ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್​ ಮತ್ತು ಶೋಫಿಯಾನ್​ನಲ್ಲಿ ಗುರುವಾರ ರಾತ್ರಿಯಿಂದ ಇದುವರೆಗೂ ಮುಂದುವರಿದಿರುವ ಕಾರ್ಯಾಚರಣೆಗಳಲ್ಲಿ ಭದ್ರತಾ ಸಿಬ್ಬಂದಿ ಒಟ್ಟು 8 ಉಗ್ರರನ್ನು ಹತ್ಯೆ ಮಾಡಿದ್ದಾರೆ.
ಪ್ಯಾಂಪೋರ್​ನ ಮಸೀದಿಯೊಂದರಲ್ಲಿ ಗುರುವಾರ ಬೆಳಗ್ಗೆಯಿಂದ ಅಡಗಿಕೊಂಡಿದ್ದ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಶೋಫಿಯಾನ್​ನಲ್ಲಿ ಒಟ್ಟು ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ.
ಪ್ಯಾಂಪೋರ್​ನ ಜಾಮೀಯ ಮಸೀದಿಯಲ್ಲಿ ಅಡಗಿಕೊಂಡಿದ್ದ ಉಗ್ರರಿಗೆ ಶರಣಾಗುವಂತೆ ಕಮಾಂಡೋಗಳು ಸೂಚನೆ ನೀಡಿದರೂ, ಉಗ್ರರು ಸಮ್ಮತಿಸಲಿಲ್ಲ. ಈ ಹಿನ್ನೆಲೆಯಲ್ಲಿ ಮಸೀದಿಯೊಳಗೆ ನುಗ್ಗಿದ ಕಮಾಂಡೋ ಪಡೆ ಯೋಧರು ಇದುವರೆಗೆ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಇನ್ನೂ ಹಲವು ಉಗ್ರರು ಅಲ್ಲಿ ಅಡಗಿಕೊಂಡಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದುವರಿದಿದೆ.
ಇದನ್ನೂ ಓದಿ:‘ಓಂ’ ಚಿತ್ರದಲ್ಲಿ ಮಿಂಚಿದ್ದ ರೌಡಿ ಕೊರಂಗು ಕೃಷ್ಣ!
ಈ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ನೀಡಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸ್​ ಡಿಜಿಪಿ ದಿಲ್​ಬಾಗ್​ ಸಿಂಗ್​, ಗುರುವಾರ ರಾತ್ರಿ ಸ್ಥಗಿತಗೊಳಿಸಲಾಗಿದ್ದ ಕಾರ್ಯಾಚರಣೆಯನ್ನು ಶುಕ್ರವಾರ ಬೆಳಗ್ಗೆ ಮುಂದುವರಿಸಲಾಯಿತು. ಪ್ಯಾಂಪೋರ್​ನ ಮೀಜ್​ನಲ್ಲಿನ ಜಾಮಿಯಾ ಮಸೀದಿಯಲ್ಲಿ ಭದ್ರತಾಪಡೆಗಳು ಒಬ್ಬ ಉಗ್ರರನನ್ನು ಹೊಡೆದುರುಳಿಸಿದ್ದರು. ಇದಾದ ಬಳಿಕ ಇನ್ನಿಬ್ಬರು ಉಗ್ರರು ಮಸೀದಿಯನ್ನು ಹೊಕ್ಕಿದ್ದಾರೆ. ಈ ಮಸೀದಿ ತುಂಬಾ ವಿಶಾಲವಾಗಿರುವ ಕಾರಣ ಭದ್ರತಾಪಡೆಗಳು ನಿರ್ದಿಷ್ಟ ತಂತ್ರಗಾರಿಕೆ ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಪ್ಯಾಂಪೋರ್​ ಕಾರ್ಯಾಚರಣೆ ಆರಂಭಿಸಲು ಸಾಕಷ್ಟು ಸಮಯ ಹಿಡಿಯಿತು. ಮಸೀದಿಯ ಪಾವಿತ್ರ್ಯಕ್ಕೆ ಧಕ್ಕೆ ಒದಗದ ರೀತಿಯಲ್ಲಿ ಕಾರ್ಯಾಚರಣೆ ಮುಂದುವರಿದಿದೆ. ಒಳಗೆ ಅಡಗಿದ್ದ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ಪೊಲೀಸ್​ ಐಜಿ ತಿಳಿಸಿದರು.ಶೋಫಿಯಾನ್​ನ ಮುನಾಂದ್​ನಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಗುರುವಾರದಿಂದ ಇದುವರೆಗೆ ಹತ್ಯೆ ಮಾಡಲಾದ ಉಗ್ರರ ಸಂಖ್ಯೆ 8ಕ್ಕೆ ಹೆಚ್ಚಳವಾಗಿದ್ದಾಗಿ ಹೇಳಿದರು.
ಡಾನ್​ ಜಯರಾಜ್​ನ ಬಲಗೈ ಬಂಟನಾಗಿದ್ದ ಕೊರಂಗು ಕೃಷ್ಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + one =
Remember me
