ಲೂಧಿಯಾನ :ದೂರವಾಗಿದ್ದ ಗಂಡನನ್ನು ಮತ್ತೆ ತನ್ನವನನ್ನಾಗಿಸಿಕೊಳ್ಳಬೇಕೆಂಬ ಬಯಕೆಯಿಂದ 19 ವರ್ಷ ವಯಸ್ಸಿನ ಎರಡು ಮಕ್ಕಳ ತಾಯಿ, ಏಕಾಕಿಯಾಗಿ ಬಿಹಾರದ ಪಾಟ್ನದಿಂದ ಪಂಜಾಬ್​ನ ಲೂಧಿಯಾನವರೆಗೆ ಪ್ರಯಾಣ ಬೆಳೆಸಿದ ಕಥೆಯಿದು. ಗಂಡ ಕೆಲಸ ಮಾಡುವ ಪ್ರದೇಶದ ಹೆಸರು ಮತ್ತು ಅವನ ಮೊಬೈಲ್​ ಸಂಖ್ಯೆಯ ಒಂಭತ್ತೇ ಅಂಕಿಗಳನ್ನು ಮಾತ್ರ ತಿಳಿದಿದ್ದ ಈ ಯುವತಿಯನ್ನು ಲೂಧಿಯಾನ ಪೊಲೀಸರು ಗುರಿ ಮುಟ್ಟಿಸಿದ್ದಾರೆ.
ಹದಿನೈದನೇ ವರ್ಷಕ್ಕೇ ಮದುವೆಯಾಗಿ ಎರಡು ಮಕ್ಕಳ ತಾಯಾಗಿದ್ದ ಈ ಯುವತಿ ಬಿಹಾರದ ಪಟ್ನಾ ನಿವಾಸಿ. ಕೆಲವು ತಿಂಗಳ ಹಿಂದೆ ಅದೇನೋ ವಿರಸದಿಂದಾಗಿ ಗಂಡ ಅವಳನ್ನು ತವರುಮನೆಯಲ್ಲಿ ಬಿಟ್ಟು ತನಗೆ ನೀನು ಬೇಡ ಎಂದು ಹೇಳಿ ನಡೆದೇಬಿಟ್ಟಿದ್ದ. ಲೂಧಿಯಾನದ ಸೇಲಂ ತಬ್ರಿ ಎಂಬಲ್ಲಿ ಕೆಲಸ ಮಾಡುತ್ತಾನೆ ಎಂದಷ್ಟೇ ತಿಳಿದಿದ್ದ ಯುವತಿ, ಕೆಲವು ದಿನಗಳ ಹಿಂದೆ ಮನೆಯವರಿಗೂ ಹೇಳದೆ, ಗಂಡನನ್ನು ಅರಸಿ ಹೊರಟಳು ಎನ್ನಲಾಗಿದೆ.
ಇದನ್ನೂ ಓದಿ:ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ಕೋಕಾಕೋಲಾ ಬಾಟಲಿ ಬದಿಗೆ ಸರಿಸಲಿಲ್ಲವೆಂದು ಬೇಸರಿಸಿದ ಫ್ಯಾನ್ಸ್!
ಆಕೆಯ ಕೈಯಲ್ಲಿ ಹಣವಾಗಲಿ, ಮೊಬೈಲಾಗಲಿ, ಕೊನೇ ಪಕ್ಷ ಟ್ರೈನ್ ಟಿಕೆಟ್ಟಾಗಲೀ ಇರಲಿಲ್ಲ. ಆದರೂ ಜೂನ್ 13 ರಂದು ಲೂಧಿಯಾನ ತಲುಪಿದ ಈಕೆ, ಸೇಲಂ ತಬ್ರಿ ಬಡಾವಣೆಯಲ್ಲಿ ತನ್ನ ಗಂಡನ ಹೆಸರು ಹೇಳುತ್ತಾ ಹುಡುಕಾಟ ಆರಂಭಿಸಿದಳು. ಈಕೆ ಹೀಗೆ ಅಲೆದಾಡುತ್ತಿರುವುದನ್ನು ಗಮನಿಸಿದ ಬುದ್ಧ ದೇಬ್ ಎಂಬ ಸಜ್ಜನರೊಬ್ಬರು ಆಕೆಗೆ ಮನೆಯಲ್ಲಿ ಆಶ್ರಯ ನೀಡಿ, ಮಾರನೇ ದಿನ ಪೊಲೀಸರಿಗೆ ಮಾಹಿತಿ ನೀಡಿದರು ಎನ್ನಲಾಗಿದೆ.
ಈಕೆಯ ಅಳಲನ್ನು ಕೇಳಿದ ಲೂಧಿಯಾನ ನಗರ ಪೊಲೀಸರು, ಗಂಡನ 9 ಅಂಕಿ ನಂಬರನ್ನೇ ಸುಳಿವಾಗಿ ಪರಿಗಣಿಸಿ ಪತ್ತೆ ಕಾರ್ಯ ಆರಂಭಿಸಿದರು. ನಂಬರ್​ಗಳನ್ನು ಸಾಧ್ಯತೆಯನ್ನು ಊಹಿಸುತ್ತಾ ಟ್ರೇಸ್​ ಮಾಡಿ, ಫೋನ್ ಬಳಕೆದಾರರ ಫೋಟೋಗಳನ್ನು ಅವಳಿಗೆ ತೋರಿಸಲಾಯಿತು. ಹಾಗೇ ಅವಳು ಒಂದು ಫೋಟೋ ತನ್ನ ಗಂಡನದೆಂದು ಗುರುತಿಸಿದಳು. ಸ್ಥಳೀಯ ಕಬ್ಬಿಣದ ಫ್ಯಾಕ್ಟರಿಯಲ್ಲಿ ಕಾರ್ಮಿಕನಾಗಿರುವ ಆತನ ವಿಳಾಸ ಹುಡುಕಿ 6-7 ಗಂಟೆಗಳೊಳಗೆ ಪತಿಪತ್ನಿಯನ್ನು ಭೇಟಿ ಮಾಡಿಸಲಾಯಿತು ಎಂದು ಹೆಚ್ಚುವರಿ ಡಿಸಿಪಿ ಪ್ರಗ್ಯಾ ಜೈನ್ ವಿವರಿಸಿದ್ದಾರೆ.
ಇದನ್ನೂ ಓದಿ:ರಾತ್ರೋರಾತ್ರಿ ಫೇಮಸ್‌ ಆಗಿದ್ದ ‘ಬಾಬಾ ಕಾ ಡಾಬಾ’ ಮಾಲೀಕ ಆತ್ಮಹತ್ಯೆಗೆ ಯತ್ನ: ಪರಿಸ್ಥಿತಿ ಗಂಭೀರ
ಇಷ್ಟು ಕಷ್ಟಪಟ್ಟು ಹುಡುಕಿದ ನಂತರ ಗಂಡನು, ಮೊದಲಿಗೆ ತನಗೆ ಅವಳೊಂದಿಗೆ ಬದುಕಲು ಇಷ್ಟವಿಲ್ಲ ಎಂದ. ಆದರೆ ಕೆಲವು ಸ್ಥಳೀಯರು ಮತ್ತು ಪೊಲೀಸರು ಬುದ್ಧಿ ಹೇಳಿದರು. ಈಗ ಗಂಡಹೆಂಡತಿ ಒಟ್ಟಿಗೆ ಇದ್ದು, ತಮ್ಮ ಮಕ್ಕಳನ್ನು ಬಿಹಾರದಿಂದ ಕರೆಸಿಕೊಳ್ಳುವ ಬಗ್ಗೆ ವಿಚಾರ ಮಾಡುತ್ತಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)
ಡ್ಯಾಮೇಜಿಂಗ್ ಹೇಳಿಕೆ ಕೊಡುವವರಿಗೆ ಕಡಿವಾಣ ಹಾಕಿ : ಕೋರ್​ ಕಮಿಟಿ ಸಭೆಯಲ್ಲಿ ಸದಾನಂದ ಗೌಡ

ಹೌಸಿಂಗ್​ ಸೊಸೈಟಿಯಲ್ಲಿ ಅನಧಿಕೃತ ಲಸಿಕಾ ಕಾರ್ಯಕ್ರಮ : ನಾಲ್ವರ ಬಂಧನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − two =
Remember me
