ಮುಂಬೈ:ಇಲ್ಲಿನ ಸಿಯಾನ್​ ಆಸ್ಪತ್ರೆಯಲ್ಲಿ ಕರೊನಾ ಸೋಂಕಿನಿಂದ ಮೃತಪಟ್ಟವರ ದೇಹಗಳ ಪಕ್ಕದಲ್ಲೇ ಇತರ ಸೋಂಕಿತರಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದ ಆಘಾತಕಾರಿ ವಿಡಿಯೋ ಇದೀಗ ಬಹಿರಂಗವಾಗಿದೆ.
ಬೃಹನ್ಮುಂಬೈ ಮಹಾನಗರ ಪಾಲಿಕೆ ನಿರ್ವಹಣೆಯ ಸಿಯಾನ್​ ಆಸ್ಪತ್ರೆಯಲ್ಲಿ ಈ ದೃಶ್ಯ ಕಂಡುಬಂದಿದೆ. ಈ ದೃಶ್ಯವನ್ನು ಮೊಬೈಲ್​ಫೋನ್​ನಲ್ಲಿ ಚಿತ್ರೀಕರಿಸಿರುವವರ ಪ್ರಕಾರ, ಒಟ್ಟು 7 ಶವಗಳನ್ನು ಬಾಡಿಬ್ಯಾಗ್​ನಲ್ಲಿ ಕಟ್ಟಿ, ಅಂತ್ಯಸಂಸ್ಕಾರಕ್ಕಾಗಿ ಸಜ್ಜುಗೊಳಿಸಿ, ಹಾಸಿಗೆ ಮೇಲೆಯೇ ಬಿಡಲಾಗಿತ್ತು. ಇವುಗಳ ನಡುವೆಯೇ ಪಕ್ಕದ ಹಾಸಿಗೆಯಲ್ಲಿದ್ದ ಇತರ ಸೋಂಕಿತರಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಸಂಕಷ್ಟ ಕಾಲದಲ್ಲಿ ಬುದ್ಧನ ಸಂದೇಶವೇ ಭಾರತಕ್ಕೆ ದಾರಿದೀಪ, ಕರೊನಾ ವಾರಿಯರ್ಸ್​ಗೆ ಧನ್ಯವಾದ: ಪ್ರಧಾನಿ ಮೋದಿ
ಮಹಾರಾಷ್ಟ್ರ ವಿಧಾನಸಭೆಯಲ್ಲಿನ ಪ್ರತಿಪಕ್ಷ ಬಿಜೆಪಿಯ ಶಾಸಕ ನಿತೀಶ್​ ರಾಣೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ಇದೆಂಥ ಆಡಳಿತ… ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಯಾನ್​ ಆಸ್ಪತ್ರೆಯ ಡೀನ್​ ಪ್ರಮೋದ್​ ಇಂಗಾಳೆ, ಕರೊನಾ ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲು ಸಜ್ಜುಗೊಳಿಸಲಾಗಿತ್ತು. ಆದರೆ, ಶವಗಳನ್ನು ಕೊಂಡೊಯ್ಯಲು ಸಂಬಂಧಿಕರು ನಿರಾಕರಿಸಿದ್ದರಿಂದ ಅವುಗಳನ್ನು ಹಾಸಿಗೆ ಮೇಲೆ ಬಿಡಲಾಗಿತ್ತು. ಇದೀಗ ಶವಗಳನ್ನು ತೆರವುಗೊಳಿಸಲಾಗಿದೆ. ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಲಾಕ್​ಡೌನ್​ ಮಧ್ಯೆ ಗುಜರಾತ್​ನ ದೇವಸ್ಥಾನದಲ್ಲಿ ಕಂತೆ ಕಂತೆ ನಕಲಿ ನೋಟುಗಳು ವಶ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ!
ಶವಗಳನ್ನು ಶವಾಗಾರಕ್ಕೆ ಸ್ಥಳಾಂತರಿಸಲು ವಿಳಂಬವಾದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಆಸ್ಪತ್ರೆಯ ಶವಗಾರದಲ್ಲಿ 15 ಶವಗಳನ್ನು ಇರಿಸಲು ಸ್ಥಳಾವಕಾಶವಿದೆ. ಇವುಗಳಲ್ಲಿ 11 ಸ್ಥಾನಗಳು ಭರ್ತಿಯಾಗಿದ್ದವು. ಕೋವಿಡ್​ 19 ಬಿಟ್ಟು ಅನ್ಯಕಾರಣಗಳಿಗೆ ಸತ್ತವರ ಶವಗಳು ಅವಾಗಿದ್ದವು. ಅವುಗಳ ನಡುವೆ ಕರೊನಾ ಸೋಂಕಿತರ ಶವಗಳನ್ನು ಇರಿಸಿದರೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಶವಗಳನ್ನು ತೆರವುಗೊಳಿಸಲು ವಿಳಂಬವಾಯಿತು ಎಂದು ಹೇಳಿದ್ದಾರೆ.
ಶವಗಳನ್ನು ತೆರವುಗೊಳಿಸಲು ಮೃತರ ಸಂಬಂಧಿಕರ ಅನುಮತಿಯ ನಿರೀಕ್ಷೆಯಲ್ಲಿದ್ದಾಗ ಈ ವಿಡಿಯೋವನ್ನು ಚಿತ್ರೀಕರಿಸಿರುವ ಸಾಧ್ಯತೆ ಇದೆ ಎಂದು ಆಸ್ಪತ್ರೆಯ ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರೆ.
ಶವವನ್ನು ಬಾಡಿಪ್ಯಾಕ್​ನಲ್ಲಿ ಪ್ಯಾಕ್​ ಮಾಡಿದ ಬಳಿಕ ಸೋಂಕು ಹರಡುವ ಸಾಧ್ಯತೆಗಳು ಇರುವುದಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಈ ಸ್ಪಷ್ಟನೆಯ ಬಳಿಕವೂ ಶವಗಳಿದ್ದ ಅಕ್ಕಪಕ್ಕದ ಹಾಸಿಗೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಆತಂಕ ದೂರವಾಗಿರಲಿಲ್ಲ ಎನ್ನಲಾಗಿದೆ.
ರಸ್ತೆ ಕೆಲಸ ಮಾಡಿಸಿಕೊಡಿ ಎಂದು ಕೇಳಲು ಬಂದ ಪುರಸಭೆ ಸದಸ್ಯೆಯ ಪುತ್ರನಿಗೆ ಶಾಸಕರಿಂದ ಖಡಕ್​ ಎಚ್ಚರಿಕೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
