ಜೈಪುರ:ಮಧ್ಯರಾತ್ರಿಯಲ್ಲಿ ಡ್ರೋನ್​​​​ ಮೂಲಕ ಕೀಟ ನಾಶಕ ಸಿಂಪಡಿಸಿ ಮಿಡತೆಗಳ ಬೃಹತ್​ ಹಿಂಡನ್ನು ಅಧಿಕಾರಿಗಳು ನಾಶ ಮಾಡಿದ್ದಾರೆ.
ವಿರಾಟ್​ನಗರದ ಗುಡ್ಡಗಾಡು ಪ್ರದೇಶದಲ್ಲಿ ಶನಿವಾರ ರಾತ್ರಿ ಡ್ರೋನ್​​​​ ಮೂಲಕ ಮಿಡತೆಗಳನ್ನು ನಾಶ ಮಾಡಲಾಯಿತು. ಗುಡ್ಡಗಾಡು ಪ್ರದೇಶವಾದ್ದರಿಂದ ಟ್ರ್ಯಾಕ್ಟರ್​ ಮೂಲಕ ಕ್ರೀಮಿನಾಶ ಸಿಂಪಡಣೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಡ್ರೋಣ್​ ಬಳಸಬೇಕಾಯಿತು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿಕಾಲ್ನಡಿಗೆ, ಬಸ್​, ರೈಲು ಹಿಡಿದು ಊರಿಗೆ ಬಂದಾಯ್ತು…., ಮುಂದೇನು?
ವಿರಾಟ್​ನಗರದ ಮೂರು ಹಳ್ಳಿಗಳ 230 ಹೆಕ್ಟೇರ್​ ಪ್ರದೇಶದಲ್ಲಿ ಮಿಡತೆಗಳು ಇರುವುದು ಪತ್ತೆಯಾಯಿತು. ಈ ಪ್ರದೇಶ ಗುಡ್ಡವಾಗಿರುವುದರಿಂದ ಅಲ್ಲಿ ಕ್ರಿಮಿನಾಶಕ ಸಿಂಪಡಣೆ ಕಷ್ಟವಾಯಿತು. ಹೀಗಾಗಿ ಡ್ರೋನ್​​​​ ಬಳಸಲಾಗಿದೆ ಎಂದು ಜೈಪುರದ ಕೃಷಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
230 ಹೆಕ್ಟೇರ್​ ಪ್ರದೇಶದಲ್ಲಿ ಕೇವಲ 103 ಹೆಕ್ಟೇರ್​ ಪ್ರದೇಶದಲ್ಲಿ ಮಾತ್ರ ಕ್ರಿಮಿನಾಶಕ ಸಿಂಪಡಿಸಲಾಗಿದೆ.ಇದಕ್ಕಾಗಿ 50 ಲೀಟರ್​ ಕ್ರಿಮಿನಾಶಕ ಬಳಸಲಾಗಿದೆ. ಇದರಿಂದ ಶೇ.50 ರಷ್ಟು ಮಿಡತೆಗಳು ನಾಶವಾಗಿವೆ. ಈ ಪ್ರದೇಶದಲ್ಲಿ ಈಗಾಗಲೇ 2 ಬಾರಿ ಡ್ರೋನ್​​​​ ಮೂಲಕ ಕ್ರಿಮಿನಾಶಕ ಸಿಂಪಡಿಸಲಾಗಿದೆ. ಮಿಡತೆಗಳನ್ನು ಸಂಪೂರ್ಣವಾಗಿ ನಾಶ ಮಾಡುವವವರೆಗೂ ಕಾರ್ಯಾಚರಣೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿಕ್ರೇಜಿಸ್ಟಾರ್ ರವಿಚಂದ್ರನ್​ ಹೆಸರಿನಲ್ಲಿ ನಕಲಿ ಟ್ವಿಟರ್​ ಖಾತೆ!
26 ವರ್ಷಗಳ ನಂತರ ಜೈಪುರದಲ್ಲಿ ಮಿಡತೆಗಳು ಕಾಣಿಸಿಕೊಂಡಿವೆ, ರಾಜಸ್ತಾನದ 12 ಜಿಲ್ಲೆಗಳ 6.70 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ಬೆಳೆಯನ್ನು ನಾಶ ಮಾಡಿವೆ. ಇದರಿಂದ ಅಂದಾಜು ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)
ಕರೊನಾದ ಮತ್ತೊಂದು ತಲೆನೋವು: ಲಕ್ಷಣಗಳೇ ಇಲ್ಲದ ಶೇ.28 ಮಂದಿಗೆ ಸೋಂಕು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
