ಇಂಫಾಲ್​:ಪುರುಷರ ಗುಂಪೊಂದು ಇಬ್ಬರು ಮಹಿಳೆಯರನ್ನು ರಸ್ತೆಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರೀ ಖಂಡನೆ ವ್ಯಕ್ತವಾಗಿದೆ. ಅಲ್ಲದೆ, ಕಠಿಣ ಕ್ರಮ ಜರುಗಿಸಲು ಒತ್ತಾಯಿಸಲಾಗಿದೆ.
ಈ ಘಟನೆ ಮಣಿಪುರದ ಕೊಂಗ್​ಪೊಕ್ಪಿ ಜಿಲ್ಲೆಯಲ್ಲಿ ಮೇ 4 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತ ಮಹಿಳೆಯರಿಬ್ಬರನ್ನು ಗ್ಯಾಂಗ್​ರೇಪ್​ ಮಾಡಿದ್ದಾರೆ ಎಂದು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ಆರೋಪ ಮಾಡಿದೆ. ಮಣಿಪುರ ರಾಜಧಾನಿ ಇಂಫಾಲ್​ನಿಂದ 35 ಕಿ.ಮೀ. ಅಂತರದಲ್ಲಿ ಈ ಅಮಾನುಷ ಘಟನೆ ನಡೆದಿದ್ದು, ಈ ಸಂಬಂಧ ಎಫ್​ಐಆರ್​ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಇಂಡಿಯಾ ನಾಮಕರಣ ಬ್ರೇನ್ ಯಾರದ್ದು?: ಕಮಲ ಪಾಳಯದ ದೇಶಭಕ್ತಿ ಮಂತ್ರಕ್ಕೆ ವಿಪಕ್ಷಗಳ ರಾಷ್ಟ್ರಪ್ರೇಮದ ತಿರುಗೇಟು ತಂತ್ರ
ಹೆಚ್ಚಿನ ಆದ್ಯತೆ ನೀಡಿ ಈ ಪ್ರಕರಣವನ್ನು ತನಿಖೆ ನಡೆಸುವಂತೆ ಮಣಿಪುರ ಸಿಎಂ ಎನ್​. ಬೈರೆನ್​ ಸಿಂಗ್​ ಆದೇಶಿಸಿದ್ದಾರೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಘಟನೆಯ ಬಗ್ಗೆ ನನ್ನೊಂದಿಗೆ ಮಾತನಾಡಿದ್ದಾರೆ. ಶೀಘ್ರದಲ್ಲೇ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದೇನೆ ಎಂದರು.
ಸ್ಮೃತಿ ಇರಾನಿ ಅವರು ಟ್ವೀಟ್​ ಸಹ ಮಾಡಿದ್ದು, ಮಣಿಪುರದ ಇಬ್ಬರು ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಭಯಾನಕ ವಿಡಿಯೋ ಅಂತ್ಯಂತ ಖಂಡನೀಯ ಮತ್ತು ಅಮಾನವೀಯವಾಗಿದೆ. ಸಿಎಂ ಬೈರೆನ್​ ಸಿಂಗ್​ ಅವರೊಂದಿಗೆ ಮಾತನಾಡಿದ್ದೇನೆ. ಪ್ರಸ್ತುತ ತನಿಖೆ ನಡೆಯುತ್ತಿದೆ ಎಂದು ನನಗೆ ತಿಳಿಸಿದರು ಮತ್ತು ಅಪರಾಧಿಗಳನ್ನು ನ್ಯಾಯಾಲಯದ ಮುಂದೆ ತರಲು ಯಾವುದೇ ಪ್ರಯತ್ನವನ್ನು ನಾವು ಬಿಡುವುದಿಲ್ಲ ಎಂದು ಭರವಸೆ ನೀಡಿದರು ಎಂದು ಇರಾನಿ ಟ್ವೀಟ್​ ಮಾಡಿದ್ದಾರೆ.
The horrific video of sexual assault of 2 women emanating from Manipur is condemnable and downright inhuman. Spoke to CM@NBirenSinghji who has informed me that investigation is currently underway & assured that no effort will be spared to bring perpetrators to justice.
— Smriti Z Irani (@smritiirani)July 19, 2023

ಪರಿಶಿಷ್ಟ ಪಂಗಡಗಳ (ST) ಸ್ಥಾನಮಾನಕ್ಕಾಗಿ ಮೈತೀಸ್​ ಸಮುದಾಯ ಇಟ್ಟಿರುವ ಬೇಡಿಕೆಯ ಕುರಿತು ಮಣಿಪುರದ ಮೈತೀಸ್​ ಮತ್ತು ಕುಕಿ ಬುಡಕಟ್ಟುಗಳ ನಡುವೆ ಘರ್ಷಣೆಗಳು ಸಂಭವಿಸಿರುವ ಬೆನ್ನೆಲ್ಲೇ ಈ ಭಯಾನಕ ಘಟನೆಯೂ ನಡೆದಿದೆ.
ಇದನ್ನೂ ಓದಿ:ನಿಲ್ಲುವುದೇ ಕುಣಿಯುವ ಕಪ್ಪೆಗಳ ತಿಲ್ಲಾನ…?
ಈ ಕೃತ್ಯ ಮೇ 4ರಂದು ಕಾಂಗ್​ಪೊಕ್ಪಿ ಜಿಲ್ಲೆಯಲ್ಲಿ ನಡೆದಿದ್ದು, ಅಸಹಾಯಕ ಮಹಿಳೆಯರ ಮೇಲೆ ಪುರುಷರು ನಿರಂತರವಾಗಿ ದೌರ್ಜನ್ಯ ಎಸಗಿರುವುದು ಕಂಡುಬಂದಿದೆ. ಎಷ್ಟೇ ಕಣ್ಣೀರಿಟ್ಟು, ಗೊಗರೆದರು ಸಂತ್ರಸ್ತೆಯರನ್ನು ದುಷ್ಟರು ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಈ ಸಂಬಂಧ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ಕೇಂದ್ರ ಮಹಿಳಾ ಆಯೋಗ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ಮೊರೆ ಹೋಗಿದೆ.(ಏಜೆನ್ಸೀಸ್​)
ಸದನಕ್ಕೆ ಶೋಭೆಯಲ್ಲ: ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ ಶಾಸಕರ ಅಮಾನತು

ರಮ್ಯಾ ಇರ್ತಾರಾ? ರಚಿತಾ ಬರ್ತಾರಾ?; ಆಗಸ್ಟ್ 15ರಂದು ಸೆಟ್ಟೇರಲಿದೆ ‘ಸಂಜು ವೆಡ್ಸ್ ಗೀತಾ 2’

ಜಾನ್ವಿ ಕಪೂರ್ ಕಿವಿ ಕಚ್ಚಿದ ವರುಣ್ ಧವನ್; ತರಾಟೆಗೆ ತೆಗೆದುಕೊಂಡ ನೆಟ್ಟಿಗರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − six =
Remember me
