ಅಹಮದಾಬಾದ್:ಕಳೆದ ಆರು ತಿಂಗಳಲ್ಲಿ ಗುಜರಾತ್‌ನಲ್ಲಿ ಒಟ್ಟು 1,052 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ, ಅಚ್ಚರಿಯ ಹಾಗೂ ಆಘಾತಕಾರಿ ಸಂಗತಿ ಎಂದರೆ, ಈ ಪೈಕಿ ಶೇಕಡಾ 80ರಷ್ಟು ಜನರು 11-25 ವಯಸ್ಸಿನವರು…
ರಾಜ್ಯದ ಶಿಕ್ಷಣ ಸಚಿವ ಕುಬೇರ್ ದಿಂಡೋರ್ ಅವರೇ ಈ ವಿಷಯ ಬಹಿರಂಗಪಡಿಸಿದ್ದಾರೆ.
ಹೆಚ್ಚುತ್ತಿರುವ ಹೃದಯಾಘಾತಗಳನ್ನು ಗಮನದಲ್ಲಿಟ್ಟುಕೊಂಡು, ಎರಡು ಲಕ್ಷ ಶಾಲಾ ಶಿಕ್ಷಕರು ಮತ್ತು ಕಾಲೇಜು ಪ್ರಾಧ್ಯಾಪಕರಿಗೆ ಕಾರ್ಡಿಯೋಪಲ್ಮನರಿ ರೆಸುಸಿಯೇಶನ್​ (ಹೃದಯ ರಕ್ತನಾಳ ಪುನರುಜ್ಜೀವನ- ಸಿಪಿಆರ್) ಮಾಡುವ ಕುರಿತು ತರಬೇತಿ ನೀಡಲಾಗುವುದು, ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸುವಲ್ಲಿ ಸಿಪಿಆರ್​ ಮಹತ್ವದ ಪಾತ್ರ ವಹಿಸುತ್ತದೆ ಎಂದು ಕುಬೇರ್ ಹೇಳಿದ್ದಾರೆ.
ಮಾಧ್ಯಮದವರ ಜತೆ ಇಲ್ಲಿ ಮಾತನಾಡಿದ ಅವರು, “ಗುಜರಾತ್‌ನಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಹೃದಯಾಘಾತದಿಂದ 1,052 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ ಅಂದಾಜು 80 ಪ್ರತಿಶತದಷ್ಟು ಜನರು 11 ರಿಂದ 25 ವರ್ಷ ವಯಸ್ಸಿನವರಾಗಿದ್ದಾರೆ. ಈ ವಿದ್ಯಾರ್ಥಿಗಳು ಮತ್ತು ಯುವಕರು ಸ್ಥೂಲಕಾಯ ಕೂಡ ಆಗಿರಲಿಲ್ಲ. 108 ಆಂಬ್ಯುಲೆನ್ಸ್ ಸೇವೆಯು ದಿನಕ್ಕೆ 173 ಹೃದಯ ತುರ್ತು ಕರೆಗಳನ್ನು ಸ್ವೀಕರಿಸುತ್ತದೆ” ಎಂದಿದ್ದಾರೆ.
“ಕಳೆದ ಆರು ಅಥವಾ ಏಳು ತಿಂಗಳುಗಳಲ್ಲಿ ಕ್ರಿಕೆಟ್ ಆಡುವಾಗ ಅಥವಾ ಗರ್ಬಾದಲ್ಲಿ (ನವರಾತ್ರಿ ಉತ್ಸವಗಳಲ್ಲಿ ಜನಪ್ರಿಯವಾಗಿರುವ ಸಾಂಪ್ರದಾಯಿಕ ನೃತ್ಯ ಪ್ರಕಾರ) ಭಾಗವಹಿಸುವಾಗ ಹೃದಯಾಘಾತದಿಂದ ಜನರು ಹೇಗೆ ಸತ್ತರು ಎಂಬುದನ್ನು ನಾವು ನೋಡಿದ್ದೇವೆ. ಈ ಸಿಪಿಆರ್ ತರಬೇತಿ ಶಿಬಿರದಲ್ಲಿ ಭಾಗವಹಿಸುವಂತೆ ನಾನು ಶಿಕ್ಷಕರನ್ನು ಕೋರುತ್ತೇನೆ. ಇದರಿಂದ ಅವರು ಜೀವ ಉಳಿಸಬಹುದು ಎಂದು ಸಚಿವರು ಹೇಳಿದರು.
ರಾಜ್ಯ ಶಿಕ್ಷಣ ಇಲಾಖೆಯ ಈ ಯೋಜನೆಯಲ್ಲಿ, ಅಂದಾಜು ಎರಡು ಲಕ್ಷ ಶಾಲಾ ಕಾಲೇಜು ಶಿಕ್ಷಕರಿಗೆ ತರಬೇತಿ ನೀಡಲು ಡಿಸೆಂಬರ್ 3 ಮತ್ತು 17 ರ ನಡುವೆ 37 ವೈದ್ಯಕೀಯ ಕಾಲೇಜುಗಳಲ್ಲಿ ಸಿಪಿಆರ್ ತರಬೇತಿ ಶಿಬಿರಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.
ಈ ತರಬೇತಿ ಶಿಬಿರಗಳಲ್ಲಿ 2,500 ವೈದ್ಯಕೀಯ ತಜ್ಞರು ಮತ್ತು ವೈದ್ಯರು ಉಪಸ್ಥಿತರಿರುತ್ತಾರೆ. ಭಾಗವಹಿಸುವವರಿಗೆ ಪ್ರಮಾಣಪತ್ರಗಳನ್ನು ಸಹ ನೀಡಲಾಗುವುದು ಎಂದು ಡಿಂಡೋರ್ ತಿಳಿಸಿದರು.
ಮಿಚೌಂಗ್​ ಚಂಡಮಾರುತದ ಅಪಾಯ; ತಮಿಳುನಾಡಿನಲ್ಲಿ ಹೈ ಅಲರ್ಟ್​, ರೈಲು ಸಂಚಾರ ರದ್ದು

ವಿವಿಧ ರಾಜ್ಯಗಳಲ್ಲಿ ಎನ್​ಐಎ ದಾಳಿ: ನಕಲಿ ನೋಟು ಜಾಲದಲ್ಲಿನ ಬಳ್ಳಾರಿ ವ್ಯಕ್ತಿ ಯಾರು?

ಲೋಕಸಭೆ ಚುನಾವಣೆಯ ಸೆಮಿಫೈನಲ್​ ಫಲಿತಾಂಶ ಶೀಘ್ರ; ಮತ ಎಣಿಕೆಯಲ್ಲಿ ವಿಜಯಮಾಲೆ ಯಾರಿಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − nine =
Remember me
