ವಾರಾಣಸಿ:ಲಂಡನ್​ನ ಲಾರ್ಡ್ಸ್​ ಕ್ರೀಡಾಂಗಣವನ್ನು ಕ್ರಿಕೆಟ್​ ಕಾಶಿ ಎನ್ನಲಾಗುತ್ತದೆ. ಆದರೆ ಇದೀಗ ಭಾರತದಲ್ಲೇ ‘ಕ್ರಿಕೆಟ್​ ಕಾಶಿ’ ನಿರ್ಮಾಣವಾಗುತ್ತಿದೆ! ಹೌದು, ಕಾಶಿ ವಿಶ್ವನಾಥನ ಥೀಮ್​ನಲ್ಲೇ ಹೊಸ ಕ್ರಿಕೆಟ್​ ಕ್ರೀಡಾಂಗಣವೊಂದು ನಿರ್ಮಾಣವಾಗುತ್ತಿದೆ. ತ್ರಿಶೂಲ, ಅರ್ಧಚಂದ್ರ, ಢಮರುಗ, ಬಿಲ್ವಪತ್ರೆಯ ವಿನ್ಯಾಸಗಳನ್ನು ಒಳಗೊಂಡ ಶಿವನ ಥೀಮ್​ನಲ್ಲೇ ಈ ಕ್ರೀಡಾಂಗಣದ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದ್ದು, ಇಂದು ಈ ಕ್ರೀಡಾಂಗಣ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಪ್ರಧಾನಿ ಮೋದಿ ಅವರ ಸಂಸದೀಯ ಕ್ಷೇತ್ರವಾಗಿರುವ ವಾರಣಾಸಿಯ ಕ್ರೀಡಾಂಗಣವನ್ನು ರಾಜತಾಲಬ್‌ನ ಗಂಜಾರಿ ಏರಿಯಾದಲ್ಲಿ 30 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.
ಇದನ್ನೂ ಓದಿ:ರಾಜಕೀಯ ಹಿತಾಸಕ್ತಿಗಾಗಿ ಕಾಂಗ್ರೆಸ್​ ರಾಜ್ಯದ ಹಿತವನ್ನು ಬಲಿಕೊಟ್ಟಿದೆ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕಿಡಿ

ಶಿವನ ತಲೆಯ ಮೇಲಿರುವ ಅರ್ಧಚಂದ್ರಾಕೃತಿಯಲ್ಲೇ ಕ್ರೀಡಾಂಗಣದ ಮೇಲ್ಛಾವಣಿಯ ವಿನ್ಯಾಸವಿರಲಿದೆ. ಫ್ಲಡ್​ಲೈಟ್​ಗಳನ್ನು ದೊಡ್ಡ ತ್ರಿಶೂಲದ ಆಕೃತಿಯ ಕಂಬಗಳಲ್ಲಿ ಅಳವಡಿಸಲಾಗುತ್ತದೆ.

ಮುಖ್ಯ ಪ್ರವೇಶ ದ್ವಾರದಲ್ಲಿರುವ ಪೆವಿಲಿಯನ್​ ಮತ್ತು ವಿಐಪಿ ಲಾಂಜ್​ಗಳ ಗುಮ್ಮಟವು ಶಿವನ ಕೈಯಲ್ಲಿರುವ ಢಮರುಗದ ರೀತಿಯಲ್ಲೇ ಇರಲಿದೆ. ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಗಳ ಆಸನ ವ್ಯವಸ್ಥೆಯನ್ನು ಕಾಶಿ ಘಾಟ್​ಗಳ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಗೇಟುಗಳು ಬಿಲ್ವ ಪತ್ರೆಯ ರೀತಿಯಲ್ಲಿ ಇರಲಿವೆ.
ಇದನ್ನೂ ಓದಿ:ನಿನ್ನ ಲವರ್​ ತಲೆ ತಂದಿದ್ದೇನೆ: ಅಕ್ರಮ ಸಂಬಂಧ ಇಟ್ಟುಕೊಂಡಿದ್ದವನ ತಲೆ ಕಡಿದು ಪತ್ನಿ ಮನೆಗೆ ಕೊಂಡೊಯ್ದ ಪತಿ

ಉತ್ತರ ಪ್ರದೇಶ ಸರ್ಕಾರವು ಕ್ರೀಡಾಂಗಣದ ಭೂಮಿಯ ಸ್ವಾಮ್ಯಕ್ಕಾಗಿ 120 ಕೋಟಿ ರೂ. ವ್ಯಯಿಸಿದೆ. ಕ್ರೀಡಾಂಗಣ ನಿರ್ಮಾಣಕ್ಕೆ ಬಿಸಿಸಿಐ 330 ಕೋಟಿ ರೂ. ಖರ್ಚು ಮಾಡಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ನಿರ್ಮಿಸಿದ ಎಲ್​ ಆಂಡ್​ ಟಿ ಕಂಪನಿಯೇ ಈ ಕ್ರೀಡಾಂಗಣದ ಕಾಮಗಾರಿಯನ್ನೂ ನಿರ್ವಹಿಸಲಿದೆ. ಒಟ್ಟು 30 ಸಾವಿರ ಪ್ರೇಕ್ಷಕರಿಗೆ ಆಸನ ವ್ಯವಸ್ಥೆ ಒಳಗೊಂಡಿರಲಿದೆ.

ಈ ಕ್ರೀಡಾಂಗಣ 2025ರ ಡಿಸೆಂಬರ್ ವೇಳೆಗೆ ಸಿದ್ಧವಾಗಲಿದೆ ಮತ್ತು ಕಾನ್ಪುರ ಮತ್ತು ಲಖನೌ ನಂತರ ಉತ್ತರ ಪ್ರದೇಶದ ಮೂರನೇ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಆಗಲಿದೆ.(ಏಜೆನ್ಸೀಸ್​)


ವಾರಾಣಸಿಯಲ್ಲಿ ಸಿದ್ಧವಾಗಲಿದೆ ಕ್ರಿಕೆಟ್​ ಕಾಶಿ! ತ್ರಿಶೂಲದಂತೆ ಫ್ಲಡ್​ಲೈಟ್​, ಢಮರುಗದಂತೆ ಪ್ರವೇಶ ದ್ವಾರ!

ವಿಶ್ವಕಪ್​​ ಆರಂಭಕ್ಕೂ ಮುನ್ನ ವಾಂಖೆಡೆ ಸ್ಟೇಡಿಯಂನ 2 ಸೀಟುಗಳು ಹರಾಜು! ಇದಕ್ಕೆ ಕಾರಣ ಧೋನಿ ಸಿಕ್ಸರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + three =
Remember me
