ನವದೆಹಲಿ:ರಾಜಧಾನಿ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಆಮ್​ ಆದ್ಮಿ ಪಕ್ಷ ಒಟ್ಟು 70 ಸ್ಥಾನಗಳಲ್ಲಿ 63ರಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದು, ಅಧಿಕೃತ ಬಾಕಿಯೊಂದೆ ಬಾಕಿ ಇದೆ. 7 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡು ಈ ಬಾರಿಯು ಬಿಜೆಪಿ ಅಧಿಕಾರದ ಗದ್ದುಗೆಯಿಂದ ಜಾರಿಕೊಳ್ಳುತ್ತಿದೆ. ಇದರ ನಡುವೆಯೇ ದೆಹಲಿ ಬಿಜೆಪಿ ಕಚೇರಿಯಲ್ಲಿ ಅವಳವಡಿಸಲಾಗಿರುವ ನಾಮಫಲಕವೊಂದು ಭಾರಿ ಸುದ್ದಿಯಾಗಿದೆ.
ಗೃಹ ಸಚಿವ ಅಮಿತ್​ ಷಾ ಫೋಟೋವನ್ನೊಳಗೊಂಡಂತೆ ದ್ವಂದ್ವಾರ್ಥ ಹೊಂದಿರುವ ಪೋಸ್ಟರ್ ಸಂದೇಶ ಭಾರಿ ಕುತೂಹಲ ಮೂಡಿಸಿದೆ.​ ಪೋಸ್ಟರ್​ನಲ್ಲಿರುವಂತೆ “ವಿಜಯೋತ್ಸವ ನಮ್ಮನ್ನು ಅಹಂಕಾರಿಗಳನ್ನಾಗಿ ಮಾಡುವುದಿಲ್ಲ ಮತ್ತು ಸೋಲು ನಮ್ಮನ್ನು ಹತಾಶೆಗೊಳಿಸುವುದಿಲ್ಲ” ಎಂದು ಬರೆಯಲಾಗಿದೆ. ಅಂದಹಾಗೆ ಅಮಿತ್​ ಷಾ ಅವರು ದೆಹಲಿ ಚುನಾವಣಾ ಪ್ರಚಾರದ ನೇತೃತ್ವವನ್ನು ವಹಿಸಿದ್ದರು.
ದೆಹಲಿಯಲ್ಲಿ ಆಪ್​ ಗದ್ದುಗೆ ಏರಲಿದೆ ಎಂದು ಎಕ್ಸಿಟ್​ ಪೋಲ್​ ಕೂಡ ಭವಿಷ್ಯ ನುಡಿದಿತ್ತು. ಅದರಂತೆ ಆಪ್​ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದು, ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಸಮೀಪದತ್ತ ಬಂದಿದೆ. ಒಟ್ಟು 70 ಸ್ಥಾನಗಳಲ್ಲಿ 63ರಲ್ಲಿ ಆಪ್​ ಹಾಗೂ 7 ರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದರೆ, ಕಾಂಗ್ರೆಸ್​ ಶೂನ್ಯ ಸಂಪಾದಿಸಿದ್ದು, ಅಧಿಕೃತ ಬಾಕಿಯೊಂದೆ ಉಳಿದಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + two =
Remember me
