ನವದೆಹಲಿ:ದೇಶದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿದರೆ ಕರೊನಾ ಸೋಂಕು 2021ರ ಫೆಬ್ರವರಿ ವೇಳೆಗೆ ಅಂತ್ಯವಾಗಲಿದೆ ಎಂದು ಸರ್ಕಾರದ ಸಮಿತಿಯೊಂದು ತಿಳಿಸಿದೆ. ದೇಶವು ಈಗಾಗಲೇ ಕರೊನಾ ಗರಿಷ್ಠ ಮಟ್ಟವನ್ನು ದಾಟಿರುವುದಾಗಿ ಸಮಿತಿ ತಿಳಿಸಿದೆ.
ದೇಶದಲ್ಲಿನ ಕರೊನಾ ಸ್ಥಿತಿಗತಿಯನ್ನು ಅಧ್ಯಯನ ಮಾಡಿ ವರದಿ ತಯಾರಿಸಲು ಸರ್ಕಾರ ಸಮಿತಿಯೊಂದನ್ನು ರಚಿಸಿತ್ತು. ಸಮಿತಿ ನೀಡಿರುವ ‘ಇಂಡಿಯನ್ ನ್ಯಾಷನಲ್ ಸೂಪರ್​ವಾಡಲ್’ ವರದಿಯ ಪ್ರಕಾರ, ಭಾರತದಲ್ಲಿ ಸೋಂಕು ಈಗಾಗಲೇ ಗರಿಷ್ಠ ಮಟ್ಟವನ್ನು ದಾಟಿದೆ. 2021ರ ಫೆಬ್ರವರಿ ವೇಳೆಗೆ ಸೋಂಕಿತರ ಸಂಖ್ಯೆ 1.06 ಕೋಟಿಗೆ ಏರಲಿದ್ದು, ಬಳಿಕ ಅಂತ್ಯ ಕಾಣಲಿದೆ. ಈಗಾಗಲೇ ದೇಶದ ಶೇ. 30 ಜನರಲ್ಲಿ ಕರೊನಾ ಪ್ರತಿಕಾಯಗಳು ಕಾಣಿಸಿಕೊಂ05ಡಿವೆ. ಮುಂಬರುವ ದಿನಗಳಲ್ಲಿ ಹಬ್ಬಗಳು ಹೆಚ್ಚಿದ್ದು, ಚಳಿಗಾಲವೂ ಆರಂಭವಾಗುವ ಕಾರಣ ಸೋಂಕು ಹೆಚ್ಚಾಗಬಹುದು. ಒಂದೇ ತಿಂಗಳಲ್ಲಿ 26 ಲಕ್ಷ ಪ್ರಕರಣಗಳು ಪತ್ತೆಯಾಗಬಹುದು ಎಂದು ವರದಿ ತಿಳಿಸಿದೆ.
ಲಾಕ್​ಡೌನ್​ನಿಂದ ಅನುಕೂಲ:ಕರೊನಾ ಸೋಂಕನ್ನು ತಡೆಗಟ್ಟಲು ಕೈಗೊಳ್ಳಲಾಗಿದ್ದ ಲಾಕ್​ಡೌನ್​ನಿಂದ ಲಕ್ಷಾಂತರ ಜನರ ಜೀವ ಉಳಿದಿದೆ ಎಂದು ವರದಿ ಹೇಳಿದೆ. ಲಾಕ್​ಡೌನ್ ಮಾಡದೇ ಇದ್ದಿದ್ದರೆ ಜೂನ್ ಮಧ್ಯದಲ್ಲಿ ಕಾಣಿಸಿಕೊಂಡಿದ್ದ ಸೋಂಕಿನ 15 ಪಟ್ಟು ಹೆಚ್ಚು ಸೋಂಕು ದೇಶದಲ್ಲಿ ಪತ್ತೆಯಾಗುತ್ತಿತ್ತು. ಏಪ್ರಿಲ್​ನಿಂದ ಜೂನ್ 12ರವರೆಗೆ ಸೋಂಕಿನ ಪ್ರಮಾಣ 100 ಪಟ್ಟು ಹೆಚ್ಚಳವಾಗಿದೆ. ಒಂದು ವೇಳೆ ಆ ಸಮಯದಲ್ಲಿ ಲಾಕ್​ಡೌನ್ ಮಾಡಿರದಿದ್ದರೆ ಸೋಂಕು 10 ಸಾವಿರ ಪಟ್ಟು ಹೆಚ್ಚಳವಾಗುತ್ತಿತ್ತು. ಲಾಕ್​ಡೌನ್​ನಿಂದಾಗಿ ಕರೊನಾ ಗರಿಷ್ಠ ಮಟ್ಟ ತಲುಪುವುದು ವಿಳಂಬವಾಯಿತು. ಇದರಿಂದಾಗಿ ದೇಶವು ಕರೊನಾ ಗರಿಷ್ಠ ಮಟ್ಟವನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗಿದೆ. ಲಾಕ್​ಡೌನ್ ಇಲ್ಲದಿದ್ದರೆ, ಆಗಸ್ಟ್ ವೇಳೆಗೆ ಕನಿಷ್ಠ 25 ಲಕ್ಷ ಜನರು ಮೃತರಾಗಿರುತ್ತಿದ್ದರು ಎಂದು ವರದಿ ಹೇಳಿದೆ.
ಕರೊನಾ ಸೋಂಕು ಮನುಷ್ಯರ ಚರ್ಮದ ಮೇಲೆ 9 ಗಂಟೆ ಜೀವಿಸಬಲ್ಲದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸೋಂಕಿನಿಂದ ಸಾವನ್ನಪ್ಪಿದ್ದ ವ್ಯಕ್ತಿಯ ದೇಹವನ್ನು ಜಪಾನ್ ಮೂಲದ ವಿಜ್ಞಾನಿಗಳು ಸಂಶೋಧನೆಗೆ ಒಳಪಡಿಸಿದ್ದು, ಈ ವಿಚಾರವನ್ನು ಕಂಡುಕೊಂಡಿದ್ದಾರೆ. ಫ್ಲು ವೈರಸ್ ಮನುಷ್ಯನ ದೇಹದ ಮೇಲೆ 1.8 ಗಂಟೆ ಜೀವಿಸಬಲ್ಲದು. ಆದರೆ ಕರೊನಾ ಸೋಂಕು 9 ಗಂಟೆಯವರೆಗೂ ಜೀವಿಸಬಲ್ಲದು. ಇದರಿಂದಾಗಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಆಗಾಗ್ಗೆ ಕೈ ತೊಳೆಯುವುದರಿಂದ ಸೋಂಕನ್ನು ನಿಯಂತ್ರಿಸಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 15 ಸೆಕೆಂಡುಗಳ ಕಾಲ ಎಥನಾಲ್ ಬಳಕೆ ಮಾಡಿದರೆ ಫ್ಲು ವೈರಸ್ ಮತ್ತು ಕರೊನಾ ವೈರಸ್ ಎರಡೂ ಸಾವನ್ನಪು್ಪತ್ತವೆ ಎಂದು ಅವರು ಹೇಳಿದ್ದಾರೆ.
ಕರೊನಾ ಸಮಯದಲ್ಲೂ ವಿಜೃಂಭಣೆಯಿಂದ ಓಣಂ ಹಬ್ಬ ಆಚರಿಸಿದ ಕೇರಳ ಇದೀಗ ಅದಕ್ಕೆ ಬೆಲೆ ತೆರುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ. ಕೇರಳದಲ್ಲಿ ಓಣಂಗಾಗಿ ಸಂಚಾರ ವ್ಯವಸ್ಥೆಯನ್ನು ಹೆಚ್ಚಿಸಲಾಯಿತು. ಪ್ರವಾಸಿಗರ ಭೇಟಿಗೆ ಅವಕಾಶ ಮಾಡಿಕೊಡಲಾಯಿತು. ಇದರಿಂದಾಗಿ ಸೋಂಕು ಗಣನೀಯವಾಗಿ ಏರಿತು. ಅಕ್ಟೋಬರ್ 1ರಿಂದ 17ರವರೆಗೆ 1.35 ಲಕ್ಷಕ್ಕೂ ಅಧಿಕ ಪ್ರಕರಣ ಪತ್ತೆಯಾಗಿದೆ. ಈಗ ಬೇರೆ ರಾಜ್ಯಗಳು ಕೇರಳದಿಂದ ಪಾಠ ಕಲಿಯಬೇಕಿದೆ ಎಂದು ಅವರು ಹೇಳಿದ್ದಾರೆ.
ಕಳೆದ ಆರು ತಿಂಗಳಿನಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಮುಂಬೈ ಮೆಟ್ರೋ ರೈಲು ಸಂಚಾರ ಇಂದಿನಿಂದ ಪುನರಾರಂಭವಾಗಲಿದೆ. ದೈಹಿಕ ಅಂತರ, ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಸೇರಿ ಅನೇಕ ಮುಂಜಾಗ್ರತಾ ಕ್ರಮಗಳೊಂದಿಗೆ ಮೆಟ್ರೋ ರೈಲು ಸಂಚಾರ ಆರಂಭಿಸುತ್ತಿರುವುದಾಗಿ ತಿಳಿಸಲಾಗಿದೆ.
ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಪ್ರತಿನಿತ್ಯ ಏರಿಕೆಯಾಗುತ್ತಿದ್ದು, ಭಾನುವಾರ 75 ಲಕ್ಷ ದಾಟಿದೆ. ಭಾರತ ಜತೆಯಲ್ಲಿ ಹಲವು ರಾಷ್ಟ್ರಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬರುತ್ತಿದ್ದು, ಜಾಗತಿಕವಾಗಿ ಸೋಂಕಿತರ ಸಂಖ್ಯೆ 4 ಕೋಟಿಗೂ ಹೆಚ್ಚಾಗಿದೆ. ಕರೊನಾ ಬಾಧಿತ ರಾಷ್ಟ್ರಗಳ ಪಟ್ಟಿಯಲ್ಲಿ 83 ಲಕ್ಷ ಪ್ರಕರಣಗಳೊಂದಿಗೆ ಅಮೆರಿಕ ಮೊದಲನೇ ಸ್ಥಾನದಲ್ಲಿದ್ದರೆ, 75 ಲಕ್ಷದ ಪ್ರಕರಣಗಳೊಂದಿಗೆ ಭಾರತ ಎರಡನೇ ಸ್ಥಾನ ಮತ್ತು 52 ಲಕ್ಷ ಪ್ರಕರಣಗಳೊಂದಿಗೆ ಬ್ರೆಜಿಲ್ ಮೂರನೇ ಸ್ಥಾನದಲ್ಲಿದೆ. ವಿಶ್ವಾದ್ಯಂತ 11.15 ಲಕ್ಷಕ್ಕೂ ಅಧಿಕ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಕರೊನಾ ಬಾಧಿತ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲನೇ ಸ್ಥಾನ, ಆಂಧ್ರ ಪ್ರದೇಶ ಎರಡನೇ ಸ್ಥಾನ ಮತ್ತು ಕರ್ನಾಟಕ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿವೆ.
ದೇಶದಲ್ಲಿ ಶನಿವಾರ 61,800 ಹೊಸ ಪ್ರಕರಣಗಳು ಪತ್ತೆಯಾಗಿವೆ. 72,600ಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 7.85 ಲಕ್ಷಕ್ಕೆ ಇಳಿದಿದೆ. ಮೃತರ ಸಂಖ್ಯೆ 1.14 ಲಕ್ಷಕ್ಕೆ ಹೆಚ್ಚಳವಾಗಿದೆ. ಗುಣಮುಖ ಪ್ರಮಾಣ ಶೇ. 88ಕ್ಕೂ ಅಧಿಕವಾಗಿದೆ. ಇದುವರೆಗೆ 9.32 ಕೋಟಿಗೂ ಅಧಿಕ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಪಾಸಿಟಿವಿಟಿ ಪ್ರಮಾಣ ಶೇ. 8ಕ್ಕಿಂತ ಕಡಿಮೆ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದ ಕೆಲವು ಜಿಲ್ಲೆಗಳಲ್ಲಿ ಕರೊನಾ ಸಮುದಾಯ ಪ್ರಸರಣವಾಗುತ್ತಿದೆ ಎಂದು ಕೇಂದ್ರ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + three =
Remember me
