ನಾಗಪುರ:ದೇಶದ ಜನಸಂಖ್ಯಾ ಅಸಮತೋಲನಕ್ಕೆ ಹಲವು ಕಾರಣಗಳಿದ್ದು, ಅವುಗಳನ್ನು ಗುರುತಿಸಿ ಸರಿಪಡಿಸುವುದಕ್ಕೆ ಸಮಗ್ರ ಮತ್ತು ಸಾರ್ವತ್ರಿಕ ಅನುಷ್ಠಾನದ ನಿಯಮ ಜಾರಿಗೆ ತರಬೇಕು. ದೇಶದ ಜನಸಂಖ್ಯೆಯಲ್ಲಿ ಮುಸ್ಲಿಂ, ಕೆಸ್ತ ಜನಸಂಖ್ಯೆ ಏರಿಕೆ ಅಸಹಜವಾಗಿದ್ದು, ರಾಷ್ಟ್ರೀಯ ಜನಸಂಖ್ಯಾ ನೀತಿಯನ್ನು ಮರುಪರಿಶೀಲಿಸಬೇಕಾದ ಅವಶ್ಯಕತೆ ಇದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂ (ಆರೆಸ್ಸೆಸ್​) ಮುಖ್ಯಸ್ಥ ಮೋಹನ ಭಾಗವತ್​ ಕಳವಳದೊಂದಿಗೆ ಪ್ರತಿಪಾದಿಸಿದರು.
ಅವರು ಶುಕ್ರವಾರ ವಾರ್ಷಿಕ ವಿಜಯದಶಮಿ ಸಂದರ್ಭದ ಭಾಷಣದ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಲಭ್ಯವಿರುವ ಸಂಪನ್ಮೂಲಗಳು, ಭವಿಷ್ಯದ ಅಗತ್ಯತೆಗಳು ಮತ್ತು ದೇಶದ ಜನಸಂಖ್ಯಾ ಅಸಮತೋಲನದ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ದೇಶದ ಜನಸಂಖ್ಯಾ ನೀತಿಯನ್ನು ಮರುನಿರ್ಧರಿಸಿ ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು ಎಂದಿದ್ದಾರೆ.
ನುಸುಳುಕೋರರಿಂದ ಅಪಾಯ:ದೇಶದ ಗಡಿ ಪ್ರದೇಶಗಳು, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಿಹಾರದ ಗಡಿ ಜಿಲ್ಲೆಗಳಲ್ಲಿ ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆಯ ದರವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ. ಇದು ಬಾಂಗ್ಲಾದೇಶದಿಂದ ನಿರಂತರ ಒಳನುಸುಳುವಿಕೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಸುಪ್ರೀಂ ಕೋರ್ಟ್​ ನೇಮಿಸಿದ ಉಪಮನ್ಯು ಹಜ್ರಿಕಾ ಆಯೋಗದ ವರದಿಯಲ್ಲಿ ಮತ್ತು ಕಾಲಕಾಲಕ್ಕೆ ನ್ಯಾಯಾಂಗ ನಿರ್ಧಾರಗಳಲ್ಲಿ ಈ ಸತ್ಯಾಂಶಗಳು ದೃಢಪಟ್ಟಿವೆ. ಅಕ್ರಮ ನುಸುಳುಕೋರರು ರಾಜ್ಯದ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಹಾಗೂ ಈ ರಾಜ್ಯಗಳ ಸೀಮಿತ ಸಂಪನ್ಮೂಲಗಳ ಮೇಲೆ ದೊಡ್ಡ ಹೊರೆಯಾಗುತ್ತಿದ್ದಾರೆ. ಸಾಮಾಜಿಕ, ಸಾಂಸತಿಕ, ರಾಜಕೀಯ ಮತ್ತು ಆರ್ಥಿಕ ಉದ್ವಿಗ್ನತೆಯನ್ನು ಉಂಟುಮಾಡುತ್ತಿದ್ದಾರೆ ಎಂದು ಭಾಗವತ್​ ಹೇಳಿದ್ದಾರೆ.
ಮತಾಂತರ ಚಟುವಟಿಕೆಈಶಾನ್ಯ ರಾಜ್ಯಗಳಲ್ಲಿ ಜನಸಂಖ್ಯಾ ಅಸಮತೋಲನವು ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ಅರುಣಾಚಲ ಪ್ರದೇಶದಲ್ಲಿ, ಭಾರತದ ಮತ&ಪಂಥಗಳನ್ನು ನಂಬುವವರ ಸಂಖ್ಯೆ 1951ರಲ್ಲಿ ಶೇಕಡ 99.21 ಇತ್ತು. 2001ರಲ್ಲಿ ಶೇಕಡ 81.3 ಮತ್ತು 2011ರಲ್ಲಿ ಇದು ಶೇಕಡ 67ಕ್ಕೆ ಕುಸಿದಿದೆ. ಒಂದೇ ದಶಕದಲ್ಲಿ, ಈ ರಾಜ್ಯದಲ್ಲಿ ಕ್ರಿಶ್ಚಿಯನ್​ ಜನಸಂಖ್ಯೆಯು ಶೇಕಡ 13 ಹೆಚ್ಚಾಗಿದೆ. ಅದೇ ರೀತಿ, ಮಣಿಪುರದ ಜನಸಂಖ್ಯೆಯಲ್ಲಿ ಭಾರತದ ಮತ&ಪಂಥಗಳನ್ನು ನಂಬುವವರ ಸಂಖ್ಯೆ 1951 ರಲ್ಲಿ ಶೇಕಡ 80 ಇತ್ತು. ಇದು 2011ರಲ್ಲಿ ಶೇಕಡ 50ಕ್ಕೆ ಇಳಿದಿದೆ. ಮೇಲಿನ ಉದಾಹರಣೆ ಮತ್ತು ಕೆಸ್ತರ ಅಸಹಜ ಬೆಳವಣಿಗೆ ದರವು ದೇಶದ ಹಲವು ಜಿಲ್ಲೆಗಳಲ್ಲಿ ಕೆಲವು ಸ್ವಾರ್ಥಿ ಅಂಶಗಳಿಂದ ಸಂಟಿತ ಮತ್ತು ಉದ್ದೇಶಿತ ಮತಾಂತರ ಚಟುವಟಿಕೆಯನ್ನು ಮಾತ್ರ ಸೂಚಿಸುತ್ತದೆ ಎಂದು ಮೋಹನ ಭಾಗವತ್​ ಪ್ರತಿಪಾದಿಸಿದರು.
ಭಾಷಣದ ಪ್ರಮುಖ ಅಂಶಗಳುಗಡಿಯಾಚೆಗಿನ ಅಕ್ರಮ ಒಳನುಸುಳುವಿಕೆ ಯನ್ನು ಸಂಪೂರ್ಣವಾಗಿ ತಡೆಯಬೇಕು. ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು (National Register of Citizens) ರಚಿಸುವ ಮೂಲಕ, ಈ ಒಳನುಸುಳುಕೋರರು ಪೌರತ್ವದ ಹಕ್ಕುಗಳನ್ನು ಮತ್ತು ಭೂಮಿಯನ್ನು ಖರೀದಿಸುವ ಹಕ್ಕಿನಿಂದ ವಂಚಿತರಾಗಬೇಕು. ಎಲ್ಲ ಸ್ವಯಂಸೇವಕರನ್ನು ಒಳಗೊಂಡಂತೆ ದೇಶವಾಸಿಗಳನ್ನು ಸಾರ್ವಜನಿಕ ಜಾಗೃತಿಯ ಮೂಲಕ ದೇಶವನ್ನು ಜನಸಂಖ್ಯಾ ಅಸಮ ತೋಲನದಿಂದ ರಸಲು ಎಲ್ಲ ಕಾನೂನುಬದ್ಧ ಪ್ರಯತ್ನಗಳನ್ನು ಮಾಡಬೇಕು. ಇದನ್ನು ತಮ್ಮ ರಾಷ್ಟ್ರೀಯ ಕರ್ತವ್ಯವೆಂದು ಪರಿಗಣಿಸಬೇಕು.ಪಶ್ಚಿಮ ಬಂಗಾಳದ ಚುನಾವಣೆಯ ನಂತರ ಭುಗಿಲೆದ್ದ ಹಿಂಸಾಚಾರ ಮತ್ತು ಅಲ್ಲಿನ ಹಿಂದೂ ಜನರ ಕರುಣಾಜನಕ ಸ್ಥಿತಿಯು ಸರ್ಕಾರದ ಅನಾಗರಿಕ ಓಲೈಕೆ ರಾಜಕಾರಣ ಮತ್ತು ಜನಸಂಖ್ಯೆಯ ಅಸಮತೋಲನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಎಲ್ಲರಿಗೂ ಸಮಾನವಾಗಿ ಅನ್ವಯಿಸಬಹುದಾದ ನೀತಿಯನ್ನು ಹೊಂದಿರುವುದು ಅವಶ್ಯಕ. ನಮ್ಮ ಸಣ್ಣ ಗುಂಪುಗಳ ಸಂಕುಚಿತ ಹಿತಾಸಕ್ತಿಗಳ ಹಿಡಿತದಿಂದ ಹೊರಬಂದು, ನಾವೆಲ್ಲರೂ ಇಡೀ ದೇಶದ ಹಿತಾಸಕ್ತಿಯನ್ನು ಪ್ರಧಾನವಾಗಿ ತೆಗೆದುಕೊಳ್ಳುವ ಅಭ್ಯಾಸವನ್ನು ಮಾಡಿಕೊಳ್ಳಬೇಕು.
ದೇಗುಲ ಹಿಂದು ಸಮಾಜದ ಆಸ್ತಿದಣ ಭಾರತದ ದೇವಾಲಯ ಗಳನ್ನು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ನಿಯಂತ್ರಿಸುತ್ತವೆ. ಹಿಂದು ದೇವಾಲಯಗಳ ನಿರ್ವಹಣೆ ಹಿಂದು ಭಕ್ತರಿಂದ ಆಗಬೇಕು ಮತ್ತು ಹಿಂದು ದೇವಾಲಯಗಳ ಆಸ್ತಿ ದೇವರ ಪೂಜೆಗೆ ಮತ್ತು ಹಿಂದು ಸಮಾಜದ ಸೇವೆ ಹಾಗೂ ಕಲ್ಯಾಣಕ್ಕಾಗಿ ಮಾತ್ರ ಬಳಸಬೇಕು. ಇದು ಸಮಂಜಸವಾಗಿದೆ ಮತ್ತು ಅಗತ್ಯವಾಗಿದೆ.
ಲಗಾಮಿಲ್ಲದ ಒಟಿಟಿ, ಬಿಟ್​ಕಾಯಿನ್​ಬಿಟ್​ ಕಾಯಿನ್​ನಂತಹ ಅನಿಯಂತ್ರಿತ ಪ್ರವೃತ್ತಿಯು ಎಲ್ಲ ದೇಶಗಳ ಆರ್ಥಿಕತೆಗೆ ಸವಾಲಾಗಿ ಪರಿಣಮಿಸುವ ಆರ್ಥಿಕ ಅಸ್ಪಷ್ಟತೆಯ ಮಾಧ್ಯಮವಾಗಿ ಪರಿಣಮಿಸುತ್ತದೆ. ಯಾವುದೇ ನಿಬಂಧನೆಗಳಿಗೆ ಒಳಪಡದ ಒಟಿಟಿ ವೇದಿಕೆಗಳಲ್ಲಿ ಏನನ್ನು ಬೇಕಾದರೂ ಪ್ರದರ್ಶಿಸಲಾಗುತ್ತದೆ ಮತ್ತು ಅವನ್ನು ಯಾರು ಬೇಕಾದರೂ ವೀಸಬಹುದಾಗಿದೆ. ಆದರೆ ದೇಶದ ವಿರೋಧಿ ಟಕಗಳು ಈ ವಿಧಾನಗಳನ್ನು ಬಳಸಲು ಬಯಸುತ್ತಿವೆ ಎಂಬುದು ತಿಳಿದಿದೆ. ಆದ್ದರಿಂದ, ಸರ್ಕಾರವು ಸಮಯಕ್ಕೆ ಸರಿಯಾಗಿ ಇಂತಹ ಎಲ್ಲ ವಿಷಯಗಳ ಮೇಲೆ ಸರಿಯಾದ ನಿಯಂತ್ರಣಕ್ಕೆ ವ್ಯವಸ್ಥೆ ಮಾಡಬೇಕು.
ಗಡಿ ರಕ್ಷಣೆಗೆ ಆದ್ಯತೆಭಾವೋದ್ರಿಕ್ತ ಮತಾಂಧತೆ, ದೌರ್ಜನ್ಯ ಮತ್ತು ಇಸ್ಲಾಂ ಹೆಸರಿನಲ್ಲಿ ಭಯೋತ್ಪಾದನೆ ಪ್ರತಿಯೊಬ್ಬರೂ ತಾಲಿಬಾನ್​ ಬಗ್ಗೆ ಭಯಭೀತರಾಗುವಂತೆ ಮಾಡಿದೆ. ಈ ಸಂಟನೆ ಈಗ ಅ್ಘನ್​ನಲ್ಲಿ ಸರ್ಕಾರ ರಚಿಸಿದೆ. ಈಗ ತಾಲಿಬಾನ್​ ಜತೆಗೆ ಚೀನಾ, ಪಾಕಿಸ್ತಾನ ಮತ್ತು ಟರ್ಕಿಗಳು ಅಪವಿತ್ರ ಮೈತ್ರಿ ಮಾಡಿಕೊಂಡಿವೆ. ಅಬ್ದಾಲಿಯಿಂದ, ನಮ್ಮ ವಾಯವ್ಯ ಗಡಿಗಳ ಬಗ್ಗೆ ಮತ್ತೊಮ್ಮೆ ಗಂಭೀರವಾಗಿ ಚಿಂತಿಸುವಂತಾಗಿದೆ. ತಾಲಿಬಾನ್​, ಕೆಲವೊಮ್ಮೆ ಶಾಂತಿ ಮತ್ತು ಕೆಲವೊಮ್ಮೆ ಕಾಶ್ಮೀರದ ಬಗ್ಗೆ ಜತೆಜತೆಗೆ ಮಾತನಾಡಲಾರಂಭಿಸಿದೆ. ಇದು ನಾವು ನೆಮ್ಮದಿಯಿಂದಿರಲು ಸಾಧ್ಯವಿಲ್ಲ ಎಂಬುದರ ಸೂಚಕವಾಗಿದೆ. ರಣಾ ಮತ್ತು ಭದ್ರತೆಯ ೇತ್ರದಲ್ಲಿ ಸ್ವಾವಲಂಬನೆ ಸಾಧಿಸುತ್ತ ಎಲ್ಲ ಸನ್ನಿವೇಶಗಳನ್ನು ಎದುರಿಸುವುದಕ್ಕೆ ಸಜ್ಜಾಗಬೇಕು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
