ನವದೆಹಲಿ:ಮಹಾಮಾರಿ ಕರೊನಾ ಸೋಂಕಿಗೆ ಲಸಿಕೆಯ ಸಂಶೋಧನೆಯಲ್ಲಿ ಭಾರತ ಹಿಂದೆ ಬಿದ್ದಿಲ್ಲ. ದೊಡ್ಡ ದೊಡ್ಡ ಔಷಧೀಯ ಸಂಸ್ಥೆಗಳಿಂದ ಹಿಡಿದು, ಶೈಕ್ಷಣಿಕ ಸಂಸ್ಥೆಗಳ ಸಂಶೋಧಕರವರೆಗೆ ಒಟ್ಟು 30 ಗುಂಪುಗಳು ಲಸಿಕೆಯ ಸಂಶೋಧನೆಯಲ್ಲಿ ತೊಡಗಿವೆ ಎಂದು ಕೇಂದ್ರ ಸರ್ಕಾರ ಪ್ರಧಾನ ವೈಜ್ಞಾನಿಕ ಸಲಹೆಗಾರ ಡಾ. ಕೆ. ವಿಜಯ್​ ರಾಘವನ್​ ತಿಳಿಸಿದ್ದಾರೆ.
ಈ ಬಗ್ಗೆ ಗುರುವಾರ ಸರಣಿ ಟ್ವೀಟ್​ ಮಾಡಿರುವ ಅವರು, ಒಂದು ಲಸಿಕೆ ಅಭಿವೃದ್ಧಿಪಡಿಸಲು ಕನಿಷ್ಠ 10 ವರ್ಷಗಳಾದರೂ ಬೇಕಾಗುತ್ತದೆ. ಆದರೆ ನಾವು ಇಲ್ಲಿ ಒಂದು ವರ್ಷದಲ್ಲೇ ಅದನ್ನು ಅಭಿವೃದ್ಧಿಪಡಿಸುವ ಒತ್ತಡದಲ್ಲಿದ್ದೇವೆ. ಈ ಹಿನ್ನೆಲೆಯಲ್ಲಿ 100ಕ್ಕೂ ಹೆಚ್ಚು ಲಸಿಕೆಗಳ ಸಂಶೋಧನೆಯಲ್ಲಿ 2ರಿಂದ 3 ಶತಕೋಟಿ ಡಾಲರ್​ ಹೂಡಿಕೆ ಮಾಡಬೇಕಿದೆ ಎಂದು ಹೇಳಿದ್ದಾರೆ.
ಕೇವಲ ಒಂದು ಲಸಿಕೆಯ ಸಂಶೋಧನೆಗೆ ಮಾತ್ರ ಗಮನಹರಿಸದೆ, ಸಮಾನಾಂತರವಾಗಿ ಹಲವು ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಆದ್ದರಿಂದ ನಾವು ಒಮ್ಮೆಲೇ 100 ಲಸಿಕೆಗಳ ಸಂಶೋಧನೆಗೆ ಬಂಡವಾಳ ಹೂಡಬೇಕಾಗುತ್ತದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ:ಕರೊನಾ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದ್ದ ಕಂಪನಿಗೆ ಹಿನ್ನಡೆ? ಷೇರು ಮೌಲ್ಯ ಕುಸಿತ
ಲಸಿಕೆ ಅಭಿವೃದ್ಧಿಪಡಿಸುವುದು ಎಂದರೆ ದೀಪದ ಸ್ವಿಚ್​ ಆನ್​ ಮಾಡಿದಷ್ಟು ಸುಲಭವಲ್ಲ. ಕರೊನಾ ಸೋಂಕಿನ ಚಿಕಿತ್ಸೆಯಲ್ಲಿ ಎಲ್ಲರಿಗೂ ಮೊದಲ ದಿನದಿಂದಲೇ ರೋಗನಿರೋಧಕ ಚುಚ್ಚುಮದ್ದು ಬೇಕಾಗುತ್ತದೆ. ಆದ್ದರಿಂದ ಇದು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ಬಹುದೊಡ್ಡ ಸವಾಲು ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ತಯಾರಾಗುವ ಲಸಿಕೆಗಳು ಉತ್ಕೃಷ್ಟ ಗುಣಮಟ್ಟದ್ದಾಗಿರುತ್ತವೆ. ಹಾಗಾಗಿ ಜಗತ್ತಿನಲ್ಲಿ ಪ್ರತಿ ಮೂರು ಮಕ್ಕಳಿಗೆ ಕೊಡುವ ಲಸಿಕೆಯಲ್ಲಿ ಭಾರತದಲ್ಲಿ ತಯಾರಾದ ಲಸಿಕೆ ಇರುತ್ತದೆ ಎಂದು ಹೆಮ್ಮೆಪಟ್ಟುಕೊಂಡಿದ್ದಾರೆ.
ಸದ್ಯ ಭಾರತೀಯ ಕಂಪನಿಗಳು ಅಥವಾ ಭಾರತದ ಸಹಯೋಗಿ ಕಂಪನಿಗಳು ಅಭಿವೃದ್ಧಿಪಡಿಸುತ್ತಿರುವ ಲಸಿಕೆಗಳು ಕ್ಲಿನಿಕಲ್​ ಪರೀಕ್ಷೆಯ ಹಂತ ತಲುಪಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೆತ್ತಗಾದಂತೆ ಕಂಡರೂ ಹಿಂದೆ ಸರಿಯದೆ ಬಲವಾಗಿ ನಿಂತ ಡ್ರ್ಯಾಗನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
