ಬೆಂಗಳೂರು:ಲಾಕ್​ಡೌನ್​ ಸಡಿಲಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಆರಂಭಕ್ಕೆ ಸಿದ್ಧತೆಗಳು ಆರಂಭವಾಗಿವೆ. ಪ್ರಥಮ ಪಿಯು ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಜೂನ್​ ಮೊದಲ ವಾರದಲ್ಲಿ ದ್ವಿತೀಯ ಪಿಯು ಇಂಗ್ಲಿಷ್​ ಪರೀಕ್ಷೆ ನಡೆಯುವ ಸಾಧ್ಯತೆ ಇದ್ದರೆ, ಎರಡನೇ ವಾರದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ನಡೆಸಲು ಚಿಂತನೆ ನಡೆದಿದೆ.
ಅತ್ತ, ಮಹಾರಾಷ್ಟ್ರದಲ್ಲಿ ವಿವಿಧ ತರಗತಿಗಳ ಯತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಅವಕಾಶ ನೀಡಲಾಗಿದ್ದು, ಶಿಕ್ಷಕರು ಈ ಉದ್ದೇಶಕ್ಕಾಗಿ ಪ್ರಯಾಣ ಕೈಗೊಳ್ಳಲು ನಿರ್ಬಂಧ ಸಡಿಲಿಸಲಾಗಿದೆ.
ಇದನ್ನೂ ಓದಿ;ಕರೊನಾ ನಿರ್ಮೂಲನಕ್ಕೆ ಔಷಧ ಸಿಗದೆಯೂ ಇರಬಹುದು…!
ಇನ್ನೊಂದೆಡೆ, ಮಿಜೋರಾಂನಲ್ಲಿ ಖಾಸಗಿ ಶಾಲಾ- ಕಾಲೇಜುಗಳು ಪಾಲಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿವೆ. ಶಾಲಾ ಶುಲ್ಕವನ್ನು ಶೇ.50 ಕಡಿಮೆ ಮಾಡಲು ಒಪ್ಪಿಕೊಂಡಿವೆ.
ಈ ಹಿಂದೆ ರಾಜ್ಯದ ಶಿಕ್ಷಣ ಸಚಿವ ಲಾಲ್​ಚಂದ್ಮಾ ರಾಲ್ಟೆ ಶುಲ್ಕ ವಿನಾಯ್ತಿಯನ್ನು ನೀಡುವಂತೆ ಖಾಸಗಿ ಶಾಲೆಗಳ ಒಕ್ಕೂಟವಾದ ಮಿಜೋರಾಂ ಇಂಡಿಪೆಂಡೆಂಟ್​ ಸ್ಕೂಲ್ಸ್​ ಅಸೋಸಿಯೇಷನ್​ಗೆ (ಮೀಸಾ) ಕೋರಿದ್ದರು. ಆದರೆ, ಸಿಬ್ಬಂದಿಗೆ ಸಂಬಳ ನೀಡಬೇಕಾದ ಕಾರಣ ಶುಲ್ಕ ಕಡಿತಕ್ಕೆ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ.
ಇದನ್ನೂ ಓದಿ;ಜಮ್ಮು ಮತ್ತು ಕಾಶ್ಮೀರದ ಮೂವರು ಛಾಯಾಗ್ರಾಹಕರಿಗೆ ಪುಲಿಟ್ಜರ್​ ಪ್ರಶಸ್ತಿ
ಖಾಸಗಿ ಶಾಲೆಗಳ ನಡೆಗೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಶುಲ್ಕ ಕಡಿಮೆ ಮಾಡುವುದಾಗಿ ತಿಳಿಸಿವೆ. ಆದರೆ, ಇದು ಲಾಕ್​ಡೌನ್​ ಅವಧಿಗೆ ಮಾತ್ರ ಅನ್ವಯಿಸಲಿದೆ. ವಿದ್ಯಾರ್ಥಿಗಳು ಈಗಾಗಲೇ ಶುಲ್ಕ ಪಾವತಿಸಿದ್ದರೆ, ಮುಂದಿನ ತಿಂಗಳ ಶುಲ್ಕ ಪಾವತಿಸಬೇಕಿಲ್ಲ ಎಂದು ಖಾಸಗಿ ಶಾಲೆಗಳ ಒಕ್ಕೂಟ ತಿಳಿಸಿದೆ.
ರಾಜ್ಯದಲ್ಲಿ ಇನ್ನೇನು ಪ್ರವೇಶಾತಿ ಪ್ರಕ್ರಿಯೆ ಆರಂಭಚಾಗಬೇಕಿದೆ. ಮಕ್ಕಳ ಶುಲ್ಕದಲ್ಲಿ ಕೊಂಚವಾದರೂ ವಿನಾಯ್ತಿ ನೀಡುತ್ತವೆಯೇ ಎಂಬ ನಿರೀಕ್ಷೆಯಲ್ಲಿದ್ದಾರೆ ಪಾಲಕರು.
ಜೂನ್​ 1ರ ಹೊತ್ತಿಗೆ ದಿನಕ್ಕೆ 3,000 ಸಾವು, 2 ಲಕ್ಷ ಹೊಸ ಪ್ರಕರಣ….!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + six =
Remember me
