕೊಟ್ಟ ಮೇಲೆ ಪೇಷೆಂಟ್​ ಈಸ್​ ಡೆಡ್​ ಎಂದ್ರು….!
ಇದೊಂದೇ ಅಲ್ಲ, ದೆಹಲಿ- ಹರಿಯಾಣ ರಾಷ್ಟ್ರೀಯ ಹೆದ್ದಾರಿಗುಂಟ ಇಂಥ ಹಲವು ಢಾಬಾಗಳಿವೆ. ಭಾರಿ ಸಂಖ್ಯೆಯಲ್ಲಿ ಜನರು ಊಟಕ್ಕೆಂದು ಇಲ್ಲಿಗೆ ಬರುತ್ತಾರೆ. ಇಷ್ಟೊಂದು ನಿರ್ಲಕ್ಷ್ಯಕ್ಕೆ ಯಾರು ಕಾರಣ? ಸಿಬ್ಬಂದಿಯೇ, ಅಧಿಕಾರಿಗಳೇ ಅಥವಾ ಗ್ರಾಹಕರೇ ಎಂಬ ಚರ್ಚೆ ಹುಟ್ಟು ಹಾಕಿದೆ.
ಈ ವಿಡಿಯೋಗಳನ್ನು ಸಿಎಂ ಕಚೇರಿ, ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರ ಟ್ವೀಟರ್​ ಖಾತೆಗೆ ಟ್ಯಾಗ್​ ಮಾಡಲಾಗಿದೆ. ಮಾತ್ರವಲ್ಲ ಪ್ರಧಾನಿ ಕಚೇರಿಗೂ ಟ್ಯಾಗ್​ ಮಾಡಿದ್ದಾರೆ. ವ್ಯಕ್ತಿಗತ ಅಂತರವನ್ನೇ ಕಾಯ್ದುಕೊಳ್ಳದ ಇವರ ಮೇಲೆ ಯಾರೂ ನಿಗಾ ಇಟ್ಟಿಲ್ಲವೇ? ಕೋವಿಡ್​ ಮಾರ್ಗಸೂಚಿಗಳನ್ನೇ ಪಾಲಿಸದ ಇಂಥ ಢಾಬಾ ಹಾಗೂ ಹೋಟೆಲ್​ಗಳಿಗೆ ಅನುಮತಿ ನೀಡಿದ್ದು ಹೇಗೆ ಎಂದು ಎಂದು ಜನರು ಪ್ರಶ್ನಿಸಿದ್ದಾರೆ. ಮುರ್ಥಾಲ್​ ಪ್ರದೇಶ ಊಟೋಪಚಾರಕ್ಕೆ ಭಾರಿ ಖ್ಯಾತವಾಗಿದೆ. ಇಲ್ಲಿನ ಢಾಭಾಗಳಿಗೆ ದೆಹಲಿಯಿಂದಲೇ ಹೆಚ್ಚಿನ ಜನರು ಬರುತ್ತಾರೆ. ಸದ್ಯ ಇವೆರಡೂ ಢಾಬಾಗಳನ್ನು ಬಂದ್​ ಮಾಡಲಾಗಿದೆ.
#Covid_19No …fear….No social distancing. No Administrative Action. Sukhdev Dhaba, Murthal, Haryana violating openly. How come the administration be so dumb ? @DyCMOharyana@mlkhattar@cmohry@MoHFW_INDIA@PMOIndia@narendramodi@drharshvardhan@htTweets@ndtv@aajtakpic.twitter.com/yW4tQQbIOm
— Anupriya Bansal (@freaky_techi)July 22, 2020

No Management of Social Distancing at Murthal Highway Dhaba known to be The Amrik Sukhdev@PMOIndia@mlkhattarpic.twitter.com/Id0zrc2dVa
— Sheikh Mohd Umar (@smumar1970)August 15, 2020

Sukhdev Dhaba Murthal, Sonipat.Social Distancing.These idiots will never understand unless until someone from their family get infected.pic.twitter.com/kt4myjhLLS
— Timeless Soul (@time_is_savage)July 21, 2020

ಗ್ರಾಹಕರ ಬ್ಯಾಂಕ್​ ಖಾತೆಗೆ ಬರಲ್ಲ ಎಲ್​ಪಿಜಿ ಸಬ್ಸಿಡಿ ಹಣ; ಕಾರಣವೇನು ಗೊತ್ತೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
