ಪುಣೆ:ದೇಶದೆಲ್ಲೆಡೆ ಲಾಕ್​ಡೌನ್​ ಘೋಷಣೆಯಾಗುತ್ತಿದ್ದಂತೆ ಅಂತಾರಾಜ್ಯ, ಅಂತರ ಜಿಲ್ಲೆ ಗಡಿಗಳು ಬಂದ್​ ಆದವು, ದಿನ ಕಳೆದಂತೆ, ಗ್ರಾಮಸ್ಥರು ತಮ್ಮೂರಿನ ರಸ್ತೆಗಳನ್ನು ಬಂದ್​ ಮಾಡಿ ಗ್ರಾಮಗಳಿಗೆ ಪ್ರವೇಶ ನಿರ್ಬಂಧಿಸಿದರು. ಅತ್ತ ಉದ್ಯೋಗವೂ ಇಲ್ಲದೇ, ಮನೆಗೂ ತೆರಳಲಾಗದೇ ಸಾವಿರಾರು ವಲಸೆ ಕಾರ್ಮಿಕರು ತಾವಿದ್ದ ಸ್ಥಳಗಳಲ್ಲಿಯೇ ಬಂಧಿಯಾಗಿದ್ದಾರೆ. ಇದೀಗ, ಲಾಕ್​ಡೌನ್​ ನಿಯಮ ಸಡಿಲಿಸಲಾಗಿದ್ದು, ಒಂದೇ ರಾಜ್ಯದಲ್ಲಿ ಅದೂ ಕರೊನಾ ಹಾಟ್​ಸ್ಪಾಟ್​ ಆಗಿರದ ಸ್ಥಳವಾಗಿದ್ದರೆ ಕಾರ್ಮಿಕರು ಮೊದಲಿನ ಕೆಲಸದ ಸ್ಥಳಕ್ಕೆ ತೆರಳಬಹುದು ಎಂದು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಹೀಗಿದ್ದರೂ ಸದ್ಯಕ್ಕಂತೂ ಅವರಿಗೆ ಉದ್ಯೋಗ ಸಿಗುವ ಲಕ್ಷಣಗಳಂತೂ ಇಲ್ಲ.
ವಲಸೆ ಕಾರ್ಮಿಕರಿಗೆ ದಾನಿಗಳು, ಸರ್ಕಾರ ನೀಡುವ ಆಹಾರವೇ ಆಸರೆಯಾಗಿದೆ. ಆದರೆ, ಸರ್ಕಾರ ನೀಡುವ ಪಡಿತರ ಇನ್ನಿತರ ಸೌಲಭ್ಯ ಪಡೆಯಲು ಪಡಿತರ ಕಾರ್ಡ್​ ಅವಶ್ಯಕ. ಆದರೆ, ವಲಸೆ ಕಾರ್ಮಿಕರು, ನಿರಾಶ್ರಿತರ ಬಳಿ ಯಾವುದೇ ದಾಖಲೆಗಳಿಲ್ಲ. ಅದೇ ರಾಜ್ಯದವರಾದರೂ, ಊರಿಂದ ದೂರವಾದ ಕಾರಣ ಸರ್ಕಾರಿ ಸೌಲಭ್ಯ ಸಿಗುತ್ತಿಲ್ಲ. ಇಂಥವರಿಗೆ ನೆರವಾಗಲೆಂದೇ ಪುಣೆ ಜಿಲ್ಲಾ ಪಂಚಾಯತ್​ ವಿನೂತನ ಯೋಜನೆ ಪ್ರಾರಂಭಿಸಿದೆ. ಕಾರ್ಮಿಕರ ಆಧಾರ್​ ಮಾಹಿತಿ ಆಧರಿಸಿ ಅವರಿಗೆ ತಾತ್ಕಾಲಿಕ ಪಡಿತರ ಚೀಟಿ ನೀಡುತ್ತಿದೆ. ಗ್ರಾಮ ಪಂಚಾಯತ್​ ಮಟ್ಟದಲ್ಲಿ ಜನರ ಮನೆ ಬಾಗಿಲಿಗೆ ಪಡಿತರ ವಿತರಣೆಗೆ ಕ್ರಮಕೈಗೊಂಡಿದೆ.
ಪುಣೆ ಜಿಲ್ಲೆಯೊಂದರಲ್ಲಿಯೇ 80 ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರಿರುವುದನ್ನು ಪ್ರಾಥಮಿಕ ಸಮೀಕ್ಷೆಯಲ್ಲಿ ಪತ್ತೆಹಚ್ಚಲಾಗಿದೆ. ಇವರಿಗೆ ಅಂಚೆ ಇಲಾಖೆಯ ಪೇಮೆಂಟ್​ ಬ್ಯಾಂಕ್​ನಲ್ಲಿ ಆಧಾರ ಮಾಹಿತಿ ಆಧರಿಸಿ ಖಾತೆ ತೆರೆಯಲಾಗುತ್ತದೆ. ಇದಕ್ಕೆ ಒಂದು ನಿಮಿಷದ ಕಾಲಾವಧಿ ಸಾಕಾಗುತ್ತದೆ. ಇದರಿಂದ ಅವರು ಯಾವ ರಾಜ್ಯದವರು, ಅವರ ವಿಳಾಸ ಪತ್ತೆಹಚ್ಚಬಹುದು. ಇದನ್ನೇ ದಾಖಲೆಯಾಗಿ ಪಡೆದು ತಾತ್ಕಾಲಿಕ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. ವಲಸೆ ಕಾರ್ಮಿಕರನ್ನು ಗುರುತಿಸುವ ಕಾರ್ಯಕ್ಕಾಗಿ ಗ್ರಾಮ ಪಂಚಾಯತ್​ ಅಧ್ಯಕ್ಷರು, ಸದಸ್ಯರು ಹಾಗೂ ಪೊಲೀಸ್​ ಪಾಟೀಲ್​ರನ್ನು ಬಳಸಿಕೊಳ್ಳಲಾಗುತ್ತಿದೆ. ಪಡಿತರ ವಿತರಿಸಲು ಮಾಡಲಾಗುವ ಒಂದೇ ಪರಿಶೀಲನೆ ಎಂದರೆ ಅವರಿರುವ ಸ್ಥಳ ಅಥವಾ ಮನೆಯಲ್ಲಿ ಆಹಾರ ಧಾನ್ಯಗಳಿಲ್ಲ ಎನ್ನುವುದನ್ನು ನೋಡುವುದಷ್ಟೇ ಎಂದು ಜಿಪಂ ಸಿಇಒ ಆಯುಷ್​ ಪ್ರಸಾದ್​ ತಿಳಿಸಿದ್ದಾರೆ.
ರಾಷ್ಟ್ರೀಯ ಆಹಾರ ಖಾತರಿ ಯೋಜನೆಯಡಿ ಇಂಥ ಕಾರ್ಮಿಕರಿಗೆ ಅಥವಾ ವಲಸಿಗರಿಗೆ ಪಡಿತರ ನೀಡಲಾಗುತ್ತಿದೆ. ಅವರಿಗೆ ಆಹಾರ ಬೇಯಿಸಿಕೊಳ್ಳಲು ಅನುಕೂಲಗಳಿಲ್ಲ ಎಂದಾದರೆ ಊಟವನ್ನೇ ಸರಬರಾಜು ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕೇರಳದಲ್ಲಿ ಹೋಟೆಲ್​ಗಳು ಓಪನ್​, ಬಸ್​ ಸಂಚಾರವೂ ಶುರು; ಸರ್ಕಾರದ ಕ್ರಮಕ್ಕೆ ಕೆಂಡಾಮಂಡಲವಾಯ್ತೇ ಕೇಂದ್ರ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − one =
Remember me
