ನವದೆಹಲಿ:ಐದು ಸಾವಿರ ಕಿಲೋ ಮೀಟರ್ ವರೆಗಿನ ಗುರಿ ಮೇಲೆ ನಿಖರವಾಗಿ ದಾಳಿ ಮಾಡುವ ಸಾಮರ್ಥ್ಯದ ‘ಅಗ್ನಿ-5’ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಭಾರತ ಬುಧವಾರ ಯಶಸ್ವಿಯಾಗಿ ಪ್ರಯೋಗಿಸಿದೆ. ಪದೇ ಪದೆ ಖ್ಯಾತೆ ತೆಗೆಯುತ್ತಿರುವ ಚೀನಾಕ್ಕೆ ಇದು ಖಡಕ್ ಸಂದೇಶ ಎಂದೇ ಪರಿಗಣಿಸಲಾಗಿದೆ. ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ (ಐಸಿಬಿಎಂ) ವಿಭಾಗಕ್ಕೆ ಸೇರಿದ ಅಗ್ನಿ-5 ಕ್ಷಿಪಣಿಯನ್ನು ಒಡಿಶಾ ತೀರದಾಚೆ ಇರುವ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಸಂಜೆ 7.50ಕ್ಕೆ ಉಡಾಯಿಸಲಾಯಿತು. ಈ ಕ್ಷಿಪಣಿ ಮೂರು ಹಂತದ ಘನ ಇಂಧನ ಎಂಜಿನ್ ಬಳಸುತ್ತದೆ ಹಾಗೂ ಅದರ ದಾಳಿಯ ನಿಖರತೆ ತುಂಬಾ ಉನ್ನತ ಮಟ್ಟದ್ದಾಗಿರುತ್ತದೆ. ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಇದನ್ನು ಅಭಿವೃದ್ಧಿಪಡಿಸಿದೆ.
ಅಗ್ನಿ-5 ಯಶಸ್ವಿ ಉಡಾವಣೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.
ಚೀನಾವೇ ಟಾರ್ಗೆಟ್ಅಣ್ವಸ್ತ್ರಯುಕ್ತ ಚೀನಾವನ್ನು ಅಣ್ವಸ್ತ್ರ ಸಾಮರ್ಥ್ಯದ ಮೂಲಕವೇ ಎದುರಿಸುವುದು ಅಗ್ನಿ-5ರ ಮುಖ್ಯ ಉದ್ದೇಶವಾಗಿದೆ. 3,000ದಿಂದ 3,500 ಕಿ.ಮೀ. ವ್ಯಾಪ್ತಿಯ ಅಗ್ನಿ-3 ಕ್ಷಿಪಣಿಯೇ ಭಾರತ ಈ ವರೆಗೆ ಹೊಂದಿದ್ದ ಅಧಿಕ ದೂರ ವ್ಯಾಪ್ತಿ ಸಾಮರ್ಥ್ಯದ ಕ್ಷಿಪಣಿಯಾಗಿತ್ತು. ಚೀನಾದ ಪೂರ್ವ ಹಾಗೂ ಈಶಾನ್ಯ ವಲಯದ ಟಾರ್ಗೆಟ್ ತಲುಪುವ ಸಾಮರ್ಥ್ಯ ಅಗ್ನಿ-3ಕ್ಕೆ ಇಲ್ಲ. ಚೀನಾದ ಬಹುತೇಕ ಪ್ರಮುಖ ಆರ್ಥಿಕ ಕೇಂದ್ರಗಳು ಪೂರ್ವ ಸಮುದ್ರ ತೀರದಲ್ಲಿವೆ. ಹೀಗಾಗಿ ಚೀನಾದ ಆರ್ಥಿಕ ಕೇಂದ್ರಗಳ ವರೆಗೆ ತಲುಪುವ ಹೆಚ್ಚು ವ್ಯಾಪ್ತಿಯ ಕ್ಷಿಪಣಿ ಭಾರತಕ್ಕೆ ಅಗತ್ಯವಾಗಿತ್ತು. ಆ ಅವಶ್ಯಕತೆಯನ್ನು ಡಿಆರ್​ಡಿಒ ಪೂರೈಸಿದೆ.
ಅಗ್ನಿ ಸಾಮರ್ಥ್ಯ
ಚೀನಾದ ಸಂಪೂರ್ಣ ಭೂಭಾಗ, ರಷ್ಯಾದ ಬಹುತೇಕ ಪ್ರದೇಶ, ಆಫ್ರಿಕಾ ಖಂಡದ ಅರ್ಧ ಭಾಗದ ವರೆಗೆ ಅಗ್ನಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
