ನವದೆಹಲಿ:ಕರೊನಾ ವೈರಸ್​ ವಿರುದ್ಧದ ಜಂಟಿ ಹೋರಾಟದಲ್ಲಿ ವೈದ್ಯಕೀಯ ಸೇರಿದಂತೆ ಇತರೆ ನೆರವನ್ನು ಸುಮಾರು 150ಕ್ಕೂ ಹೆಚ್ಚು ದೇಶಗಳಿಗೆ ನಾವು ವಿಸ್ತರಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ನ್ಯೂಯಾರ್ಕ್​ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಅಧಿವೇಶನದ ಉನ್ನತ ಮಟ್ಟದ ವಿಭಾಗದಲ್ಲಿ ಮಾತನಾಡಿದ ಅವರು ಇಂದು ವಿಶ್ವಸಂಸ್ಥೆ 193 ರಾಷ್ಟ್ರಗಳನ್ನು ಒಟ್ಟುಗೂಡಿಸಿದೆ. ಅದರ ಸದಸ್ಯತ್ವದೊಂದಿಗೆ ಸಂಸ್ಥೆಯಿಂದ ನಿರೀಕ್ಷೆಗಳೂ ಸಹ ಬೆಳೆದಿವೆ ಎಂದರು.
ಆರಂಭದಿಂದಲೂ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಗಳಿಗೆ ಭಾರತ ಸಕ್ರಿಯವಾಗಿ ಬೆಂಬಲ ನೀಡುತ್ತಾ ಬಂದಿದೆ. ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ (ಇಸಿಒಎಸ್ಒಸಿ) ಮೊದಲ ಅಧ್ಯಕ್ಷ ಭಾರತೀಯರಾಗಿದ್ದರು. ಇಸಿಒಎಸ್ಒಸಿ ಕಾರ್ಯಸೂಚಿ ರೂಪಿಸುವಲ್ಲಿ ಭಾರತವು ಸಹ ಕೊಡುಗೆ ನೀಡಿದೆ ಎಂದು ತಿಳಿಸಿದರು.
ಭಾರತದಲ್ಲಿ ಆರ್ಥಿಕತೆ ಮರು ಸ್ಥಾಪಿಸುತ್ತಿದ್ದೇವೆ. 2020ಕ್ಕೆ ಪ್ರತಿಯೊಬ್ಬರಿಗೂ ಸೂರು ನೀಡುತ್ತೇವೆ. ಸ್ವಚ್ಛತೆಗಾಗಿ ನಾವು ಬಹುದೊಡ್ಡ ಅಭಿಯಾನ ಮಾಡಿದ್ದೇವೆ. 30 ಕೋಟಿ 80 ಲಕ್ಷ ಟನ್​ ಕಾರ್ಬನ್​ ತ್ಯಾಜ್ಯ ಕಡಿಮೆ ಮಾಡಿದ್ದೇವೆ. ನಮ್ಮ ಧ್ಯೇಯ “ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್​” ಎಂಬುದು. ಇದರರ್ಥ ಎಲ್ಲರ ನಂಬಿಕೆಯೊಂದಿಗೆ ಒಟ್ಟಾಗಿ ಬೆಳವಣಿಗೆ ಸಾಧಿಸುವುದು ಎಂದು ಹೇಳಿದರು.
ನಮ್ಮ ದೇಶಿಯ ಪ್ರಯತ್ನಗಳ ಮೂಲಕ ಸುಸ್ಥಿರ ಅಭಿವೃದ್ಧಿ ಗುರಿ ಮತ್ತು 2030 ಕಾರ್ಯಸೂಚಿಯನ್ನು ಸಾಧಿಸಲು ನಾವು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದೇವೆ. ಸುಸ್ಥಿರ ಅಭಿವೃದ್ಧಿ ಗುರಿ ಮುಟ್ಟಲು ಅಭಿವೃದ್ಧಿ ಹೊಂದುತ್ತಿರುವು ರಾಷ್ಟ್ರಗಳಿಗೂ ಸಹ ಬೆಂಬಲವಾಗಿ ನಿಂತಿದ್ದೇವೆ ಎಂದು ತಿಳಿಸಿದರು.
ಕರೊನಾ ವೈರಸ್​ ಸಾಂಕ್ರಾಮಿಕವು ಎಲ್ಲ ರಾಷ್ಟ್ರಗಳ ಸ್ಥಿತಿಸ್ಥಾಪಕತ್ವವನ್ನು ತೀವ್ರವಾಗಿ ಪರೀಕ್ಷಿಸಿದೆ. ಭಾರತದಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಸರ್ಕಾರ ಮತ್ತು ನಾಗರಿಕ ಸಮಾಜದ ಪ್ರಯತ್ನಗಳನ್ನು ಒಟ್ಟುಗೂಡಿಸುವ ಮೂಲಕ ಜನರ ಚಳವಳಿಯನ್ನಾಗಿ ಮಾಡಲು ನಾವು ಪ್ರಯತ್ನಿಸಿದ್ದೇವೆ ಎಂದರು. (ಏಜೆನ್ಸೀಸ್​)
#WATCHLIVE: PM Narendra Modi delivers keynote address virtually at High-Level Segment of UN Economic and Social Council Sessionhttps://t.co/LNRVANza0B
— ANI (@ANI)July 17, 2020

Sign in to your account
Please enter an answer in digits:thirteen − eight =
Remember me
