ನವದೆಹಲಿ:ರಾಜಕೀಯ ಕಾರಣಕ್ಕೆ ಪಕ್ಷದ ಮುಖಂಡರೊಬ್ಬರು ದೇಶದ್ರೋಹಿ ಹೇಳಿಕೆ ನೀಡಿದ್ದು, ಭಾರತದೊಳಗೆ ಶತ್ರುರಾಷ್ಟ್ರವನ್ನು ನಿರ್ಮಿಸುವ ಘೋಷಣೆ ಹೊರಡಿಸಿದ್ದಾರೆ. ಚುನಾವಣಾ ಪ್ರಚಾರವೊಂದರಲ್ಲಿ ಸಮುದಾಯವೊಂದನ್ನು ಓಲೈಸುವ ಸಲುವಾಗಿ ಅವರು ನೀಡಿರುವ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದೆ.
ಪಶ್ಚಿಮ ಬಂಗಾಳದಲ್ಲಿನ ಚುನಾವಣಾ ಹಿನ್ನೆಲೆಯಲ್ಲಿ ಟಿಎಂಸಿ ನಡೆಸಿದ್ದ ಭಾಷಣದಲ್ಲಿ ಇಂಥದ್ದೊಂದು ದೇಶದ್ರೋಹಿ ಹೇಳಿಕೆ ಹೊರಬಿದ್ದಿದೆ. ಇಲ್ಲಿನ ಬಿರ್ಭುಮ್‌ ಪ್ರದೇಶದ ನನೂರ್‌ನ ಬಸಪರ ಎಂಬಲ್ಲಿ ಟಿಎಂಸಿ ಕಾರ್ಯಕರ್ತರು-ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟಿಎಂಸಿ ಮುಖಂಡ ಶೇಖ್‌ ಅಲಂ ದೇಶದ್ರೋಹಿ ಹೇಳಿಕೆ ನೀಡಿದ್ದಾರೆ.
ಬಿರ್ಭುಮ್‌ನ ನನೂರ್‌ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಬಿಧನ್‌ ಚಂದ್ರ ಮಝಿ ಪರವಾಗಿ ಮಾತನಾಡಿದ ಶೇಖ್‌ ಅಲಂ, ನಾವು (ಮುಸ್ಲಿಮರು) ಶೇ. 30 ಇದ್ದೇವೆ, ಅವರು ಶೇ. 70 ಇದ್ದಾರೆ. ಆ ಶೇ. 70 ಮಂದಿ ಬೆಂಬಲದಿಂದ ಅವರು ಅಧಿಕಾರಕ್ಕೆ ಬರುತ್ತಿದ್ದಾರೆ. ಅದೇ ನಾವು ಶೇ. 30 ಮುಸ್ಲಿಮರು ಒಂದುಗೂಡಿದರೆ ನಾಲ್ಕು ಪಾಕಿಸ್ತಾನವನ್ನು ಸೃಷ್ಟಿಸಬಹುದು. ಆ ಶೇ. 70 ಮಂದಿ ಎಲ್ಲಿಗೆ ಹೋಗುತ್ತಾರೆ? ಎಂದು ಅವರು ಪ್ರಶ್ನಿಸಿದ್ದಾರೆ. ಈ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷ ಓಲೈಕೆ ರಾಜಕಾರಣಕ್ಕೆ ಇಳಿದಿದೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ದಿಲೀಪ್‌ ಘೋಷ್‌ ಹಾಗೂ ಬಿಜೆಪಿ ಮುಖಂಡ ಅಮಿತ್‌ ಮಾಳವೀಯ ವಿರೋಧ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)
We are 30% and they are 70%. They will come to power with the support of the 70%, they should be ashamed. If our Muslim population moves to one side then we can create 4 new Pakistans. Where will 70% of the population go?: TMC leader Sheikh Alam (24.03)pic.twitter.com/MrmbjyDad9
— ANI (@ANI)March 25, 2021

ಬೆಂಗಳೂರು ಎಂಟ್ರಿಗೂ ಮುನ್ನ ಕರೊನಾ ನೆಗೆಟಿವ್‌ ವರದಿ ಕಡ್ಡಾಯ- ಯಾರಿಗೆಲ್ಲಾ ಅನ್ವಯ? ಎಂದಿನಿಂದ ಜಾರಿ? ಇಲ್ಲಿದೆ ಡಿಟೇಲ್ಸ್‌

‘ರಾಜ್ಯದ ಜನತೆ ಸಂಕಷ್ಟದಲ್ಲಿದಾರೆ, ದಿಕ್ಕು ತಪ್ಪಿಸಬೇಡಿ’ : ಸಿಡಿ ಲೇಡಿಗೆ ಎಚ್​ಡಿಕೆ ಸಲಹೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 − 9 =
Remember me
