ನಾಗಪುರ:ಮೂರು ದಶಕಗಳಿಗೂ ಹೆಚ್ಚು ಕಾಲ ಉಬ್ಬಿದ ಹೊಟ್ಟೆ ಹೊಂದಿದ್ದ 60 ವರ್ಷದ ನಾಗ್ಪುರದ ವ್ಯಕ್ತಿಯೊಬ್ಬರು ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದ್ದಾರೆ. ಅವರ ಹೊಟ್ಟೆಯಲ್ಲಿ ಅವಳಿ ಬ್ರೂಣ ಪತ್ತೆಯಾಗಿದ್ದು, ಇದು ಗರ್ಭಾವಸ್ಥೆಯಲ್ಲೇ ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ.
ಈ ಅಪರೂಪದ ದೈಹಿಕ ಸ್ಥಿತಿಯನ್ನು ಫೀಟಸ್ ಇನ್ ಫೆಟು ಎಂದು ಕರೆಯಲಾಗುತ್ತದೆ. 1999ರಲ್ಲೇ ಹೊಟ್ಟೆಯ ಉಬ್ಬರ ಕಾಣಿಸಿಕೊಂಡಿತು. ಉಸಿರಾಡಲು ಕಷ್ಟವಾದಾಗ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಯಿತು. ವ್ಯಕ್ತಿ ಹೊಟ್ಟೆಯಲ್ಲಿ ಗಡ್ಡೆ ಬೆಳೆದಿದೆ ಎಂದು ಮೊದಲು ವೈದ್ಯರು ಊಹಿಸಿದರು. ಆದರೆ ಚಿಕಿತ್ಸೆ ಆರಂಭಿಸಿದ ನಂತರ ವ್ಯಕ್ತಿಯ ಹೊಟ್ಟೆಯಲ್ಲಿ ಬ್ರೂಣ ಇರುವುದು ವೈದ್ಯರಿಗೆ ಕಂಡುಬಂತು.
ಇದನ್ನೂ ಓದಿ:ಓಲಾ ಇವಿಗೆ 15,000 ರೂ. ದಂಡ: ಫ್ಯಾನ್ಸಿ ಬದಲು ಬೇರೆ ಸಂಖ್ಯೆ ನೋಂದಣಿ; 25,000 ರೂ. ಮರುಪಾವತಿಗೆ ಆದೇಶ

ಶಸ್ತ್ರಚಿಕಿತ್ಸೆ ಮೂಲಕ ಈಗ ಅದನ್ನು ಹೊರತೆಗೆಯಲಾಗಿದೆ. ಬ್ರೂಣದಲ್ಲಿ ಕೂದಲಿನ ಭಾಗಗಳು, ದವಡೆಗಳು, ಕೈಕಾಲುಗಳು, ಜನನಾಂಗದ ಭಾಗಗಳು ಇದ್ದವು. ‘ಇದು ನಮಗೆ ಆಘಾತಕಾರಿ ಸಂಗತಿಯಾಗಿತ್ತು. ನಾವು ಕೆಲಕಾಲ ಗಾಬರಿ, ಗೊಂದಲಕ್ಕೀಡಾದೆವು’ ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ.
ಫೆಟಸ್-ಇನ್-ಫೀಟು (ಎಫ್​ಐಎಫ್) ಅಪರೂಪದ ಘಟನೆಯಾಗಿದೆ. ಒಂದು ದೋಷಪೂರಿತ ಕಶೇರುಕ ಭ್ರೂಣವು ದೇಹದೊಳಗೆ ಸುತ್ತುವರಿಯಲ್ಪಟ್ಟಿದೆ. ಈವರೆಗೆ ವಿಶ್ವದಲ್ಲೇ 100ಕ್ಕಿಂತ ಕಡಿಮೆ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)
ತಾಯಿ ಪ್ರೀತಿಗೆ ಮೋಸ ಮಾಡಬಾರದು: ಮಕ್ಕಳ ಕಥೆ

ಜೀವನ ಶಿಕ್ಷಣ ನೀಡುವ ಹಾಸ್ಟೆಲ್; ವಿದ್ಯಾರ್ಥಿ ನಿಲಯದ ಬದುಕು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 4 =
Remember me
