ಬೆಂಗಳೂರು:ಕರೊನಾ ವೈರಸ್​ ಹರಡುತ್ತಿರುವ ಪ್ರಖರತೆಯಿಂದಾಗಿ ಲಾಕ್​ಡೌನ್​ ಅವಧಿ ವಿಸ್ತರಣೆಗೊಂಡಿದೆ. ಆದರೆ ಕೆಲವೊಂದು ಸಡಿಲಿಕೆಗಳನ್ನು ಸರ್ಕಾರ ಮಾಡಿದ್ದರೂ ದೇವಸ್ಥಾನಗಳನ್ನು ತೆರೆಯಲು ಅನುಮತಿ ಸಿಗಲಿಲ್ಲ. ಇದೆ ರೀತಿ ವೈರಸ್​ ಹರಡುತ್ತಿದ್ದರೆ, ಲಾಕ್​ಡೌನ್​ ಮುಂದುವರಿಯುವ ಹಿನ್ನೆಲೆಯಲ್ಲಿ ದೇವಸ್ಥಾನಗಳನ್ನು ತೆರೆಯುವುದು ಕಷ್ಟದ ಮಾತೇ.
ಇದರಿಂದಾಗಿ ದೇವಾಲಯದ ಕೆಲಸ ಕಾರ್ಯಗಳನ್ನು ನಂಬಿ ಜೀವನ ನಡೆಸುತ್ತಿರುವ ಎಷ್ಟೋ ಮಂದಿಗೆ ಸಂಕಷ್ಟ ಎದುರಾಗಿದೆ. ದೇವಾಲಯದ ಪೂಜಾರಿಗಳಿಗೂ ಇದು ಕಷ್ಟದ ಕಾಲ ವಿಶ್ವದ ಶ್ರೀಮಂತ ದೇವರು ಎನಿಸಿಕೊಂಡಿರುವ ತಿರುಪತಿ ದೇವಾಲಯವೇ ಈಗ ತನ್ನ ಸಿಬ್ಬಂದಿಗೆ ವೇತನ ನೀಡಲು ಆಸ್ತಿಯನ್ನು ಮಾರಾಟ ಮಾಡಲು ಮುಂದಾಗಿರುವ ಸಂದರ್ಭದಲ್ಲಿ ಭಕ್ತರ ಚಿಕ್ಕಪುಟ್ಟ ಕಾಣಿಕೆಗಳನ್ನೇ ನೆಚ್ಚಿಕೊಂಡಿರುವ ಚಿಕ್ಕಪುಟ್ಟ ದೇವಾಲಯಗಳ ಗತಿಯೇನು?
ಇದನ್ನೂ ಓದಿ:‘ನಮ್ಮ ಮೆಟ್ರೊ’ ಸಂಚಾರಕ್ಕೆ ಕಾಯುತ್ತಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ…
ಅದೇ ಇನ್ನೊಂದೆಡೆ ದೇವಾಲಯಗಳಲ್ಲಿನ ದೇವರ ದರ್ಶನ ಮಾಡದೇ ಹಲವಾರು ಭಕ್ತರು ಕೂಡ ಚಿಂತೆಗೆ ಒಳಗಾಗಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ, ಇದೀಗ ಭಕ್ತರಿಗೆ ಆನ್​ಲೈನ್​ ಮೂಲಕವೇ ದೇವರ ದರ್ಶನ ಮಾಡಿಸಲು ಮುಜರಾಯಿ ಇಲಾಖೆ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.
ಪೂಜೆಯ ನೇರಪ್ರಸಾರವನ್ನು ಆನ್​ಲೈನ್​ ಮೂಲಕವೇ ಮಾಡಿ ಪೂಜೆಯ ನೇರ ದರುಶನವನ್ನು ಭಕ್ತರಿಗೆ ಕಲ್ಪಿಸಲು ಚಿಂತನೆ ನಡೆಸಲಾಗಿದೆ. ಈ ಕುರಿತು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ದೇವಸ್ಥಾನಗಳ ಕಾರ್ಯನಿರ್ವಾಹಕರಿಗೆ ಪತ್ರ ಬರೆದಿದ್ದಾರೆ. ಅವರವರ ವ್ಯಾಪ್ತಿಯಲ್ಲಿರುವ ದೇವಾಲಯಗಳಲ್ಲಿ ನಡೆಯುವ ಸೇವಾ ಪೂಜಾ ಕೈಂಕರ್ಯಗಳನ್ನು ಆಯಾ ದೇವಾಲಯದ ಸಂಪ್ರದಾಯ ಮತ್ತು ಆಚರಣೆಗೆ ಅನುಗುಣವಾಗಿ ಆನ್‌ಲೈನ್‌ ಮೂಲಕ ಭಕ್ತರು ವೀಕ್ಷಿಸಲು ಅನುವು ಮಾಡಿಕೊಡುವಂತೆ ಪತ್ರದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ಕೋಟಿ ಜನರ ತಲುಪಿದ ‘ಆಯುಷ್ಮಾನ್​ ಭಾರತ್​’-ಪ್ರಧಾನಿ ಟ್ವೀಟ್​: ಕಣ್ಣೀರಾದ ಯೋಧನ ಪತ್ನಿ
ಭಕ್ತರು ಮೊದಲೇ ಆನ್​ಲೈನ್​ ಮೂಲಕ ತಮಗೆ ಇಂತಿಂಥ ಸೇವೆಗಳು ಬೇಕು ಎಂದು ಕಾಯ್ದಿರಿಸಿಕೊಂಡರೆ, ಅವರು ನೇರ ದರ್ಶನವನ್ನು ಕುಳಿತಲ್ಲಿಯೇ ಪಡೆಯಬಹುದು. ಆದ್ದರಿಂದ ಕಾಯ್ದಿರಿಸಬಹುದಾದ ಸೇವೆಗಳು, ಲಭ್ಯವಿರುವ ದಿನ, ಈಗಾಗಲೇ ಎಷ್ಟು ಬುಕಿಂಗ್​ ಆಗಿದೆ, ಪ್ರಸಾದ ಭಕ್ತರಿಗೆ ಹೇಗೆ ತಲುಪಿಸಬೇಕು ಇತ್ಯಾದಿ ಸಂಪೂರ್ಣ ಮಾಹಿತಿ ಇರುವ ಆ್ಯಪ್​ ಹೇಗೆ ಆರಂಭಿಸಬಹುದು ಎಂಬ ಬಗ್ಗೆ ತಿಳಿಸುವಂತೆ ಪತ್ರದಲ್ಲಿ ಸೂಚನೆ ನೀಡಲಾಗಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಬೆಳಗಾವಿ, ಮಂಡ್ಯ, ಚಾಮರಾಜನಗರ, ಯಾದಗಿರಿ, ಕೊಡಗು, ಗದಗ, ಚಿಕ್ಕಬಳ್ಳಾಪುರ, ಬಳ್ಳಾರಿ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಉಡುಪಿ ಜಿಲ್ಲಾಧಿಕಾರಿಗಳು ಮತ್ತು ‘ಎ’ ವರ್ಗದ ದೇವಸ್ಥಾನಗಳ ಕಾರ್ಯನಿರ್ವಹಣಾಧಿಕಾರಿಗಳು, ಆಡಳಿತಾಧಿಕಾರಿಗಳು ಮತ್ತು ಅನುವಂಶಿಕ ಮೊಕ್ತೇಸರರಿಗೆ ಪತ್ರ ಬರೆದಿದು ಈ ಮಾಹಿತಿಗೆ ಕೋರಿದ್ದಾರೆ.
ಇದನ್ನೂ ಓದಿ:ಅಸಾಧ್ಯ ಎಂದು ಸರ್ಕಾರವೇ ಕೈಚೆಲ್ಲಿದಾಗ, ಈ ಅಪ್ಪ-ಮಗ ಮಾಡಿ ತೋರಿಸಿದರೊಂದು ಅದ್ಭುತ!
ಇದಕ್ಕಾಗಿ ಯಾವ ರೀತಿಯ ಆ್ಯಪ್​ ಆರಂಭಿಸಬೇಕು ಎಂಬ ಬಗ್ಗೆಯೂ ಗಂಭೀರ ಚಿಂತನೆ ನಡೆದಿದೆ ಎನ್ನಲಾಗಿದೆ(ಏಜೆನ್ಸೀಸ್​)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:four − 3 =
Remember me
