ಕಚೇರಿಗೆ ಹೋಗುವುದನ್ನು ಹೊರತುಪಡಿಸಿ, ನಗರದಲ್ಲಿ ಎಲ್ಲೇ ಓಡಾಡುವುದಿದ್ದರೂ 2 ಕಿ.ಮೀ. ವ್ಯಾಪ್ತಿಯಲ್ಲೇ ಓಡಾಡುವುದು ಕಡ್ಡಾಯವಾಗಿದೆ. ಅಗತ್ಯ ಕೆಲಸಕಾರ್ಯಗಳಿಗೆ ಹೊರತುಪಡಿಸಿ ಅನಗತ್ಯವಾಗಿ ತಿರುಗಾಡುವುದು ಕಂಡುಬಂದರೆ ಕಾನೂನು ಪ್ರಕಾರ ಶಿಕ್ಷಿಸಲಾಗುತ್ತದೆ. ಹೊರಗೆ ತಿರುಗುವಾಗ ಮಾಸ್ಕ್​ ಧರಿಸಿರುವುದು ಕಡ್ಡಾಯವಾಗಿದೆ.
ಕೋವಿಡ್​-19 ರಾಜಧಾನಿ ಎನಿಸಿಕೊಂಡಿರುವ ಭಾರತದ ವಾಣಿಜ್ಯ ನಗರಿ ಮುಂಬೈನಲ್ಲಿ ಜಾರಿಗೆ ಬಂದಿರುವ ಹೊಸ ನಿಯಮಗಳು. ಏನೇ ಓಡಾಡುವುದಿದ್ದರೂ, ಅಗತ್ಯವಸ್ತುಗಳನ್ನು ಕೊಳ್ಳುವುದಿದ್ದರೂ, ಸಲೂನ್​, ಹೇರ್​ಕಟ್ಟಿಂಗ್​ ಶಾಪ್​ಗೆ ಹೋಗುವುದಿದ್ದರೂ ತಮ್ಮ ಮನೆಯ ಎರಡು ಕಿ.ಮೀ. ವ್ಯಾಪ್ತಿಯಲ್ಲೇ ಸಂಚರಿಸುವುದು ಕಡ್ಡಾಯವಾಗಿದೆ. ಆದರೆ ಕಚೇರಿಗೆ ಹೋಗುವವರಿಗೆ ಮತ್ತು ತುರ್ತು ವೈದ್ಯಕೀಯ ನಿಗಾದ ಅಗತ್ಯ ಇರುವವರಿಗೆ ಈ ನಿಯಮ ಅನ್ವಯಿಸುವುದಿಲ್ಲ.
ಇದನ್ನೂ ಓದಿ:ಗಲ್ವಾನ್​ ಕಣಿವೆಯ ಘರ್ಷಣೆಯಲ್ಲಿ ಸತ್ತ ಯೋಧರ ನಿಖರ ಲೆಕ್ಕವನ್ನ ಚೀನಾ ಕೊಡುತ್ತಿಲ್ಲ ಏಕೆ ಗೊತ್ತಾ?
ಅಂದಾಜು ಮೂರು ತಿಂಗಳ ಬಳಿಕ ಮುಂಬೈನಲ್ಲಿ ಅಂಗಡಿಮುಂಗಟ್ಟುಗಳು, ಸಲೂನ್​, ಹೇರ್​ಕಟ್ಟಿಂಗ್​ ಶಾಪ್​ಗಳು ಸೇರಿ ವಿವಿಧ ವಾಣಿಜ್ಯಾತ್ಮಕ ಚಟುವಟಿಕೆಗಳಿಗೆ ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಅದು ಹತ್ತು ನಿಯಮಗಳನ್ನು ಪಾಲಿಸುವ ಷರತ್ತನ್ನು ವಿಧಿಸಿದೆ.
ಅನಗತ್ಯವಾಗಿ ವಾಹನಗಳಲ್ಲಿ ಸಂಚರಿಸುವುದು ಕಂಡುಬಂದರೆ, ವಾಹನಗಳನ್ನು ಜಫ್ತಿ ಮಾಡಲಾಗುವುದು. ರಾತ್ರಿ 9ರಿಂದ ಬೆಳಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂವನ್ನು ಕಡ್ಡಾಯವಾಗಿ ಪಾಲಿಸಬೇಕು. ದೈಹಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್​ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಲಾಗಿದೆ.
ಪತ್ನಿ ದೂರವಾದ ಮೇಲೆ ಮೂರು ಮಕ್ಕಳನ್ನು ಕೊಂದವ ಆತ್ಮಹತ್ಯೆ ಶರಣಾದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 13 =
Remember me
